Politics: ರಾಜ್ಯದಲ್ಲೂ ಗೋಧ್ರಾ- ಹರಿಪ್ರಸಾದ್ ವಿವಾದ
ರಾಮ ಮಂದಿರ ಉದ್ಘಾಟನೆ ವೇಳೆ ಗೋಧ್ರಾ ಮಾದರಿ ದುರಂತ ಸಾಧ್ಯತೆ ಎಂದ ಕಾಂಗ್ರೆಸ್ ನಾಯಕ
Team Udayavani, Jan 4, 2024, 12:27 AM IST
ಬೆಂಗಳೂರು: ಅಯೋಧ್ಯೆಯಲ್ಲಿ ಜ.22ರಂದು ರಾಮ ಮಂದಿರ ಉದ್ಘಾಟನೆ ವೇಳೆ ರಾಜ್ಯದಲ್ಲಿ ಗುಜರಾತ್‌ನ ಗೋಧ್ರಾದಲ್ಲಿ ನಡೆದಿದ್ದಂಥ ದುರ್ಘಟನೆ ನಡೆಯಬಹುದು. ಬಿಜೆಪಿ ರಾಜಕೀಯ ಲಾಭಕ್ಕಾಗಿ ಏನು ಬೇಕಾದರೂ ಮಾಡಬಹುದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಅವರ ಹೇಳಿಕೆ ವಿಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವೆ ಬಿರುಸಿನ ವಾಗ್ವಾದಕ್ಕೆ ಕಾರಣವಾಗಿದೆ.
ಹಳೆಯ ಅಪರಾಧ ಪ್ರಕರಣಗಳ ತ್ವರಿತ ವಿಲೇವಾರಿ ನೆಪದಲ್ಲಿ ಕರಸೇವಕರನ್ನು ವಿನಾ ಕಾರಣ ಬಂಧಿಸಲಾಗುತ್ತಿದೆ ಎಂದು ಆಕ್ರೋಶ ಗೊಂಡಿದ್ದ ಬಿಜೆಪಿಯನ್ನು ಹರಿಪ್ರಸಾದ್ ಹೇಳಿಕೆ ಮತ್ತಷ್ಟು ಕೆರಳಿಸಿದ್ದು, ಕಾಂಗ್ರೆಸ್ ಪಾಲಿಗೆ ಇದೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂತಹ ಊಹಾಪೋಹಕ್ಕೆಲ್ಲ ಪ್ರತಿಕ್ರಿಯಿಸುವು ದಿಲ್ಲ ಎನ್ನುವ ಮೂಲಕ ಹರಿಪ್ರಸಾದ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಗೃಹ ಸಚಿವ ಡಾ| ಜಿ. ಪರಮೇಶ್ವರ್ ಪ್ರತಿ ಕ್ರಿಯಿಸಿ, ಅಂಥ ವಿಚಾರದ ಬಗ್ಗೆ ನಮ್ಮ ಇಲಾಖೆಗೆ ಮಾಹಿತಿಯಿಲ್ಲ ಎಂದರು.
ಹರಿಪ್ರಸಾದ್ ಯಾವ ಮಾಹಿತಿ ಆಧರಿಸಿ ಅಥವಾ ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ. ಅದು ವೈಯಕ್ತಿಕ ಹೇಳಿಕೆ ಎಂದು ಅವರೇ ಹೇಳಿಕೊಂಡಿರುವಾಗ ಇನ್ನೇನಿದೆ ಎಂದು ಪ್ರಶ್ನಿಸಿದ್ದಾರೆ.
ಹರಿಪ್ರಸಾದ್ ಹೇಳಿದ್ದೇನು?
ಅಯೋಧ್ಯೆಯ ರಾಮಮಂದಿರದ ಇತಿಹಾಸಕ್ಕೂ ಪುರಾಣಕ್ಕೂ ವ್ಯತ್ಯಾಸಗಳಿವೆ. ಮಂದಿರವನ್ನು ಹಿಂದೂ ಧಾರ್ಮಿಕ ಗುರುಗಳು ಉದ್ಘಾಟಿಸಿದ್ದರೆ ಆಮಂತ್ರಣ ಇಲ್ಲದಿದ್ದರೂ ಹಿಂದೂಗಳಾಗಿ ನಾವೂ ಹೋಗುತ್ತಿದ್ದೆವು. ವಿಶ್ವಗುರು ಉದ್ಘಾಟಿಸುತ್ತಿರುವುದರಿಂದ ಇದು ರಾಜಕೀಯ ಕಾರ್ಯಕ್ರಮ. ವಿಶ್ವಗುರು ಯಾವ ಧರ್ಮಕ್ಕೆ ಸೇರಿದ್ದಾರೆಂಬುದು ಇನ್ನೂ ಗೊತ್ತಿಲ್ಲ. ಅಮಿತ್ ಶಾ ಯಾವ ಧರ್ಮಕ್ಕೆ ಸೇರಿದ್ದಾರೆಂದು ಗೊತ್ತಿಲ್ಲ. ಅವರೇನು ಧರ್ಮಗುರುಗಳಾ? ಹಿಂದೂ ಧರ್ಮದ ಯಾವುದೇ ಧಾರ್ಮಿಕ ಗುರುಗಳು ಉದ್ಘಾಟಿಸಿದ್ದರೆ ಇದು ಧಾರ್ಮಿಕ ಕಾರ್ಯಕ್ರಮ ಆಗಿರುತ್ತಿತ್ತು. ಈಗ ಇದನ್ನು ರಾಜಕೀಯವಾಗಿಯೇ ನೋಡಬೇಕಾಗಿದೆ.
