BBK:ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಪ್ರತಾಪ್; ಕಡೆಗಣನೆ,ಗುರೂಜಿ ಭವಿಷ್ಯದ ಭೀತಿಯೇ ಕಾರಣ?
Team Udayavani, Jan 4, 2024, 2:12 PM IST
ಬೆಂಗಳೂರು: ಬಿಗ್ ಬಾಸ್ ಸೀಸನ್ ಕಾರ್ಯಕ್ರಮದಲ್ಲಿ ವೀಕ್ಷಕರಿಂದ ಅಪಾರ ಬೆಂಬಲ ಪಡೆದುಕೊಂಡಿರುವ ಡ್ರೋನ್ ಪ್ರತಾಪ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರ ಬೆಂಬಲಿಗರ ಚಿಂತಕ್ಕೆ ಕಾರಣವಾಗಿದೆ.
ಎರಡು ಮೂರು ದಿನಗಳಿಂದ ಪ್ರತಾಪ್ ಮನೆಯಲ್ಲಿ ಸಕ್ರಿಯವಾಗಿ ಯಾವ ವಿಚಾರದಲ್ಲೂ ಭಾಗಿಯಾಗುತ್ತಿಲ್ಲ. ಇತ್ತೀಚೆಗೆ ಗುರೂಜಿ ಮನೆಗೆ ಬಂದಾಗ ಪ್ರತಾಪ್ ಅವರ ಭವಿಷ್ಯ ನುಡಿದಿದ್ದರು. ಇದರಲ್ಲಿ ಮನೆಯಿಂದ ದೂರವಿರುವುದು ಒಳಿತು ಎಂದು ಹೇಳಿದ್ದರು. ಕಳೆದ ಮೂರು ವರ್ಷಗಳಿಂದ ಅಪ್ಪ- ಅಮ್ಮನಿಂದ ದೂರವಿದ್ದ ಪ್ರತಾಪ್ ಗುರೂಜಿಯ ಮಾತುಗಳನ್ನು ಕೇಳಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.
ಇದರೊಂದಿಗೆ ಮನೆಯ ಟಾಸ್ಕ್ ಗಳಿಂದ ಅವರನ್ನು ಹೊರಗಿಟ್ಟಿದ್ದಾರೆ. ಸಂಗೀತಾ , ನಮೃತಾ ಅವರು “ನೀನು ಟಾಸ್ಕ್ ನಲ್ಲಿ ಪ್ಯಾನಿಕ್” ಆಗ್ತೀಯಾ ಎಂದು ಹೇಳಿದ್ದಾರೆ. ಮನೆಯಲ್ಲಿ ಎಲ್ಲರಿಂದ ಅವಮಾನ ಹಾಗೂ ಹೀಯಾಳಿಸುವುದರಿಂದ ಮಾನಸಿಕವಾಗಿ ಪ್ರತಾಪ್ ಕುಗ್ಗಿ ಹೋಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಕಮೆಂಟ್ ಮಾಡಿದ್ದಾರೆ.
ಸದ್ಯ ಪ್ರತಾಪ್ ಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಫುಡ್ ಪಾಯ್ಸನ್ ನಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಆದರೆ ಮಾನಸಿಕವಾಗಿ ಕುಗ್ಗಿ ಹೋದ ಪ್ರತಾಪ್ ನೊಂದುಕೊಂಡು ಬಿಗ್ ಬಾಸ್ ಮನೆಯಲ್ಲಿ ಮಾತ್ರೆಗಳನ್ನು ಸೇವಿಸಿದ್ದಾರೆ ಎನ್ನುವ ಮಾತುಗಳೂ ಹರಿದಾಡುತ್ತಿದೆ. ಆದರೆ ಇದನ್ನು ಬಿಗ್ ಬಾಸ್ ಮೂಲ ಅಲ್ಲಗೆಳೆದಿದೆ.
ಶೀಘ್ರದಲ್ಲಿ ಪ್ರತಾಪ್ ದೊಡ್ಮನೆಗೆ ಮರಳಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಇವತ್ತು ಬಿಗ್ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.