![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jan 6, 2024, 5:43 PM IST
ಚೆನ್ನೈ: ಧನುಷ್ ಅಭಿನಯದ ಬಹು ನಿರೀಕ್ಷಿತ ʼಕ್ಯಾಪ್ಟನ್ ಮಿಲ್ಲರ್ʼ ಸಿನಮಾದ ಟ್ರೇಲರ್ ರಿಲೀಸ್ ಆಗಿದೆ.
ಹೈವೋಲ್ಟೇಜ್ ಮಾಸ್ ಪ್ಯಾಕೇಜ್ ಟ್ರೇಲರ್ ನಲ್ಲಿ ಧನುಷ್ ʼಕ್ಯಾಪ್ಟನ್ ಮಿಲ್ಲರ್ʼ ಅವತಾರದಲ್ಲಿ ಮಿಂಚಿದ್ದಾರೆ. ಸಿನಿಮಾ ಸ್ವಾತಂತ್ರ್ಯ ಕಾಲದ ಕಥೆಯಲ್ಲಿ ಸಾಗುತ್ತದೆ ಎನ್ನುವುದನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.
ತನ್ನ ಗ್ರಾಮವನ್ನು ಕಬಳಿಸಲು ಬರುವ ಬ್ರಿಟೀಷ್ ಆಡಳಿತದ ಸೈನಿಕರು ಹಾಗೂ ಅಧಿಕಾರಿಗಳನ್ನು ಸಂಹಾರಿಸುವ ಲುಕ್ ನಲ್ಲಿ ಧನುಷ್ ಕಾಣಿಸಿಕೊಂಡಿದ್ದು, ʼಡೆವಿಲ್ʼ ಲುಕ್ ನಲ್ಲಿ ಗನ್ ಹಿಡಿದು ಟ್ರೇಲರ್ ನಲ್ಲಿ ಅಬ್ಬರಿಸಿದ್ದಾರೆ. ಇಡೀ ಟ್ರೇಲರ್ ನಲ್ಲಿ ಗ್ರಾಮಕ್ಕಾಗಿ ಹೋರಾಡುವ ಜನ ಹಾಗೂ ಅವರ ಅಸಹಾಯಕತೆಯನ್ನು ತೋರಿಸಲಾಗಿದ್ದು, ತನ್ನತನವನ್ನು ಉಳಿಸಲು ಯಾವ ಹಂತವನ್ನು ಬೇಕಾದರೂ ಹೋಗಿ ಹೋರಾಡಬಲ್ಲೆ ಎನ್ನುವ ಅಂಶವನ್ನು ತೋರಿಸಲಾಗಿದೆ. ಶಿವರಾಜ್ ಅವರ ಸಣ್ಣ ಝಲಕ್ ನ್ನು ತೋರಿಸಲಾಗಿದೆ.
ರಕ್ತಸಿಕ್ತ ಅಧ್ಯಾಯದ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾಕ್ಕೆ ಅರುಣ್ ಮಾಥೇಶ್ವರನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಧನುಷ್ ಪ್ರಿಯಾಂಕಾ ಅರುಲ್ ಮೋಹನ್, ಶಿವ ರಾಜ್‌ಕುಮಾರ್, ಸಂದೀಪ್ ಕಿಶನ್, ಜಾನ್ ಕೊಕ್ಕೆನ್ ಮತ್ತು ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೇ ಜ.12 ರಂದು ಸಿನಿಮಾ ತೆರೆ ಕಾಣಲಿದೆ.
You seem to have an Ad Blocker on.
To continue reading, please turn it off or whitelist Udayavani.