Ishwaramangala ಪೆರ್ನಾಜೆ: ಮತ್ತೆ ಒಂಟಿ ಸಲಗದ ದಾಂಧಲೆ
Team Udayavani, Jan 4, 2024, 12:34 AM IST
ಈಶ್ವರಮಂಗಲ: ಕೆಲವು ದಿನಗಳ ಬಳಿಕ ಬುಧವಾರ ಮತ್ತೆ ಒಂಟಿ ಸಲಗವು ಪೆರ್ನಾಜೆ ಪರಿಸರದಲ್ಲಿ ಕೃಷಿ ಜಮೀನಿಗೆ ನುಗ್ಗಿ ದಾಂಧಲೆ ಎಸಗಿದೆ.
ಪುತ್ತೂರು – ಸುಳ್ಯ – ಕೇರಳ ಗಡಿಭಾಗ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗವು ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರ ಮಂಗಲ ಸಮೀಪ ಮುಂಜಾನೆ ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ನುಗ್ಗಿ 10 ಬಾಳೆ ಗಿಡಗಳನ್ನು ಸೀಳಿ ಹಾಕಿದೆ. 4 ದೀವಿ ಹಲಸಿನ ಮರಗಳ ತೊಗಟೆಯನ್ನು ಕಿತ್ತು ಹಾಕಿದ್ದಲ್ಲದೆ, ಕೊಂಬೆಗಳನ್ನು ಮುರಿದು ತಿಂದಿದೆ.
ಈಗಾಗಲೇ ಮಂಡೆಕೋಲು, ಮೂರೂರು, ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿದ ಆನೆಗಳ ಹಿಂಡಿನಿಂದ ಈ ಸಲಗವು ಬೇರ್ಪಟ್ಟು ಕನಕಮಜಲು ಮುಗೈರಿನಿಂದ ಪೆರ್ನಾಜೆಗೆ ಬಂದು ಹಾನಿಗೊಳಿಸಿ ಪುನಃ ಮುಗೈರಿನ ಕಡೆಗೆ ತೆರಳಿದೆ. ಮತ್ತೆ ಮತ್ತೆ ಜನನಿಬಿಡ ಪ್ರದೇಶಗಳಿಗೆ ದಾಳಿ ಮಾಡು ತ್ತಿದ್ದು ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುವಂತೆ ಆಗಿದೆ.
ಸ್ಥಳಾಂತರಕ್ಕೆ ಆಗ್ರಹ
ಆನೆಯನ್ನು ಸ್ಥಳಾಂತರಿಸುವಂತೆ ಕೃಷಿಕರು ಆಗ್ರಹಿಸಿದ್ದಾರೆ. ಇನ್ನಷ್ಟು ಕೃಷಿ ಹಾನಿಗೊಳಿಸುವ ಸಾಧ್ಯತೆ ಇದ್ದು ಕೃಷಿಕರ ರಾತ್ರಿ ತೋಟಕ್ಕೆ ಹೋಗದಂತೆ ಎಚ್ಚರದಿಂದಿದ್ದು ಪ್ರಾಣ ಹಾನಿಯಾಗದಂತೆ ಜಾಗ್ರತೆ ವಹಿಸುವಂತೆ ಅರಣ್ಯ ಇಲಾಖೆಯವರು ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.