T20; ಆಸ್ಟ್ರೇಲಿಯ ಎದುರು ಭಾರತಕ್ಕೆ ಭರ್ಜರಿ ಗೆಲುವು:ಸಾಧು, ಮಂಧನಾ, ಶಫಾಲಿ ಸಾಹಸ
Team Udayavani, Jan 5, 2024, 11:24 PM IST
ಮುಂಬಯಿ: ಬೌಲರ್ ತಿತಾಸ್ ಸಾಧು, ಆರಂಭಿಕರಾದ ಸ್ಮತಿ ಮಂಧನಾ ಮತ್ತು ಶಫಾಲಿ ವರ್ಮ ಅವರ ಅಮೋಘ ಸಾಹಸದಿಂದ ಆಸ್ಟ್ರೇಲಿಯ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಪ್ರಚಂಡ ಗೆಲುವು ಸಾಧಿಸಿದೆ. ಏಕದಿನದಲ್ಲಿ ಅನುಭವಿಸಿದ ವೈಟ್‌ವಾಶ್‌ಗೆ ಸೇಡು ತೀರಿಸಿಕೊಳ್ಳುವ ಸೂಚನೆ ನೀಡಿದೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 19.2 ಓವರ್‌ಗಳಲ್ಲಿ 141 ರನ್ ಗಳಿಸಿದರೆ, ಭಾರತ 17.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 145 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಸ್ಮತಿ ಮಂಧನಾ ಮತ್ತು ಶಫಾಲಿ ವರ್ಮ 15.2 ಓವರ್‌ಗಳಲ್ಲಿ 137 ರನ್ ಪೇರಿಸಿ ಭಾರತದ ಗೆಲುವನ್ನು ಸುಲಭಗೊಳಿಸಿದರು. ಮಂಧನಾ 52 ಎಸೆತಗಳಿಂದ 54 ರನ್ ಹೊಡೆದರೆ (7 ಬೌಂಡರಿ, 1 ಸಿಕ್ಸರ್), ಶಫಾಲಿ 64 ರನ್ ಬಾರಿಸಿ ಅಜೇಯರಾಗಿ ಉಳಿದರು. 44 ಎಸೆತಗಳ ಈ ಬಿರುಸಿನ ಆಟದ ವೇಳೆ 6 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದರು.
ಸಾಧು ಶ್ರೇಷ್ಠ ಬೌಲಿಂಗ್
ಆಸ್ಟ್ರೇಲಿಯದ ಆಲೌಟ್‌ನಲ್ಲಿ ತಿತಾಸ್ ಸಾಧು ಅವರ ಜೀವನಶ್ರೇಷ್ಠ ಬೌಲಿಂಗ್ ಪಾತ್ರ ಪ್ರಮುಖವಾಗಿತ್ತು. 19 ವರ್ಷದ, ಬಲಗೈ ಪೇಸ್ ಬೌಲರ್ ಆಗಿರುವ ಸಾಧು 17 ರನ್ ವೆಚ್ಚದಲ್ಲಿ 4 ವಿಕೆಟ್ ಉಡಾಯಿಸಿದರು. ಉಳಿದಂತೆ ಶ್ರೇಯಾಂಕಾ ಪಾಟೀಲ್ ಮತ್ತು ದೀಪ್ತಿ ಶರ್ಮ ತಲಾ 2, ರೇಣುಕಾ ಸಿಂಗ್ ಮತ್ತು ಅಮಮನ್‌ಜೋತ್ ಕೌರ್ ಒಂದೊಂದು ವಿಕೆಟ್ ಕೆಡವಿದರು.
ಸಾಧು ಬೌಲಿಂಗ್ ಮೋಡಿಗೆ ಸಿಲುಕಿದವರೆಂದರೆ ಬೆತ್ ಮೂನಿ (17), ಟಹ್ಲಿಯಾ ಮೆಕ್‌ಗ್ರಾತ್ (0), ಆ್ಯಶ್ಲಿ ಗಾರ್ಡನರ್ (0) ಮತ್ತು ಸದರ್‌ಲ್ಯಾಂಡ್ (12).ಎಂದಿನಂತೆ ಫೋಬ್ ಲಿಚ್‌ಫೀಲ್ಡ್ ಮತ್ತು ಎಲ್ಲಿಸ್ ಪೆರ್ರಿ ಆಸ್ಟ್ರೇಲಿಯದ ರಕ್ಷಣೆಗೆ ನಿಂತರು. 32 ಎಸೆತಗಳಿಂದ 49 ರನ್ ಬಾರಿಸಿದ ಲಿಚ್‌ಫೀಲ್ಡ್ ಆಸೀಸ್ ಸರದಿಯ ಟಾಪ್ ಸ್ಕೋರರ್. ಸಿಡಿಸಿದ್ದು 4 ಬೌಂಡರಿ ಹಾಗೂ 3 ಸಿಕ್ಸರ್. ಆದರೆ ಲಿಚ್‌ಫೀಲ್ಡ್ ಇಲ್ಲಿ ಓಪನಿಂಗ್ ಬದಲು 6ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು.ಪೆರ್ರಿ 30 ಎಸೆತಗಳಿಂದ 37 ರನ್ ಹೊಡೆದರು. ಇದರಲ್ಲಿ 2 ಫೋರ್, 2 ಸಿಕ್ಸರ್ ಸೇರಿತ್ತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-19.2 ಓವರ್‌ಗಳಲ್ಲಿ 141 (ಲಿಚ್‌ಫೀಲ್ಡ್ 49, ಪೆರ್ರಿ 37, ಮೂನಿ 17, ಸಾಧು 17ಕ್ಕೆ 4, ಶ್ರೇಯಾಂಕಾ 19ಕ್ಕೆ 2, ದೀಪ್ತಿ 24ಕ್ಕೆ 2). ಭಾರತ-17.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 145 (ಶಫಾಲಿ ಔಟಾಗದೆ 64, ಮಂಧನಾ 54, ವೇರ್‌ಹ್ಯಾಮ್ 20ಕ್ಕೆ 1).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.