Fraud: ಷೇರಿನಲ್ಲಿ ಹೂಡುವಂತೆ ಆಸೆ ತೋರಿಸಿ 1.30 ಕೋಟಿ ರೂ. ವಂಚನೆ
Team Udayavani, Jan 6, 2024, 11:36 AM IST
ಬೆಂಗಳೂರು: ಷೇರಿನಲ್ಲಿ ದುಡ್ಡು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ವ್ಯಕ್ತಿಯೊಬ್ಬರಿಗೆ ಮಹಿಳೆ 1.30 ಕೋಟಿ ರೂ. ಟೋಪಿ ಹಾಕಿದ್ದಾಳೆ.
ಕೆಂಗೇರಿ ನಿವಾಸಿ ಕೆಂಚಯ್ಯ (43) ವಂಚನೆಗೊಳಗಾದವರು. ಕೆಂಚಯ್ಯ ವಾಟ್ಸ್‌ಆ್ಯಪ್‌ಗೆ ಇತ್ತೀಚೆಗೆ ಅಪರಿ ಚಿತ ಮಹಿಳೆ ಮೀನಾಕ್ಷಿ ಎಂಬುವ ವರು ವಾಟ್ಸ್ ಆ್ಯಪ್ ಗ್ರೂಪ್‌ನಿಂದ ಸಂದೇಶ ಕಳಿಸಿದ್ದರು. ಷೇರುಗಳಲ್ಲಿ ಹೂಡಿಕೆ ಮಾಡಿದರೆ ಅತೀ ಹೆಚ್ಚು ಲಾಭವಾಗುತ್ತದೆ ಎಂದು ನಂಬಿಸಿದ್ದಳು. ಷೇರಿನ ಬಗ್ಗೆ ತರಗತಿಗಳು ನಡೆಯುತ್ತಿದ್ದು ಅದನ್ನು ನೋಡುವಂತೆ ಹೇಳಿದ್ದಳು. ಮಹಿಳೆಯ ಮಾತಿನ ಮೋಡಿಗೆ ಮರುಳಾದ ಕೆಂಚಯ್ಯ, ಮಹಿಳೆ ಹೇಳಿದ ಲಿಂಕ್ ಕ್ಲಿಕ್ ಮಾಡಿ ಆನ್‌ಲೈನ್ ತರಗತಿಗೆ ಸೇರುವುದಾಗಿ ಹೇಳಿ ದ್ದರು. ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಇದ್ದ ಹಲವರು ಹೆಚ್ಚಿನ ಲಾಭ ಪಡೆದಿದ್ದಾರೆ ಎಂದು ಮಹಿಳೆಯು ಸ್ಟ್ರೀನ್ ಶಾಟ್ ಕಳಿಸಿದ್ದಳು. ಇದನ್ನು ನಂಬಿದ ಕೆಂಚಯ್ಯ ಮಹಿಳೆಯ ಮೂಲಕ ಷೇರುಗಳಿಗೆ ಹಣ ಹೂಡಿಕೆ ಮಾಡಲು ಒಪ್ಪಿಕೊಂಡಿದ್ದರು. ನಂತರ ಮಹಿಳೆ ಲಿಂಕ್‌ವೊಂದನ್ನು ಕಳುಹಿಸಿ ಡೌನ್ ಲೌಡ್ ಮಾಡಿಕೊಳ್ಳುಲು ಹೇಳಿದ್ದರು.
ಲಿಂಕ್ ಓಪನ್ ಮಾಡಿ ಅಪರಿಚಿತರು ಕೊಟ್ಟಂತಹ ಖಾತೆಗಳಿಗೆ ಕೆಂಚಯ್ಯ ಹಣ ಹಾಕಿದ್ದರು. ನಂತರ ಅಪರಿಚಿತರು ಇನ್ನೂ ಹೆಚ್ಚಿನ ಲಾಭವನ್ನು ತಂದುಕೊಡುವ ವಿಐಪಿ ಗ್ರೂಪ್‌ಗೆ ಸೇರಿಸುತ್ತೇನೆಂದು ಹೇಳಿ ಹಂತವಾಗಿ ಕೆಂಚಯ್ಯ ಅವರಿಂದ ಒಟ್ಟು 1.30 ಕೋಟಿ ರೂ. ಅನ್ನು ವಿವಿಧ ಅಪರಿಚಿತರ ಹೆಸರಿನ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ವಗ್ವಾಣೆ ಮಾಡಿಸಿಕೊಂಡಿದ್ದರು. ನಂತರ ಯಾವುದೇ ಹಣವನ್ನು ಕೆಂಚಯ್ಯ ಅವರಿಗೆ ನೀಡಲಿಲ್ಲ. ಕಟ್ಟಿರುವ ಹಣವನ್ನು ವಿತ್ ಡ್ರಾ ಮಾಡಲು ಪುನಃ ಹಣವನ್ನು ಪೇ ಮಾಡಿ ಎಂದು ಮಹಿಳೆ ಹೇಳುತ್ತಿದ್ದಾರೆ ಎಂದು ಕೆಂಚಯ್ಯ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.