ಒಂದು ಪೂಜಾ ಸ್ಥಳವನ್ನು ಧ್ವಂಸ ಮಾಡಿ ಇನ್ನೊಂದು ಕಟ್ಟುವುದು ಯಾವುದೇ ಇತಿಹಾಸದಲ್ಲಿಲ್ಲ. ಹೀಗಾಗಿ ಉನ್ಮಾದ ಮಾಡುವುದು ಒಳ್ಳೆಯದಲ್ಲ. ಕರ್ನಾಟಕದಲ್ಲಿ ಎಲ್ಲ ರೀತಿಯ ಕಟ್ಟೆಚ್ಚರಗಳನ್ನೂ ವಹಿಸಿಕೊಳ್ಳಬೇಕು. ಯಾಕೆಂದರೆ, ಗುಜರಾತ್‌ನ ಗೋಧ್ರಾದಲ್ಲಿ ಇಂಥದ್ದೇ ಸಂದರ್ಭದಲ್ಲಿ ಕರಸೇವಕರ ದಹನ ನಡೆದಿತ್ತು. ಅಂಥದ್ದೇ ಪರಿಸ್ಥಿತಿಯನ್ನು ಕರ್ನಾಟಕದಲ್ಲೂ ಸೃಷ್ಟಿಸಲು ಪ್ರಯತ್ನ ಮಾಡುತ್ತಾರೆ. ಕರ್ನಾಟಕದಲ್ಲಿ ಯಾವುದೇ ರೀತಿಯ ಅಹಿತಕ ಘಟನೆ ನಡೆಯಲು ಅವಕಾಶ ಕೊಡಬಾರದು. ಯಾರೆಲ್ಲ ಅಯೋಧ್ಯೆಗೆ ಹೋಗುತ್ತಾರೋ ಅವರಿಗೆ ಅಗತ್ಯ ಬಂದೋಬಸ್ತ್ ಮಾಡಬೇಕು ಎಂದರು.
ಹಲವು ಸಂಘಟನೆಗಳ ಪ್ರಮುಖರು ಕೆಲವು ರಾಜ್ಯಗಳಿಗೆ ಹೋಗಿ ಬಿಜೆಪಿಯವರಿಗೆ ಏನು ಪ್ರೇರೇಪಣೆ, ಪ್ರಚೋದನೆ ಮಾಡಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಲಾಗುವುದಿಲ್ಲ. ಪ್ರಚೋದನಕಾರಿ ಕೆಲಸಗಳಿಗೆ ಕುಮ್ಮಕ್ಕು ಕೊಡುತ್ತಿದ್ದು, ಇದನ್ನು ನಿಲ್ಲಿಸಬೇಕು. ಮೊನ್ನೆ ಒಡಿಶಾದಲ್ಲಿ ಸಭೆ ಆಗಿದೆ. ಬಿಜೆಪಿಯ ಪದಾಧಿಕಾರಿಗಳನ್ನು ಕರೆದು ಮಾತನಾಡಿ ದ್ದಾರೆ. ಅವರು ಏನು ಹೇಳಿದ್ದಾರೆಂದು ಅವರನ್ನೇ ಕೇಳಿ. ಅನಂತರ ನಾನು ಮಾತನಾಡುತ್ತೇನೆ ಎಂದರು.
ಕರ್ನಾಟಕದ ಗೌರವ ಉಳಿಸಲು ಏನು ಬೇಕೋ ಅದನ್ನು ಮಾಡುತ್ತೇವೆ. ಯಾರೇ ಕುತಂತ್ರ ಮಾಡಿದರೂ ಅವಕಾಶ ಕೊಡುವುದಿಲ್ಲ. ಹರಿಪ್ರಸಾದ್‌ಗೆ ಏನು ಮಾಹಿತಿ ಎಂಬುದನ್ನು ತಿಳಿಯುತ್ತೇವೆ.
