Sun; ಸೂರ್ಯಸ್ನಾನ: ಹಲವು ರೋಗಗಳಿಗೆ ರಾಮಬಾಣ


Team Udayavani, Jan 5, 2024, 5:00 AM IST

1-wwewqe

“ಆರೋಗ್ಯಂ ಭಾಸ್ಕಾರಾಧಿಶ್ಚೇತ್‌’ ಆರೋಗ್ಯಕ್ಕೆ ಆಗರ ಸೂರ್ಯ. ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ಸೂರ್ಯನನ್ನು ವಿವಿಧ ರೀತಿಯಲ್ಲಿ ಆರಾಧಿ ಸಿಕೊಂಡು ಬಂದಿರುತ್ತಾರೆ. ಪ್ರತೀದಿನ ಬೆಳಗ್ಗೆ ಸೂರ್ಯನಿಗೆ ಅರ್ಘ್ಯ ನೀಡು ವುದು ಪೂರ್ವಜರ ಪದ್ಧತಿಯಾಗಿತ್ತು. ಪುರಾಣಗಳಲ್ಲಿ, ವೇದಗಳಲ್ಲಿ ಸೂರ್ಯಸ್ನಾನದ ಬಗ್ಗೆ ಉಲ್ಲೇಖವಿದೆ. ಅಥರ್ವ ವೇದದಲ್ಲಿ ಸೂರ್ಯ ಸ್ನಾನವು ವಿವಿಧ ರೋಗಗಳಿಗೆ ಮುಖ್ಯವಾಗಿ ಸಂಧಿವಾತ, ಮೂಳೆ ಸವೆತ, ಅಜೀರ್ಣ, ಅಧಿಕ ರಕ್ತ ದೊತ್ತಡ ಹೀಗೆ ಹಲವಾರು ಸಮಸ್ಯೆಗಳಿಗೆ ಉಪಕಾರಿ ಎಂಬುದಾಗಿ ಉಲ್ಲೇಖವಿದೆ.

ಸೂರ್ಯ ಸ್ನಾನ ಮಾಡುವ ವಿಧಾನ
 ತೆಳುವಾದ ಬಟ್ಟೆಯನ್ನು ಧರಿಸಬೇಕು. ಸಾಧ್ಯವಾದಷ್ಟು ಮಟ್ಟಿಗೆ ಶರೀರವು ಬಿಸಿಲಿಗೆ ಒಡ್ಡುವಂತಿರಬೇಕು.
 ಸೂರ್ಯನ ಬಿಸಿಲಿಗೆ ನಿಲ್ಲುವ ಮುನ್ನ 2-4 ಲೋಟ ನೀರನ್ನು ಕುಡಿದಿರಬೇಕು.
 ಅಗತ್ಯವಿದ್ದಲ್ಲಿ ತಲೆಯನ್ನು ಬಟ್ಟೆಯಿಂದ ಕಟ್ಟಿಕೊಳ್ಳುವುದು.
 ಸೂರ್ಯನ ಸ್ನಾನದ ಅನಂತರ, ನೆರಳಿನಲ್ಲಿ ನಡೆಯುವುದು ಅಥವಾ ನೀರಿನಿಂದ ಸ್ನಾನ ಮಾಡುವುದು ಉತ್ತಮ.
 ಶರೀರಕ್ಕೆ ಎಣ್ಣೆಯಿಂದ ಲೇಪನ ಮಾಡಿಕೊಂಡು ಸೂರ್ಯನ ಬಿಸಿಲಿಗೆ ನಿಂತರೆ ಉತ್ತಮ. ಸೂರ್ಯ ಸ್ನಾನದ ತತ್‌ಕ್ಷಣ ಸ್ನಾನಮಾಡುವುದಾಗಲಿ, ಆಹಾರ ಸೇವನೆಯಾಗಲಿ ಮಾಡಬಾರದು. ಪಾನೀಯ ಸ್ವೀಕರಿಸಬಹುದು.

ಸೂರ್ಯ ಸ್ನಾನದ ಅವಧಿ
 ಮುಂಜಾನೆ: ಸೂರ್ಯೋದಯದಿಂದ 2 ಗಂಟೆ
ಸಾಯಂಕಾಲ: ಸೂರ್ಯಾಸ್ತಮಾನಕ್ಕಿಂತ 2 ಗಂಟೆ ಮುನ್ನ
15 ನಿಮಿಷದಿಂದ 30 ನಿಮಿಷಗಳ ವರೆಗೆ ಸೂರ್ಯನ ಬಿಸಿಲಿಗೆ ಶರೀರವನ್ನು ಒಡ್ಡಬಹುದು.

