Change; ಗ್ರಾಮ ನ್ಯಾಯಾಲಯ- ಮೊದಲು ಆಡಳಿತಗಾರರ ಚಿಂತನೆ ಬದಲಾಗಬೇಕು


Team Udayavani, Jan 4, 2024, 5:00 AM IST

court

ರಾಜ್ಯದ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಇತ್ತೀಚೆಗೆ ಗ್ರಾಮ ನ್ಯಾಯಾಲಯಗಳ ಸ್ಥಾಪನೆ ಕುರಿತಂತೆ ಇಂಗಿತವನ್ನು ವ್ಯಕ್ತಪಡಿ ಸಿದ್ದರು. ಗ್ರಾಮಾಂತರ ಪ್ರದೇಶಗಳ ಜನರ ವ್ಯಾಜ್ಯಗಳ ಪರಿಹಾರಕ್ಕೆ ದೂರದ ನಗರಗಳಿಗೆ ಅಲೆಯು ವುದನ್ನು ತಪ್ಪಿಸಬೇಕು ಮತ್ತು ಪ್ರಕರಣಗಳು ಬೇಗ ಇತ್ಯರ್ಥ ವಾಗಬೇಕು ಎನ್ನುವುದು ಅವರ ಕಳಕಳಿ. ಚಿಂತನೆ ಒಪ್ಪುವಂಥದ್ದೇ. ಆದರೆ ಅನುಷ್ಠಾನಕ್ಕೆ ಅಳವಡಿಸುವ ವಿಧಾನ ಸಮರ್ಪಕವೇ ಎಂಬುದು ಸಾರ್ವಜನಿಕರ ಚಿಂತನೆಗೆ ಗ್ರಾಸ.

ನಮ್ಮ ಆಡಳಿತದ ದುರಂತವೆಂದರೆ ಅನುಷ್ಠಾನದಲ್ಲಿ ದಕ್ಷತೆಯ ಕೊರತೆ. ದೋಷಪೂರಿತ ಯೋಜನೆ ಹಾಗೂ ತತ್ಪರಿಣಾಮದ ವೈಫ‌ಲ್ಯಗಳ ಸಂದರ್ಭ ಅತ್ಯಲ್ಪ. ಅದಕ್ಷತೆಯಿಂದಾಗುವ ವೈಫ‌ಲ್ಯದ ಪರಿಹಾರಕ್ಕೆ ಸರಕಾರ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಪರಿಹಾರ ಕಂಡುಕೊಳ್ಳುವ ವಿದ್ಯಮಾನ ಸೃಷ್ಟಿಸಿ, ನಾಳೆ ಒಳ್ಳೆಯದಾದೀತು ಎಂಬ ಭ್ರಮೆ ಯಾ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡುವಂತೆ ಮಾಡುವುದು. ಹಾಲಿ ಯೋಜನೆಗಳ ಅನುಷ್ಠಾನದಲ್ಲಿ ದಕ್ಷತೆ ಹೆಚ್ಚಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಿಲ್ಲ. ಸಾಮಾನ್ಯವಾಗಿ ಎಲ್ಲರೂ, ನಿರಕ್ಷರ ಕುಕ್ಷಿಯೂ, ನಾಳೆಯ ಒಳಿತನ್ನು ಹಾರೈ ಸುವುದು ಸ್ವಾಭಾವಿಕ. ಆಡಳಿತಗಾರರು ಆಗಾಗ ನೀಡುವ ಘೋಷಣೆಯ ಮೂಲಕ ಈ ಸ್ಥಿತಿ ಸದಾ ಜೀವಂತವಾಗಿರುತ್ತದೆ. ಇದರಿಂದ ಇಂದಿನ ದಿನ ನಯವಾಗಿ ಮುಗಿಯುತ್ತದೆ.
ಈಗ ನಮ್ಮ ನ್ಯಾಯಾಂಗದ ಕಡೆ ಕಣ್ಣು ಹಾಯಿಸಿ ಸದ್ಯದ ವ್ಯವಸ್ಥೆಯನ್ನು ಅವಲೋಕಿಸುವ. ನಮ್ಮ ರಾಜ್ಯದ ಪ್ರತೀ ತಾಲೂಕಿನಲ್ಲಿ ಯೂ ಜುಡಿಶಿಯಲ್‌ ಕೋರ್ಟ್‌ಗಳಿದ್ದು ಕ್ರಿಮಿನಲ್‌ ಮತ್ತು ಸಿವಿಲ್‌ ಪ್ರಕರಣಗಳ ತನಿಖೆ ನಡೆಸಿ ನ್ಯಾಯ ಪ್ರದಾನ ಮಾಡಲಾಗುತ್ತಿದೆ.

