Kaatera: ನಮ್ಮ ಮಣ್ಣಿನ ಕಥೆಗೆ ಮೊದಲ ಆದ್ಯತೆ; ಕಾಟೇರ ಗೆಲುವು ಮತ್ತು ದರ್ಶನ್‌ ಒಲವು

Team Udayavani, Jan 3, 2024, 1:10 PM IST

6-darshan

ದರ್ಶನ್‌ ನಾಯಕರಾಗಿರುವ “ಕಾಟೇರ’ ಚಿತ್ರ ದೊಡ್ಡಮಟ್ಟದಲ್ಲಿ ಹಿಟ್‌ ಆಗುವ ಮೂಲಕ ಇಡೀ ಚಿತ್ರರಂಗಕ್ಕೆ ಒಂದು ಹೊಸ ಜೋಶ್‌ ಬಂದಿದೆ. ಕಲೆಕ್ಷನ್‌ ವಿಚಾರದಲ್ಲಿ ದಿನದಿಂದ ದಿನಕ್ಕೆ ಕಾಟೇರ ಸದ್ದು ಮಾಡುತ್ತಲೇ ಇದೆ. ಇದೇ ಖುಷಿಯಲ್ಲಿ ಚಿತ್ರತಂಡ ಇತ್ತೀಚೆಗೆ ಮಾಧ್ಯಮ ಮುಂದೆ ಬಂದಿತ್ತು. ಈ ವೇಳೆ ನಾಯಕ ದರ್ಶನ್‌ ಮನಬಿಚ್ಚಿ ಮಾತನಾಡಿದ್ದಾರೆ. ಅದನ್ನು ಅವರದ್ದೇ ಮಾತುಗಳಲ್ಲಿ ನೀಡಲಾಗಿದೆ…

