CJI ಮುಂದೆಯೇ ವಿಸ್ಕಿ ಬಾಟಲಿ ತಂದಿಟ್ಟ ವಕೀಲ!- ಸುಪ್ರೀಂನಲ್ಲೊಂದು ಅಪರೂಪದ ಬೆಳವಣಿಗೆ
Team Udayavani, Jan 6, 2024, 12:47 AM IST
ಹೊಸದಿಲ್ಲಿ: ಟ್ರೇಡ್ಮಾರ್ಕ್ ಉಲ್ಲಂಘನೆ ಪ್ರಕರಣವೊಂದರ ಅರ್ಜಿ ಆಲಿಸುತ್ತಿದ್ದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮುಂದೆಯೇ ವಕೀಲರು 2 ವಿಸ್ಕಿ ಬಾಟಲಿಗಳನ್ನು ತಂದಿಟ್ಟಿದ್ದಾರೆ.
ಪೆನಾರ್ಡ್ ರಿಚರ್ಡ್ಸ್ ಹಾಗೂ ಜೆ.ಕೆ.ಎಂಟರ್ಪ್ರೈಸಸ್ ಎಂಬ ಮದ್ಯ ತಯಾರಿಕ ಸಂಸ್ಥೆಗಳ ನಡುವೆ “ಲಂಡನ್ ಪ್ರೈಡ್’ಎಂಬ ಹೆಸರನ್ನು ಬಳಸಿ ಮದ್ಯ ತಯಾರಿಸುವ ಬಗ್ಗೆ ವಿವಾದ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜೆ.ಕೆ. ಸಂಸ್ಥೆಯ ಉತ್ಪಾದನೆಗೆ ತಡೆ ನೀಡುವಂತೆ ಕೋರಿ ರಿಚರ್ಡ್ಸ್ ಸಂಸ್ಥೆ ಮಧ್ಯಪ್ರದೇಶ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ತಡೆ ನೀಡಲು ನಿರಾಕರಿಸಿದ ಹಿನ್ನೆಲೆ ಇದನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮ ನವಿ ಸಲ್ಲಿಸಲಾಗಿತ್ತು. ಸುಪ್ರೀಂನಲ್ಲಿ ವಿಚಾರಣೆ ವೇಳೆ ವಕೀಲ ಮುಕುಲ್ ರೋಹrಗಿ ಅವರು ಸಿಜೆಐ ಸಮ್ಮತಿ ಪಡೆದು ನ್ಯಾಯಪೀಠದ ಮುಂದೆಯೇ ಎರಡೂ ಸಂಸ್ಥೆಗಳ ಮದ್ಯದ ಬಾಟಲಿ ತಂದಿಟ್ಟಿದ್ದಾರೆ. ಈ ವೇಳೆ ಸಿಜೆಐ ನಕ್ಕು, “ನೀವು ಬಾಟಲಿಗಳನ್ನೂ ಜತೆಗೆ ತಂದಿರುವಿರೇ’ ಎಂದು ಛೇಡಿಸಿದ್ದಾರೆ. ವಿಚಾರಣೆ ಬಳಿಕ ಈ ಬಾಟಲಿಗಳನ್ನು ನಾನು ಕೊಂಡೊಯ್ಯಬಹುದೇ ಎಂದೂ ವಕೀಲರು ಕೇಳಿದ್ದು, ಸಿಜೆಐ ನಗುತ್ತಾ”ದಯವಿಟ್ಟು ಕೊಂಡು ಹೋಗಿ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.