ಏರುತ್ತಿರುವ ಜನಸಂಖ್ಯೆ ಹಾಗೂ ಪ್ರಗತಿ ಚಟುವಟಿಕೆ ಗಳನ್ನನುಸರಿಸಿ, ತಾಲೂಕುಗಳ ರಚನೆ ಅಧಿಕವಾಗುತ್ತಿರುವುದರಿಂದ ತಾಲೂಕಿನ ವಿಸ್ತಾರ ಸಂಕುಚಿತಗೊಳ್ಳುತ್ತಿದೆ. ಹಾಗಾಗಿ ಯಾವ ಮೂಲೆಯಿಂದಲೂ ತಾಲೂಕಿನ ಮುಖ್ಯ ಠಾಣೆ ದೂರವಲ್ಲ. ದಿನೇದಿನೆ ಸಾರಿಗೆ ಸೌಲಭ್ಯಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ದಾವೆ ನಿರತ ಪಕ್ಷಗಾರನಿಗೆ ನಗರದ ನ್ಯಾಯಾಲಯ ದೂರವಾಗಿ ಆತನ ಬವಣೆಗೆ ಕಾರಣವಾಗಲಾರದು.
ನ್ಯಾಯಾಲಯದ ವಿಳಂಬ ನಿರ್ವ ಹಣೆಯೇ ಆತನ ಆರ್ಥಿಕ ಹಾಗೂ ನೆಮ್ಮದಿಯ ಜೀವನಕ್ಕೆ ಆತಂಕವಾದೀತು. ನ್ಯಾಯಾಲಯದಲ್ಲಿ ಪ್ರಕರಣ ಮುಂದೂಡಿದ ದಿನವೂ ಆತನ ದಿನ ನಷ್ಟವಾಗುವುದನ್ನು ತಪ್ಪಿಸಲಾದೀತೇ? ಪರಿಣಾಮ ಆರ್ಥಿಕ ಸಂಕಷ್ಟವಲ್ಲದೆ ಇತ್ತ ದುಡಿತದ ದಿನ ಕಡಿಮೆಯಾಗುವುದೆಂದರೆ ರಾಷ್ಟ್ರೀಯ ನಷ್ಟ (national loss)ವೂ ಆಗುತ್ತದೆ.

ನ್ಯಾಯಾಲಯಗಳಲ್ಲಿ ಪ್ರಕರಣಗಳು ತ್ವರಿತಗತಿಯಲ್ಲಿ ಇತ್ಯರ್ಥವಾಗದಿರಲು ಮೂಲ ಸೌಕರ್ಯದ ಕೊರತೆ ಎಂದರೆ ಅವಸರದ ಹೇಳಿಕೆಯಾಗಲಾರದು. ರಾಜ್ಯ ದ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಉಚ್ಚ ನ್ಯಾಯಾಲಯವಿದೆ ಮತ್ತು ಧಾರ ವಾಡ ಹಾಗೂ ಕಲಬುರಗಿಯಲ್ಲಿ ಹೆಚ್ಚು ವರಿ ಪೀಠಗಳಿವೆ. ಒಟ್ಟು ಅನುಮೋದಿತ ನ್ಯಾಯಾಧೀಶರ ಹುದ್ದೆಗಳು 62. ಆದರೆ ಕೇವಲ 45 ಭರ್ತಿ ಸ್ಥಿತಿಯಲ್ಲಿವೆ. ಈ ನ್ಯಾಯಾಲಯಗಳಲ್ಲಿ ಒಟ್ಟು 2.71ಲಕ್ಷ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಮುಂದುವರಿದು ಕರ್ನಾಟಕದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧೀನ ನ್ಯಾಯಾಲಯಗಳಲ್ಲಿ 16.8 ಲಕ್ಷ ಪ್ರಕರಣ ಗಳು ಬಾಕಿ ಇವೆ ಎಂದು ಲಭ್ಯ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

