Hijacked ಹಡಗು ನಿಯಂತ್ರಣಕ್ಕೆ: 21 ಸಿಬಂದಿಯನ್ನು ರಕ್ಷಿಸಿದ ನೌಕಾಪಡೆ
ಐಎನ್ಎಸ್ ಚೆನ್ನೈ ಕಾರ್ಯಾಚರಣೆ, ಸುಸ್ಥಿತಿಯಲ್ಲಿ "ಲಿಲಾ ನಾರ್ಫೋಕ್'
Team Udayavani, Jan 6, 2024, 12:48 AM IST
ಹೊಸದಿಲ್ಲಿ: ಗುರುವಾರ ಸಂಜೆಯ ವೇಳೆಗೆ ಮತ್ತೊಮ್ಮೆ ಸರಕು ಸಾಗಣೆ ಹಡಗಿನ ಮೇಲೆ ದಾಳಿಯಾಗಿದೆ. ಸೋಮಾಲಿಯಕ್ಕೆ ಸನಿಹವಿರುವ ಉತ್ತರ ಅರಬಿ ಸಮುದ್ರ ಭಾಗದಲ್ಲಿ ಲೈಬೀರಿಯದ ಎಂವಿ ಲಿಲಾ ನಾರ್ಫೋಕ್ ಹಡಗಿನ ಮೇಲೆ ದಾಳಿ ನಡೆದಿದೆ. ಹಡಗಿನಲ್ಲಿದ್ದ ಒಟ್ಟು 21 ಸಿಬಂದಿಯ ಪೈಕಿ 15 ಭಾರತೀಯರಿದ್ದರು. ಐಎನ್ಎಸ್ ಚೆನ್ನೈ ತತ್ಕ್ಷಣ ಕಾರ್ಯಾಚರಣೆ ನಡೆಸಿ ದಾಳಿಗ್ರಸ್ತ ಹಡಗನ್ನು ಶುಕ್ರವಾರ ನಿಯಂತ್ರಣಕ್ಕೆ ಪಡೆದಿದೆ.
ಈ ಕೃತ್ಯವನ್ನು ಯಾರು ಎಸಗಿದ್ದು ಎಂದು ಇನ್ನೂ ಖಚಿತವಾಗಿಲ್ಲ. ಇತ್ತೀಚೆಗೆ ಸತತವಾಗಿ ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ಎಸಗುತ್ತಿರುವ ಯೆಮೆನ್ ದೇಶದ ಹೌಥಿ ಬಂಡುಕೋರರ ಮೇಲೆ ಅನುಮಾನ ಮೂಡಿದೆ.
ಗುರುವಾರ ಸಂಜೆಯೇ ಮಾಹಿತಿ
ಲಿಲಾ ನಾರ್ಫೋಕ್ ಹಡಗಿನ ಸಿಬಂದಿ ಸೋಮಾಲಿಯ ಬಳಿ 5ರಿಂದ 6 ಶಸ್ತ್ರಸಜ್ಜಿತ ವ್ಯಕ್ತಿಗಳು ತಮ್ಮ ಹಡಗನ್ನೇರಿದ್ದಾರೆ ಎಂದು ಬ್ರಿಟನ್ನಿನ ಯುಕೆಎಂಟಿಒ ಸಂಸ್ಥೆಗೆ ಮಾಹಿತಿ ನೀಡಿತ್ತು. ಆ ಕೂಡಲೇ ಭಾರತೀಯ ನೌಕಾಪಡೆಯು ಐಎನ್ಎಸ್ ಚೆನ್ನೈ ಯುದ್ಧ ಹಡಗನ್ನು ಕಳುಹಿಸಿತ್ತು. ಶುಕ್ರವಾರ ಲಿಲಾ ನಾರ್ಫೋಕ್ ಬಳಿ ಧಾವಿಸಿದ ಭಾರತೀಯ ನೌಕಾಪಡೆಯ ಕಮಾಂಡೋಗಳು ಹಡಗನ್ನು ಪೂರ್ಣ ನಿಯಂತ್ರಣಕ್ಕೆ ಪಡೆದಿದ್ದಾರೆ.
ಬಿಗಿ ರಕ್ಷಣೆ
ಐಎನ್ಎಸ್ ಚೆನ್ನೈ ಜತೆಗೆ ಪಿ-8ಎಲ್ ಸಂಚಾರಿ ಯುದ್ಧವಿಮಾನವೂ ಲಿಲಾ ನಾರ್ಫೋಕ್ಗೆ ರಕ್ಷಣೆ ನೀಡುತ್ತಿದೆ. ದೂರವ್ಯಾಪ್ತಿಯ ಎಂಕ್ಯು9ಬಿ ಬೇಟೆ ಡ್ರೋನ್ ಪರಿಸ್ಥಿತಿಯ ಮೇಲೆ ಕಣ್ಣಿರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.