Hubli; ರಾಮಭಕ್ತರಲ್ಲಿ ಭಯ ಮೂಡಿಸಲು ಕರಸೇವಕರ ಬಂಧನ: ಪ್ರಮೋದ್ ಮುತಾಲಿಕ್
Team Udayavani, Jan 4, 2024, 12:36 PM IST
ಹುಬ್ಬಳ್ಳಿ: ಇಡೀ ದೇಶ ರಾಮಮಯವಾಗುತ್ತಿದೆ. ಕಾಂಗ್ರಸ್ ನಾಯಕರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ರಾಮಭಕ್ತರಲ್ಲಿ ಭಯ ಮೂಡಿಸುವ ಕಾರಣಕ್ಕೆ ಮೂರು ದಶಕದ ಹಿಂದಿನ ಪ್ರಕರಣದಲ್ಲಿ ಬಂಧಿಸುತ್ತಿದ್ದಾರೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು
ಗುರುವಾರ ಇಲ್ಲಿನ ನಾರಾಯಣ ಪೇಟೆಯಲ್ಲಿರುವ ಬಂಧನಕ್ಕೊಳಗಾಗಿರುವ ಶ್ರೀಕಾಂತ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ರಾಮಭಕ್ತರಲ್ಲಿ ಭಯ ಮೂಡಿಸುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ನಿರ್ದೇಶನದ ಮೇರೆಗೆ ಬಂಧನ ಮಾಡಲಾಗುತ್ತಿದೆ. ಇನ್ನೂ ಹಲವರನ್ನು ಬಂಧಿಸುವ ಹುನ್ನಾರವಿದೆ. ಇಂತಹ ಬೆದರಿಕೆಗಳಿಗೆ ಬಗ್ಗುವ ಮಾತಿಲ್ಲ ಎಂದರು.
ವಿಧಾನಪರಿಷತ್ತು ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಯೂ ಕೂಡ ಹಿಂದುಗಳು ಹಾಗೂ ಅಯೋಧ್ಯೆಗೆ ತೆರಳುವವರಲ್ಲಿ ಭೀತಿ ಮೂಡಿಸುವ ಕೆಲಸ ಆಗುತ್ತಿದೆ. ಗೋದ್ರಾ ಮಾದರಿಯಲ್ಲಿ ಗಲಭೆಯಾಗಲಿದೆ ಎನ್ನುವ ಮೂಲಕ ಹಿಂದೂಗಳನ್ನು ಹೆದರಿಸುವ ಕೆಲಸವಿದು. ಗೋದ್ರಾ ಘಟನೆಯಲ್ಲಿ ಪಾಲ್ಗೊಂಡವರು ಯಾರು? ಇದೀಗ ಅಯೋಧ್ಯಕ್ಕೆ ಹೋಗುವ ರೈಲಿನ ಮೇಲೆ ಮುಸ್ಲಿಂರ ಮೂಲಕ ಗಲಭೆ ಮಾಡಿಸುವ ಹೇಳಿಕೆ ಇರಬಹುದು. ಮೊದಲು ಇವರ ಮೇಲೆ ಕ್ರಮವಾಗಬೇಕು ಎಂದು ಹೇಳಿದರು.
2024 ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗುತ್ತಾರೆ. ಭಾರತ ಹಿಂದೂರಾಷ್ಟ್ರ ಆಗುವುದರಲ್ಲಿ ಸಂಶಯವಿಲ್ಲ. ಈ ದೇಶದಲ್ಲಿ ಮುಸ್ಲಿಂರು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲಾ ಧರ್ಮದವರು ಇರುತ್ತಾರೆ. ಇದೊಂದು ಸಮಾನತೆಯ ರಾಷ್ಟ್ರವಾಗಲಿದೆ. ಯಾರಿಗೆ ತಾಕತ್ತಿದೆಯೋ ಅದನ್ನು ತಡೆಯುವ ಕೆಲಸ ಮಾಡಲಿ ಎಂದು ಸವಾಲು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.