ಅಧೀನ ನ್ಯಾಯಾಲಯಗಳಲ್ಲಿಯೂ ನ್ಯಾಯಾ ಧೀಶರ ಹಾಗೂ ಪೂರಕ ಸಿಬಂದಿಯ ಕೊರತೆ ಇದೇ ಪ್ರಮಾಣದಲ್ಲಿದೆ ಎಂದು ಬೇರೆ ಹೇಳಬೇಕಾಗಿಲ್ಲ. ನಮ್ಮ ನ್ಯಾಯಾ ಲಯಗಳು ಎದುರಿಸುವ ಮುಖ್ಯ ಸಮಸ್ಯೆ ಎಂದರೆ, ನ್ಯಾಯಾಧೀಶರ ಹಾಗೂ ಪೂರಕ ಅಧಿಕಾರಿ ಸಿಬಂದಿಯ ಕೊರತೆ.

ಸರಕಾರ ಈಗ ನ್ಯಾಯಾಲಯಗಳ ಸುಧಾರಣೆಗೆ ಹೆಚ್ಚು ಆದ್ಯತೆ ನೀಡಬೇ ಕಾಗಿದೆ. ಹಾಲಿ ನ್ಯಾಯಾಲಯಗಳಿಗೆ ಮೂಲ ಸೌಕರ್ಯವನ್ನು ಹೆಚ್ಚಿಸಿ, ಅವುಗಳ ದಕ್ಷತೆ ಹೆಚ್ಚಿಸುವಂತೆ ಮಾಡಬೇಕಾಗಿದೆ. ನ್ಯಾಯಾ ಧೀಶರ ಹಾಗೂ ಪೂರಕ ಸಿಬಂದಿಯ ಹುದ್ದೆ ಖಾಲಿ ಇರದಂತೆ ಕ್ರಮ ತೆಗೆದು ಕೊಳ್ಳುವುದು ಬಹು ಮುಖ್ಯ ವಾದ ಕ್ರಮ. ಹಾಗೆ ಪ್ರಮಾಣ ಬದ್ಧವಾಗಿ ಕಟ್ಟಡ, ಪೀಠೊಪಕರಣಗಳ ಪೂರೈಕೆ ನ್ಯಾಯ ಸ್ಥಾನಗಳು ಹೆಚ್ಚು ಸತ್ವಯುತವಾಗಿ ಕೆಲಸ ಮಾಡಲು ಸಹಕಾರಿ. ಇದರೊಂದಿಗೆ ಪ್ರಕರಣ ಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ತೊಡಕಾಗಿರುವ ಕಾನೂ ನಿನ ತಿದ್ದುಪಡಿ ಹಾಗೂ ಹೊಸ ಕಾನೂನನ್ನು ರೂಪಿಸುವ ಉಪಕ್ರಮ ಗಳು ನ್ಯಾಯಾಲಯಗಳ ದಕ್ಷತೆ ಹೆಚ್ಚಿಸಲು ಸಹಕಾರಿ.

