Ram Mandir: ಪ್ರಾಣ ಪ್ರತಿಷ್ಠಾಪನೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ: ಸಿದ್ದು ಸವದಿ

Team Udayavani, Jan 6, 2024, 4:44 PM IST

Ram Mandir: ಪ್ರಾಣ ಪ್ರತಿಷ್ಠಾಪನೆಗೆ ಇಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ: ಸಿದ್ದು ಸವದಿRam Mandir: ಪ್ರಾಣ ಪ್ರತಿಷ್ಠಾಪನೆಗೆ ಇಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ: ಸಿದ್ದು ಸವದಿ

ರಬಕವಿ ಬನಹಟ್ಟಿ : ಭಾರತದ ಹಿಂದೂ ಧರ್ಮ ಅತ್ಯಂತ ಸನಾತನ ಧರ್ಮವಾಗಿದ್ದು, ಶ್ರೀರಾಮ ಮಂದಿರ ನಿರ್ಮಾಣ ರಾಷ್ಟ್ರೀಯತೆಯ ಪ್ರತೀಕವಾಗಿದೆ. ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

ಅವರು ಶನಿವಾರ ಬನಹಟ್ಟಿಯ ಹನುಮಾನ ದೇವಸ್ಥಾನದಲ್ಲಿ ಶ್ರೀರಾಮ ಮಂದಿರದ ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜನರ ಸಹಕಾರ, ಕೊಡುಗೆಯಿಂದ ಕೋಟ್ಯಾಂತರ ರೂ ಖರ್ಚು ಮಾಡಿ ಭವ್ಯವಾದ ಐತಿಹಾಸಿಕ ರಾಮ ಮಂದಿರ ನಿರ್ಮಾಣವಾಗಿದೆ. ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ನಾವೆಲ್ಲರೂ ಒಂದಾಗಿ ರಾಷ್ಟ್ರೀಯತೆಯ ಪ್ರತೀಕವಾಗಿರುವ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ಜ. 22 ರಂದು ನಡೆಯಲಿದೆ. ಅದಕ್ಕೆ ಮುಂಚಿತವಾಗಿ ಜಾಗೃತಿ ಮೂಡಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಮಂತ್ರಾಕ್ಷತೆಯನ್ನು ಮನೆ ಮನೆಗೆ ನೀಡುವ ಕಾರ್ಯ ಕ್ಷೇತ್ರದಲ್ಲಿ ಪ್ರಾರಂಭವಾಗುತ್ತಿದೆ.

ರಾಮ ಮಂದಿರದ ಪ್ರತಿಷ್ಠಾಪನೆಯ ಸಂದೇಶವನ್ನು ದೇಶದ ಪ್ರತಿಯೊಂದು ಮನೆಗೂ ತಲುಪಿಸುವುದು, ಆಹ್ವಾನ ನೀಡುವುದು ಉದ್ದೇಶವಾಗಿದೆ. ಭಾರತ ಬಲಿಷ್ಠವಾಗಿ ಹೋಗಲು, ನಾವೆಲ್ಲ ಒಂದಾಗಲೂ ನಮ್ಮ ಸನಾತನ ಧರ್ಮವನ್ನು ಉಳಿಸಿ ಬೆಳೆಸಬೇಕು. ಸ್ವಇಚ್ಛೆಯಿಂದ ಸಂಘಟಿತರಾಗಿ ಕೆಲಸಮಾಡೋಣ.

ಜ. 22 ರಂದು ನಡೆಯುವ ಕಾರ್ಯಕ್ರಮದಂದು ಕ್ಷೇತ್ರಾದ್ಯಂತ ಮನೆಮನೆಗಳಲ್ಲಿ ಕನಿಷ್ಠ5 ದೀಪಗಳನ್ನು ಹಚ್ಚುವುದರ ಮೂಲಕ ಶ್ರೀ ರಾಮ ಮಂದಿರ ಉದ್ಘಾಟನೆಯನ್ನು ಸಂಭ್ರಮ ಸಡಗರದಿಂದ ಆಚರಿಸೋಣ ಎಂದರು.

