ICC ಪ್ರಶಸ್ತಿ ರೇಸ್‌ನಲ್ಲಿ ಕೊಹ್ಲಿ, ಜಡೇಜ, ಅಶ್ವಿನ್
Team Udayavani, Jan 6, 2024, 6:00 AM IST
ದುಬಾೖ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಆಲ್‌ರೌಂಡರ್ ರವೀಂದ್ರ ಜಡೇಜ ಮತ್ತು ಸ್ಪಿನ್ನರ್ ಆರ್. ಅಶ್ವಿನ್ ಐಸಿಸಿ ವರ್ಷದ ಕ್ರಿಕೆಟರ್ ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಇವರಲ್ಲಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ಅವರು “ಸರ್ ಗ್ಯಾರ್‌ಫೀಲ್ಡ್ ಸೋಬರ್ ಟ್ರೋಫಿ’ಗಾಗಿ ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಮತ್ತು ಟ್ರ್ಯಾವಿಸ್ ಹೆಡ್ ಅವರೊಂದಿಗೆ ಸ್ಪರ್ಧೆಗೆ ಇಳಿಯಲಿದ್ದಾರೆ.
ಆರ್. ಅಶ್ವಿನ್ ವರ್ಷದ ಟೆಸ್ಟ್ ಕ್ರಿಕೆಟರ್ ಸ್ಪರ್ಧೆಯಲ್ಲಿದ್ದಾರೆ. ಇಲ್ಲಿಯೂ ಟ್ರ್ಯಾವಿಸ್ ಹೆಡ್ ರೇಸ್‌ನಲ್ಲಿದ್ದಾರೆ. ಜತೆಗೆ ಆಸೀಸ್ ಆರಂಭಕಾರ ಉಸ್ಮಾನ್ ಖ್ವಾಜಾ, ಇಂಗ್ಲೆಂಡ್‌ನ ಜೋ ರೂಟ್ ಕೂಡ ಇದ್ದಾರೆ.
ಭಾರತೀಯರ ಸಾಧನೆ
ವಿರಾಟ್ ಕೊಹ್ಲಿ 2023ರ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ 2,048 ರನ್ ಬಾರಿಸಿದ್ದಾರೆ (35 ಪಂದ್ಯ). 50ನೇ ಏಕದಿನ ಶತಕ ಬಾರಿಸಿದ್ದು ಕೊಹ್ಲಿ ಅವರ ಪ್ರಚಂಡ ಸಾಹಸಕ್ಕೆ ಸಾಕ್ಷಿ.ರವೀಂದ್ರ ಜಡೇಜ 35 ಪಂದ್ಯಗಳಿಂದ 613 ರನ್ ಜತೆಗೆ 66 ವಿಕೆಟ್ ಸಂಪಾದಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ 22 ವಿಕೆಟ್ ಉರುಳಿಸಿದ ಸಾಧನೆ ಇವರದ್ದಾಗಿದೆ.
ಆರ್. ಅಶ್ವಿನ್ ಕಳೆದ ವರ್ಷದ ಅಗ್ರಮಾನ್ಯ ಟೆಸ್ಟ್ ಬೌಲರ್ ಆಗಿ ಮೂಡಿಬಂದಿದ್ದಾರೆ, 17.02ರ ಸರಾಸರಿಯಲ್ಲಿ ಸರ್ವಾಧಿಕ 41 ವಿಕೆಟ್ ಕೆಡವಿದ ಹಿರಿಮೆ ಇವರದಾಗಿದೆ. ಇನ್ನಿಂಗ್ಸ್ ಒಂದರಲ್ಲಿ ಅತೀ ಹೆಚ್ಚು 4 ಸಲ “5 ಪ್ಲಸ್’ ವಿಕೆಟ್ ಉರುಳಿಸಿದ್ದಾರೆ.
ಪ್ಯಾಟ್ ಕಮಿನ್ಸ್ 24 ಪಂದ್ಯಗಳಿಂದ 59 ವಿಕೆಟ್ ಉರುಳಿಸುವ ಜತೆಗೆ 422 ರನ್ ಕೂಡ ಬಾರಿಸಿದ್ದಾರೆ. ಇದಕ್ಕಿಂತ ಮಿಗಿಲಾಗಿ ಆಸ್ಟ್ರೇಲಿಯದ 6ನೇ ವಿಶ್ವಕಪ್ ಗೆಲುವಿನ ನಾಯಕನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ವಿಶ್ವಕಪ್ ಫೈನಲ್ ಪಂದ್ಯದ ಹೀರೋ ಟ್ರ್ಯಾವಿಸ್ ಹೆಡ್ 31 ಪಂದ್ಯಗಳನ್ನಾಡಿದ್ದು, 1,698 ರನ್ ಸಂಪಾದಿಸಿದ್ದಾರೆ.
ವನಿತಾ ವಿಭಾಗ
“ರಶೆಲ್ ಹೇವೊ ಫ್ಲಿಂಟ್ ಟ್ರೋಫಿ’ಗಾಗಿ ನಡೆಯುವ ಐಸಿಸಿ ವರ್ಷದ ವನಿತಾ ಆಟಗಾರ್ತಿ ಪ್ರಶಸ್ತಿ ರೇಸ್‌ನಲ್ಲಿ ಭಾರತೀಯರ್ಯಾರೂ ಕಾಣಿಸಿಕೊಂಡಿಲ್ಲ. ಇಲ್ಲಿರುವವರೆಂದರೆ ಚಾಮರಿ ಅತಪಟ್ಟು (ಶ್ರೀಲಂಕಾ), ಆ್ಯಶ್ಲಿ ಗಾರ್ಡನರ್, ಬೆತ್ ಮೂನಿ (ಆಸ್ಟ್ರೇಲಿಯ) ಮತ್ತು ನ್ಯಾಟ್ ಸ್ಕಿವರ್ ಬ್ರಂಟ್ (ಇಂಗ್ಲೆಂಡ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.