NEW YEAR: 2024 ಬಂದೆ ಬಿಡ್ತು ನೋಡಿ
Team Udayavani, Jan 6, 2024, 3:21 PM IST
ಕೇವಲ ಕ್ಯಾಲೆಂಡರ್ ಹಾಗೂ ಇಸವಿಗಳು ಮಾತ್ರ ಬದಲಾಗುವುದನ್ನು ನಾವು ಹೊಸ ವರ್ಷವೆಂದು ಆಚರಿಸುತ್ತಿದ್ದೇವೆ.
ಆದರೆ ನಮಗೆ ನಿಜವಾಗಿಯೂ ಹೊಸ ವರ್ಷ ಯಾವಾಗ..? ಎಂದು ನೋಡಿದರೆ ಯುಗಾದಿ ಹಬ್ಬದಂದು ಭಾರತೀಯರಿಗೆ ಹೊಸ ವರ್ಷ ಎನ್ನುಬಹುದು.
ಹೀಗೆ ಒಮ್ಮೆ ಯೋಚಿಸಿದಾಗ ಎಲ್ಲೋ ಒಂದು ಕಡೆ ನಮ್ಮತನವನ್ನು ಬಿಟ್ಟು ಕೊಡುತ್ತಿದ್ದೇವೆ ಎಂದು ಅನಿಸುವುದು ಸಹಜ.
500 ವರ್ಷಗಳ ಕಾಲ ನಮ್ಮನ್ನು ಆಳಿದ ಬ್ರಿಟಿಷ್ ರು ಬಿಟ್ಟು ಹೋದ ಸಂಸ್ಕೃತಿಯನ್ನು ಇಂದಿಗೂ ಭಾರತೀಯರಾದ ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಾ ಇದ್ದೇವೆ ಅಲ್ಲವೇ..?
ಆದರೆ ಭಾರತೀಯರ ಮೂಲ ಸಂಸ್ಕೃತಿಯ ಪ್ರಕಾರ ಯುಗಾದಿಯಂದು ಹೊಸ ವರ್ಷ. ಅಂದು ಚೈತ್ರ ಮಾಸದ, ವಸಂತ ಋತು ಆರಂಭದ ದಿನ. ಈ ದಿನಗಳಲ್ಲಿ ಪರಿಸರದಲ್ಲಿಯೂ ಹಲವಾರು ಬದಲಾವಣೆಯಾಗುವುದನ್ನು ಕಾಣಬಹುದು.
ಬೀಜಗಳು ಮೊಳಕೆಯೊಡೆದು, ಪುಟ್ಟ ಸಸಿಯಾಗಿ, ಗಿಡ ವಾಗುತ್ತದೆ, ಗಿಡವು ಮರವಾಗಿ ಬೆಳೆಯುತ್ತದೆ.ಹಾಗೂ ಗಿಡ ಮರಗಳಲ್ಲಿ ಎಲೆಗಳು ಹೊಸದಾಗಿ ಚಿಗುರೊಡೆಯುತ್ತದೆ. ಸುಂದರವಾದ ಹೂವುಗಳು ಅರಳಿ ತನ್ನ ಸೌಂದರ್ಯವನ್ನು ತೋರ್ಪಡಿಸಿ ಕೊಳ್ಳುತ್ತವೆ. ಪ್ರಕೃತಿಯೂ ಹಸುರಿನ ಹೊದಿಕೆಯಿಂದ ಕಂಗೊಳಿಸುತ್ತಿರುತ್ತವೆ. ಹೀಗೆ ಪರಿಸರದಲ್ಲಿಯೂ ಹೊಸ ತನದ ಹಾಗೂ ಹೊಸ ವರ್ಷದ ಸಂಕೇತವನ್ನು ನೋಡಬಹುದು.
ಹೀಗೆ ಪ್ರಕೃತಿಯಲ್ಲಿ ಎಷ್ಟು ಚಂದ ಹೊಸತನ ಮೂಡುವುದೋ ಹಾಗೆಯೇ ನಮ್ಮಲ್ಲಿಯೂ ಅದೇ ರೀತಿಯ ಹೊಸ ತನವನ್ನು ಮೂಡಿಸುವ ಉದ್ದೇಶದಿಂದ ಈ ವರ್ಷದ ಪ್ರಾರಂಭವನ್ನು ನಮ್ಮ ಪೂರ್ವಜರ ಪಾಲನೆ ಯಂತೆ ಯುಗಾದಿ ಹಬ್ಬದಂದು ಶುರು ಮಾಡಬಹುದು.
ಇಂಗ್ಲಿಷ್‌ರು ರೂಪಿಸಿದ ಪದ್ಧತಿ ತಪ್ಪು ಅಂತಲೂ ಹೇಳಲಾಗುವುದಿಲ್ಲ. ಆದರೆ ಭಾರತೀಯರಾದ ನಾವು ನಮ್ಮ ತನವನ್ನು ಬಿಡಬಾರದು. ಸ್ವೇಹಿತರೇ ಇನ್ನೊಂದು ಮಾತು ಈ ದಿನ ಯುವ ಪೀಳಿಗೆ ರಾದ ನಾವು 31sಠಿ ಎನ್ನುವ ಶೋಕಿ ಯಲ್ಲಿ ತಲ್ಲೀನರಾಗದೆ ಮನೆಯವರೊಟ್ಟಿಗೆ ಸಂತೋಷದಿಂದ ಯುಗಾದಿ ಹಬ್ಬದಂದು ಕೂಡ ಹೊಸ ವರ್ಷವನ್ನು ಆಚರಿಸೋಣ…
-ಕಾವ್ಯಾ ರಮೇಶ್ ಹೆಗಡೆ
ಎಂ.ಎಂ., ಕಾಲೇಜು ಶಿರಸಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.