ಈಗ ಉದ್ದೇಶಿಸಿದಂತೆ 2-3 ಗ್ರಾಮಗಳಿಗೊಂದು ಗ್ರಾಮ ನ್ಯಾಯಾಲ ಯಗಳು ಸ್ಥಾಪನೆಯಾದರೆ, ಭೂಮಸೂದೆ ಕಾಯಿದೆಯ ಅನುಷ್ಠಾನಕ್ಕೆ ರಚಿಸಿದ ಲ್ಯಾಂಡ್‌ ಟ್ರಿಬ್ಯುನಲ್‌ಗ‌ಳ ಪ್ರತಿ ಸ್ವರೂಪದ ಸಂಸ್ಥೆಗಳಂತಾದವು. ಅವುಗಳ ಪೀಠಾಧಿ ಕಾರಿಗಳ ಹಾಗೂ ಸಹಾಯಕರ ನೇಮ ಕಾತಿಗೆ ಸ್ಥಳೀಯ ಅಭ್ಯರ್ಥಿಗಳೇ ಮುಂದಾ ಗುವುದು ಸಹಜ. ಅಂಥ ನೇಮಕಾತಿಯನ್ನು ಆಯಾ ಕಾಲಕ್ಕೆ ಆಡಳಿತ ನಡೆಸುವ ರಾಜಕೀಯ ಪಕ್ಷದ ಮರ್ಜಿಗನುಸಾರ ಆದೀತೆಂಬುದರಲ್ಲಿ ಅನುಮಾನವಿಲ್ಲ. ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಹಾಲಿ ಇರುವ ರಾಜಕೀಯ, ಗ್ರಾಮೀಣ ಪ್ರದೇಶಕ್ಕೆ ಸುಲಭದಲ್ಲಿ ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಗ್ರಾಮ ನ್ಯಾಯಾ ಲಯಗಳು ನಿಜ ನ್ಯಾಯಸ್ಥಾನದ ನಿಷ್ಪಕ್ಷ ನಿಲುವು, ಘನತೆ, ಗೌರವ, ಕ್ಷಮತೆಯನ್ನು ಕಾಪಾಡಬಲ್ಲವೇ? ಸಾರ್ವಜನಿಕರಿಗೆ ಅನುಕೂಲಕ್ಕಿಂತ ತೊಂದರೆಯೇ ಅಧಿಕವಾಗುವ ಸಂಭವವೇ ಹೆಚ್ಚು.

ಅಲ್ಲದೆ, ನ್ಯಾಯ ಎಂದರೇನು? ಅದು ಅತ್ಯುನ್ನತ ನ್ಯಾಯಸ್ಥಾನದ ವ್ಯಾಖ್ಯಾನ. ಹಾಗಾಗಿ ಅಪೀಲಿಗೆ ಅವಕಾಶ ಒದಗಿ ಸಿಯೇ ಈ ಸಂಬಂಧಿತ ಕಾಯಿದೆ ರೂಪಿಸ ಬೇಕಾಗುತ್ತದೆ. ಇದರಿಂದ ನಗರದಲ್ಲಿರುವ ಮೇಲಿನ ನ್ಯಾಯಸ್ಥಾನಗಳಲ್ಲಿ ಪ್ರಕರಣಗಳ ರಾಶಿ ಬಿದ್ದು ಪರಿಸ್ಥಿತಿ ಇನ್ನೂ ಬಿಗಡಾ ಯಿಸಿತೇ ಹೊರತು ಸಾರ್ವಜನಿಕರಿಗೆ ಸುಲಭ ಹಾಗೂ ತ್ವರಿತ ನ್ಯಾಯ ದೊರೆ ಯುವುದು ಅಸಂಭವ. ಯೋಜನೆ ಫ‌ಲಪ್ರದವಾಗುವ ಸಾಧ್ಯತೆ ತೀರಾ ಕಡಿಮೆ. ನಮ್ಮ ಚುನಾಯಿತ ಪ್ರತಿನಿಧಿಗಳು ಕೇವಲ ರಾಜಕೀಯವನ್ನು ಬಿಟ್ಟು ವಾಸ್ತವದ ಬಗ್ಗೆ ಚಿಂತನೆ ನಡೆಸುವುದು ವಿಹಿತ.

 ಬೇಳೂರು ರಾಘವ ಶೆಟ್ಟಿ,

ಟಾಪ್ ನ್ಯೂಸ್

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

Astronamy-moon

Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.