– ಡಿ.ಕೆ. ಶಿವಕುಮಾರ್, ಡಿಸಿಎಂ
ರಾಮಭಕ್ತರಿಗೆ ಹೆದರಿಕೆ ಹುಟ್ಟಿಸುವುದು, ಇಂತಹ ಕುಕೃತ್ಯ ಮಾಡುವವರಿಗೆ ಕುಮ್ಮಕ್ಕು ಕೊಡುವುದು ಸರಿಯಾ? ತತ್‌ಕ್ಷಣ ಹರಿಪ್ರಸಾದ್‌ರನ್ನು ಭಯೋತ್ಪಾದಕ ಕಾಯ್ದೆಯಡಿ ಬಂಧಿಸಿ, ತನಿಖೆಗೆ ಒಳಪಡಿಸಬೇಕು. ಅವರು ನಂ.1 ಭಯೋತ್ಪಾದಕ. ಆದ್ದರಿಂದ ಹರಿಪ್ರಸಾದ್‌ಗೂ ರಕ್ಷಣೆ ಕೊಡಿ. ಹೊರಗೆ ಹೋದಾಗ ಯಾರಾದರೂ ಅವರ ಕೈ-ಕಾಲು ಮುರಿಯಬಹುದು.
– ಡಿ.ವಿ. ಸದಾನಂದ ಗೌಡ, ಮಾಜಿ ಸಿಎಂ
ಒಂದು ಧರ್ಮದ ಸಭೆಗೆ ಹೋಗಿ 10 ಸಾವಿರ ಕೋಟಿ ರೂ. ಕೊಡು ವುದಾಗಿ ಹೇಳಿದ್ದನ್ನು ಹರಿಪ್ರಸಾದ್ ಪ್ರಶ್ನಿಸಿದ್ದಾರಾ? ಅದು ರಾಜಕೀಯ ಪ್ರೇರಿತ ಆಗಿರಲಿಲ್ಲವೇ? ಗೋಧಾÅದಲ್ಲಿ ಘಟನೆ ನಡೆದಾಗ ಕೇಂದ್ರದಲ್ಲಿ ಇದ್ದದ್ದು ಬೇರೆ ಸರಕಾರ. ಇಂದು ಇರು ವುದು ಹಿಂದೂಗಳ ಸರಕಾರ. ನಿಮ್ಮ ಷಡ್ಯಂತ್ರವನ್ನು ತಡೆಯುವ ಶಕ್ತಿ ಇದೆ.
– ಶ್ರೀವತ್ಸ, ಬಿಜೆಪಿ ಶಾಸ
ಬಿಜೆಪಿಯ ಇತಿಹಾಸ ನೋಡಿದರೇ ಗೊತ್ತಾಗುತ್ತದೆ. ಇಂತಹ ಕುಕೃತ್ಯಗಳಿಗೆ ಅದು ಹೆಸರುವಾಸಿ. ರಾಜಕೀಯ ಲಾಭಕ್ಕಾಗಿ ಯಾವ ಕೀಳು ಮಟ್ಟಕ್ಕೆ ಬೇಕಿದ್ದರೂ ಹೋಗು ತ್ತದೆ. ಗೋಧ್ರಾ, ಪುಲ್ವಾಮಾ, ಕಂದ ಮಾಲ್, ಮಣಿಪುರ ಪ್ರಕರಣಗಳಲ್ಲಿ ಬಿಜೆಪಿ ನಿಲು ವೇನು? ದೇಶದ ಎಲ್ಲ ರಾಜ್ಯಗಳೂ ಮುನ್ನೆಚ್ಚ ರಿಕೆ ವಹಿಸಬೇಕು. ಯಾವುದೇ ತನಿಖಾ ಸಂಸ್ಥೆಗೆ ಬೇಕಿದ್ದರೂ ನನ್ನಲ್ಲಿರುವ ಮಾಹಿತಿಯನ್ನು ಕೊಡಲು ಸಿದ್ಧನಿದ್ದೇನೆ.
-ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ
ಅನುಮಾನಗಳಿಗೆ ಉತ್ತರವಿಲ್ಲ
ಸಂಶಯಗಳು ಮತ್ತು ಅನುಮಾನಗಳಿಗೆ ಉತ್ತರ ಕೊಡುವುದಿಲ್ಲ. ಒಂದು ವೇಳೆ ಉತ್ತರಿಸಿದರೂ ಪ್ರಯೋಜನ ಆಗದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಇಡೀ ಜಗತ್ತಿಗೆ ಗೊತ್ತಿದೆ
ಹರಿಪ್ರಸಾದ್ ಬಗ್ಗೆ ಚರ್ಚೆ ಯಾಕೆ? ಗೋಧ್ರಾ ಹತ್ಯಾ ಕಾಂಡದ ಸಂದರ್ಭದಲ್ಲಿ ಯಾರು ಏನು ಮಾಡಿದ್ದಾರೆಂದು ಇಡೀ ಜಗತ್ತಿಗೇ ಗೊತ್ತಿದೆ. ಈಗೇಕೆ ಆ ಚರ್ಚೆ?
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.