ಮುಂಜಾಗ್ರತೆ
 ಬರೀ ಹೊಟ್ಟೆಯಲ್ಲಿ ಅಥವಾ ಹದವಾಗಿ ಆಹಾರ ಸೇವಿಸಬೇಕು.
 ಸೂರ್ಯನ ಬಿಸಿಲಿನ ಅಲರ್ಜಿ ಇದ್ದಲ್ಲಿ ಜಾಗರೂಕತೆ ವಹಿಸಬೇಕು.
ಪ್ರಥಮ ಬಾರಿಗೆ ಸೂರ್ಯ ಸ್ನಾನ ಮಾಡುವವರು 10 ನಿಮಿಷಕ್ಕೆ ಮಿತಿಗೊಳಿಸಬಹುದು.
ವಯಸ್ಸಾದವರು, ದೀರ್ಘ‌ ಕಾಲದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಜಾಗರೂಕತೆ ವಹಿಸಬೇಕು.

ಸೂರ್ಯ ಸ್ನಾನದ ಉಪಯೋಗಗಳು
 ಪ್ರತೀದಿನ ಸೂರ್ಯ ಸ್ನಾನ ಹಲವಾರು ರೀತಿಯ ಕ್ಯಾನ್ಸರನ್ನು ಮುಖ್ಯವಾಗಿ ಕರುಳಿನ ಕ್ಯಾನ್ಸರ್‌, ಪ್ರೊಸ್ಟೇಟ್‌ ಕ್ಯಾನ್ಸರ್‌, ಸ್ತನದ ಕ್ಯಾನ್ಸರ್‌ ಹಾಗೂ ಮಲ್ಟಿಪಲ್‌ ಸ್ಕ್ಲಿರೋಸಿಸ್‌, ರಕ್ತದೊತ್ತಡ, ಮಧುಮೇಹಗಳನ್ನು ತಡೆಯಲು ಸಹಕಾರಿ.
 ಸೂರ್ಯನ ಬೆಳಕಿನಲ್ಲಿ ವಿಟಮಿನ್‌ ಡಿ ಲಭ್ಯವಿರುವುದು. ಇದು ಮಾನಸಿಕ ಖನ್ನತೆ ಹಾಗೂ ಕಾಲ್ಸಿಯಂ ಹೀರುವಿಕೆಗೆ ಸಹಕಾರಿ. ಹಾಗಾಗಿ ಮೂಳೆ ಸವೆತವನ್ನು ತಡೆಯಲು ಸೂರ್ಯನ ಬೆಳಕು ಸೂಕ್ತ. ಇದರಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ರಕ್ತ ಕಣಗಳು
ಉತ್ಪತ್ತಿಯಾಗಲು ನೆರವಾಗುತ್ತದೆ. ಈ ಬಿಳಿ ರಕ್ತ ಕಣಗಳು ಹಲವು ಬಗೆಯ ಸೋಂಕುಗಳ ವಿರುದ್ಧ ಹೋರಾಡಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
 ಸೂರ್ಯನ ಬೆಳಕಿನ ಪರಿಣಾಮದಿಂದ ನೈಟ್ರಿಕ್‌ ಆಕ್ಸೆ„ಡ್‌, ಮೆಲಟೋನಿನ್‌, ಸೆರಟೋ ನಿನ್ನಂತಹ ರಾಸಾಯನಿಕ ಪದಾರ್ಥಗಳು ಹೇರಳವಾಗಿ ದೊರೆತು ದೇಹದ ಪ್ರತಿರಕ್ಷಣ ವ್ಯವಸ್ಥೆ ಉತ್ತಮಗೊಳ್ಳುತ್ತದೆ.
 ಸೂರ್ಯ ಸ್ನಾನ ವಿವಿಧ ಬಗೆಯ ಚರ್ಮದ ಕಾಯಿಲೆ (ಎಕ್ಸಿಮ, ಸೋರಿಯಾಸಿಸ್‌) ಗಳ ನಿವಾರಣೆಗೆ ಕೂಡ ಸಹಕಾರಿ.
 ಸಂಧಿವಾತ, ನಿದ್ರಾಹೀನತೆ, ಮಾನಸಿಕ ಖನ್ನತೆ, ಸಂಧಿನೋವು, ಮಾನಸಿಕ ಒತ್ತಡ ಹೀಗೆ ಇನ್ನೂ ಹಲವಾರು ಕಾಯಿಲೆಗಳಿಗೆ ಸೂರ್ಯ ಸ್ನಾನ ರಾಮಬಾಣವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸೂರ್ಯ ಸ್ನಾನವು ಯಾವುದೇ ವೆಚ್ಚವಿಲ್ಲದೆ, ಪರಿಕರಗಳ ನೆರ ವಿಲ್ಲದೆ, ಸುಲಭವಾಗಿ, ಸರಳವಾಗಿ ಅನುಸರಿಸಬಹುದಾದ ಮನೆಮದ್ದು ಎಂದೇ ಹೇಳಬಹುದು.

ಡಾ| ಹರ್ಷಿಣಿ,ಉಜಿರೆ

ಟಾಪ್ ನ್ಯೂಸ್

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.