ಈ ಸಂದರ್ಭದಲ್ಲಿ ಪಟ್ಟಣದ ಗೌಡರಾದ ಸಿದ್ದನಗೌಡ ಪಾಟೀಲ, ರಾಜುಗೌಡ ಪಾಟೀಲ, ಸುರೇಶ ಚಿಂಡಕ, ಶಿವಾನಂದ ಗಾಯಕವಾಡ, ವೀರುಪಾಕ್ಷಯ್ಯ ಮಠದ, ವಿದ್ಯಾಧರ ಸವದಿ, ಶಿವಾನಂದ ಕಾಗಿ, ಅಶೋಕ ರಾವಳ, ಶ್ರೀಶೈಲ ಬೀಳಗಿ, ಶ್ರೀನಿವಾಸ ಹಳ್ಯಾಳ, ಭೀಮಸಿ ಆದಗೊಂಡ, ಪ್ರಭಾಕರ ಮೊಳೇದ, ಈರಯ್ಯ ಪರಾಳಮಠ, ಶಾಂತವೀರ ಚನಪನ್ನವರ, ಶ್ರೀಶೈಲ ಮಠಪತಿ, ದುಂಡಪ್ಪ ಮಾಚಕನೂರ, ಪರಶುರಾಮ ರಾವಳ, ಚಿದಾನಂದ ಹೊರಟ್ಟಿ, ರೇವಪ್ಪ ಗುಣಕಿ, ಶ್ರೀಶೈಲ ಬಡಿಗೇರ, ಪ್ರವೀಣ ಧಬಾಡಿ, ಕಾಳಪ್ಪ ಬಡಿಗೇರ, ಈರಣ್ಣ ಚಿಂಚಖಂಡಿ, ಸದಾಶಿವ ಪರೀಟ, ಮಲ್ಲು ಸಾರವಾಡ, ಶಶಿಕಲಾ ಸಾರವಾಡ, ದುರ್ಗವ್ವ ಹರಿಜನ ಸೇರಿದಂತೆ ಅನೇಕರು ಇದ್ದರು.

ಟಾಪ್ ನ್ಯೂಸ್

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

ed raid on mysore muda office

Mysore: ಮುಡಾ ಕಚೇರಿಗೆ ಇ.ಡಿ ದಾಳಿ; ಕಡತಗಳ ಪರಿಶೀಲನೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

ಬಾಗಲಕೋಟೆ:ಕೋಟೆಕಲ್ಲದಲ್ಲೊಂದು ಅಪೂರ್ವ ಜ್ಞಾನದೇಗುಲ-ಉಲ್ಲಾಸದ ವಾತಾವರಣ

ಬಾಗಲಕೋಟೆ:ಕೋಟೆಕಲ್ಲಲ್ಲೊಂದು ಅಪೂರ್ವ ಜ್ಞಾನದೇಗುಲ-ಉಲ್ಲಾಸದ ವಾತಾವರಣ

2-mudhol

Mudhola: ಮೆಕ್ಕೆಜೋಳಕ್ಕೂ ಕುತ್ತು; ರೈತರ ಆರ್ಥಿಕತೆಗೆ ಮಾರಕ ಹೊಡೆತ

ದೇಗುಲ ಕಟ್ಟಡಕ್ಕೆ ಭಕ್ತರ ದೇಣಿಗೆ ಮಾತ್ರ ಬಳಕೆ: ಗುಡಗುಂಟಿಮಠ

ದೇಗುಲ ಕಟ್ಟಡಕ್ಕೆ ಭಕ್ತರ ದೇಣಿಗೆ ಮಾತ್ರ ಬಳಕೆ: ಗುಡಗುಂಟಿಮಠ

11-mudhol

ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ‌‌ ಪ್ರಯತ್ನಿಸುವೆ: ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

10

Katpadi: ತ್ಯಾಜ್ಯ ಗುಂಡಿಯಾಗುತ್ತಿದೆ ಕುರ್ಕಾಲು ಮದಗ

Belagavi: UT Khader, Basavaraja Horatti visited Suvrana vidhasoudha

Belagavi: ಸುವರ್ಣ ವಿಧಾನಸೌಧಕ್ಕೆ‌ ಯು.ಟಿ.ಖಾದರ್‌, ಬಸವರಾಜ ಹೊರಟ್ಟಿ ಭೇಟಿ

16-bng

Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.