ಟ್ರಕ್ ಮುಷ್ಕರ ವಾಪಸ್- ಕೊನೆಗೂ ಕೇಂದ್ರ ಮಧ್ಯಪ್ರವೇಶಿಸಿ ಭರವಸೆ, ಮುಷ್ಕರ ಹಿಂದಕ್ಕೆ
ಹಿಟ್ ಆ್ಯಂಡ್ ರನ್‌ಗೆ ಭಾರೀ ಶಿಕ್ಷೆ ವಿರುದ್ಧ 6 ರಾಜ್ಯಗಳಲ್ಲಿ ರಸ್ತೆ ತಡೆ
Team Udayavani, Jan 3, 2024, 1:10 AM IST
ಹೊಸದಿಲ್ಲಿ: ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಏಳು ಲಕ್ಷ ರೂ. ದಂಡ ಮತ್ತು 10 ವರ್ಷ ಜೈಲು ಶಿಕ್ಷೆ ಎಂಬ ಕೇಂದ್ರ ಸರಕಾರದ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಟ್ರಕ್ ಮಾಲಕರ ಮುಷ್ಕರ ಮಂಗಳವಾರ ರಾತ್ರಿ ಮುಕ್ತಾಯವಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ಪಡೆದಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ ಶಿಕ್ಷೆಯ ಈ ಅಂಶ ಉಲ್ಲೇಖಗೊಂಡಿದೆ.
ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತು ಅಖೀಲ ಭಾರತ ಮೋಟಾರ್ ಟ್ರಾನ್ಸ್‌ಪೊàರ್ಟ್ ಕಾಂಗ್ರೆಸ್ (ಎಐಎಂಟಿಸಿ) ನಡುವೆ ನಡೆದ ಸಂಧಾನ ಮಾತುಕತೆ ಬಳಿಕ ಮುಷ್ಕರ ಮುಕ್ತಾಯ ಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು. ಈ ಬಗ್ಗೆ ಮಾತನಾಡಿದ ಎಐಎಂಟಿಸಿ ಅಧ್ಯಕ್ಷ ಮಲ್ಕಿತ್ ಸಿಂಗ್ ಭಾಲ್, ಹೊಸ ಕಾಯ್ದೆಗಳನ್ನು ಇನ್ನೂ ಜಾರಿ ಮಾಡ ಲಾಗಿಲ್ಲ. ಕೇಂದ್ರ ಗೃಹ ಕಾರ್ಯದರ್ಶಿಯವರ ಜತೆಗಿನ ಮಾತುಕತೆಯಲ್ಲಿ ಎಲ್ಲ ವಿವಾದಾತ್ಮಕ ಅಂಶಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು.
ಹೊಸ ಕಾಯ್ದೆಯ ಅಂಶಗಳ ಜಾರಿಗೆ ಮುನ್ನ ಎಐಎಂಟಿಸಿ ಜತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವು ದಾಗಿ ಕೇಂದ್ರ ಸರಕಾರ ವಾಗ್ಧಾನ ಮಾಡಿದೆ. ಹೀಗಾಗಿ ಪ್ರತಿಭಟನೆ ವಾಪಸ್ ಪಡೆಯಲಾಗಿದೆ ಎಂದರು.
ಹಲವೆಡೆ ಭಾರೀ ಪ್ರತಿಭಟನೆ
ಇದಕ್ಕೆ ಮುನ್ನ ಕೇಂದ್ರ ಸರಕಾರದ ಹೊಸ ಕಾಯ್ದೆಗೆ ಉತ್ತರ ಭಾರತದ ಆರು ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಕೆಲವೆಡೆ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ದೇಶದಾದ್ಯಂತ ತೈಲೋತ್ಪನ್ನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬ ಭೀತಿಯಿಂದ ವಾಹನ ಮಾಲಕರು ಬಂಕ್‌ಗಳಲ್ಲಿ ಟ್ಯಾಂಕ್ ಭರ್ತಿ ಮಾಡಿಕೊಳ್ಳಲು ಸಾಲುಗಟ್ಟಿ ನಿಂತಿದ್ದರು.
ರಾಜಸ್ಥಾನದ ಹಲವೆಡೆ ಹೊಸ ಕಾಯ್ದೆ ವಿರುದ್ಧ ಟ್ಯಾಂಕರ್ ಮತ್ತು ಸರಕು ಸಾಗಣೆ ಮಾಲಕರು ಪ್ರತಿಭಟನೆ ನಡೆಸಿದ್ದಾರೆ. ಕಂಕೇರ್ ಜಿಲ್ಲೆಯಲ್ಲಿ ಲಾರಿ ಮಾಲಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗುಂಪೊಂದು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದೆ. ಜತೆಗೆ ಕರ್ತವ್ಯ ನಿರತರಾಗಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದಾಗಿ ಮೂವರು ಪೊಲೀಸರು ಗಾಯ ಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ಬಂಕ್‌ಗಳಲ್ಲಿ “ನೋ ಸ್ಟಾಕ್” ಬೋರ್ಡ್ ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.