  • ಹೆಣ್ಣನ್ನು ಕೇವಲವಾಗಿ ನೋಡಬಾರದು, ನಮ್ಮ ಭಾಷೆಯ ಬಗ್ಗೆ ಕೆಟ್ಟದಾಗಿ ಬಿಂಬಿಸಬಾರದು, ಮೂರನೇಯದಾಗಿ ಎಲ್ಲಿಂದಲೇ ಕಾಸು ತಂದು ಸಿನಿಮಾ ನಿರ್ಮಿಸುವ ನಿರ್ಮಾಪಕನಿಗೆ ಒಳ್ಳೆಯದಾಗುವಂತಿರಬೇಕು… ಈ ಮೂರರ ಮೇಲೆ ನನ್ನ ಸಿನಿಮಾ ಆಯ್ಕೆ ನಡೆಯುತ್ತದೆ.
  • ಯಾವುದೇ ಒಂದು ಕನ್ನಡ ಸಿನಿಮಾದ ಗೆಲುವು ಇಡೀ ಚಿತ್ರರಂಗಕ್ಕೆ ದೊಡ್ಡ ಸ್ಫೂರ್ತಿ ನೀಡುತ್ತದೆ. ಈಗ “ಕಾಟೇರ’ ಗೆದ್ದಿದೆ. ಚಿತ್ರಮಂದಿರ ಮಾಲೀಕರಿಂದ ಹಿಡಿದು ಪ್ರತಿ ವಿಭಾಗಗಳು ಆ್ಯಕ್ಟಿವ್‌ ಆಗಿವೆ. ಇನ್ನು ನೋಡಿ ಸಾಲು ಸಾಲು ಸಿನಿಮಾಗಳು ಬರಲಿವೆ ಮತ್ತು ಬರಬೇಕು. ಆಗ ಮಾತ್ರ ಚಿತ್ರರಂಗ ಜೀವಂತಿಕೆಯಿಂದ ಇರಲು ಸಾಧ್ಯ.
  • ನಮ್ಮ ಮಣ್ಣಿನ ಕಥೆ ಹೇಳಿದಾಗ ಜನರಿಗೆ ಅದು ಬೇಗ ಕನೆಕ್ಟ್ ಆಗುತ್ತದೆ. ಆ ನಿಟ್ಟಿನಲ್ಲಿ ನಮ್ಮ “ಕಾಟೇರ’ ಚಿತ್ರ ಗೆದ್ದಿದೆ. ಇದು ನನ್ನೊಬ್ಬನ ಪ್ರಯತ್ನವಲ್ಲ. ಇಡೀ ತಂಡದ ಶ್ರಮ.
  • ಚಿತ್ರದಲ್ಲಿ ಬರುವ ಪೌರಾಣಿಕ ದೃಶ್ಯ ನೋಡಿ ಕೆಲವರು ಡಾ. ರಾಜ್‌ಕುಮಾರ್‌ ಅವರಿಗೆ ನನ್ನನ್ನು ಹೋಲಿಸುತ್ತಿದ್ದಾರೆ. ದಯವಿಟ್ಟು ಹೋಲಿಸಬೇಡಿ, ನಾನು ಅವರ ಪಾದದ ಧೂಳಿಗೂ ಸಮವಲ್ಲ.
  • ಪ್ಯಾನ್‌ ಇಂಡಿಯಾ ಸಿನಿಮಾ ಮಾಡಲು ಹೊರಟರೆ ಆಯಾ ರಾಜ್ಯಗಳನ್ನು ಪ್ರತಿನಿಧಿಸುವ ಅಂಶಗಳನ್ನು ಹಾಕಲೇಬೇಕು. ಆಗ ನಮ್ಮ ಮಣ್ಣಿನ ಕಥೆಯ ಸಾರ ಹೊರಟು ಹೋಗುತ್ತದೆ. ಅದಕ್ಕೆ ಮೊದಲು ನಮ್ಮ ನೆಲದ, ನಮ್ಮ ಭಾಷೆಯ ಸಿನಿಮಾ ಮಾಡುವ, ಮುಂದೆ ಅದು ಎಲ್ಲಿ ಬೇಕಾದರೂ ತಲುಪಬಹುದು
  • ಪೈರಸಿ ಮಾಡುವವರು ಇಲ್ಲೇ ಓಡಾಡುತ್ತಿದ್ದಾರೆ. ನಿಮ್ಮ ಮಣ್ಣಿಗೆ ನೀವು ಬೆಲೆ ಕೊಡದಿದ್ದರೆ ಹೇಗೆ? ಪೈರಸಿ ಮಾಡಿ ಸಿಕ್ಕಿ ಹಾಕಿಕೊಂಡರೆ ಟಾಟ, ಬೈಬೈ, ಸೀಯೂ… ನಾನು ಸಿನಿಮಾ ಮಾಡೋದು ಪ್ರಶಸ್ತಿಗಾಗಿ ಅಲ್ಲ. ನನ್ನ ಸೆಲೆಬ್ರೆಟಿಗಳ ಮೆಚ್ಚುಗೆಯೇ ನನಗೆ ದೊಡ್ಡ ಪ್ರಶಸ್ತಿ
  • ಲುಕ್‌ ಟೆಸ್ಟ್‌ನಲ್ಲಿ ನಾನು ಮೇಕಪ್‌ ಹಾಕಿದ ಬಳಿಕ ಮೊದಲು ನೋಡೋದು ಕನ್ನಡಿನ್ನಲ್ಲ… ಬದಲು ನನ್ನ ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕ ಹಾಗೂ ತಂಡವನ್ನು. ಅವರ ಮೊಗದಲ್ಲಿ ಸಂತೃಪ್ತ ಭಾವ ಮೂಡಿದರೆ ಅದು ಗೆದ್ದಂತೆ.

ವಾರಾಂತ್ಯದಲ್ಲಿ ವಿದೇಶದಲ್ಲಿ ಕಾಟೇರ

ಕಾಟೇರ ಚಿತ್ರ ವಿದೇಶಗಳಲ್ಲೂ ಬಿಡುಗಡೆಯಾಗುತ್ತಿದ್ದು, ದುಬೈ, ಕೆನಡಾ ಸೇರಿದಂತೆ ಇತರ ಕಡೆಗಳಲ್ಲಿ ವಾರಾಂತ್ಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಮೂಲಕ ವಿದೇಶಿ ಕನ್ನಡಿಗರಿಗೂ ದರ್ಶನ ಭಾಗ್ಯ ಸಿಗಲಿದೆ. ದುಬೈನಲ್ಲಿ ನಡೆಯಲಿರುವ ಕಾಟೇರ ಇವೆಂಟ್‌ನಲ್ಲಿ ದರ್ಶನ್‌ ಭಾಗಿಯಾಗಲಿದ್ದಾರೆ. ಇದರ ಜೊತೆಗೆ ತಮಿಳು, ತೆಲುಗು ಸೇರಿದಂತೆ ಪರಭಾಷೆಯಿಂದಲೂ ಚಿತ್ರಕ್ಕೆ ಬೇಡಿಕೆ ಬರುತ್ತಿದೆ. ಇನ್ನು, ಈ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿದ್ದು, ತರುಣ್‌ ಸುಧೀರ್‌ ನಿರ್ದೇಶನವಿದೆ.

ಉದಯವಾಣಿ ಸಿನಿ ಸಮಾಚಾರ

ಟಾಪ್ ನ್ಯೂಸ್

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.