Jallikattu: ಗಡಿದಾಟಿದ ಜಲ್ಲಿಕಟ್ಟು ಕ್ರೀಡೆ; ಇದೇ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಆಯೋಜನೆ
Team Udayavani, Jan 6, 2024, 6:58 PM IST
ಕೊಲಂಬೊ: ತಮಿಳುನಾಡಿನ ಜನಪ್ರಿಯ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆ ಇದೇ ಮೊದಲ ಬಾರಿಗೆ ನೆರೆಯ ಶ್ರೀಲಂಕಾದಲ್ಲಿ ಆಯೋಜನೆಗೊಂಡಿದೆ.
ಶತಮಾನಗಳ ಇತಿಹಾಸವುಳ್ಳ ಜಲ್ಲಿಕಟ್ಟು ಕ್ರೀಡೆಯನ್ನು ಸಂಕ್ರಾಂತಿಯ ಸಂದರ್ಭದಲ್ಲಿ ಅದ್ಧೂರಿಯಾಗಿಯೇ ಆಯೋಜಿಸುತ್ತಾರೆ. ತಮಿಳರು ಇದನ್ನು ಆಚರಣೆಯಾಗಿ ಪರಿಗಣಿಸುತ್ತಾರೆ. ಪೊಂಗಲ್ ಹಬ್ಬದ ಹಬ್ಬದ ಸಂದರ್ಭದಲ್ಲಿ ತಮಿಳುನಾಡಿನ ಕೆಲವು ಭಾಗಗಳಲ್ಲಿ ಸಾಂಪ್ರದಾಯಿಕವಾಗಿ ಆಡಲಾಗುವ ಜಲ್ಲಿಕಟ್ಟು ಕ್ರೀಡೆ ಇದೇ ಮೊದಲ ಬಾರಿಗೆ ಗಡಿದಾಟಿದೆ.
ಶ್ರೀಲಂಕಾದ ಟ್ರಿಂಕೋಮಲಿ ಶನಿವಾರ (ಜ.6 ರಂದು) ಲಂಕಾದ ಪೂರ್ವ ಪ್ರಾಂತ್ಯದ ಗವರ್ನರ್ ಸೆಂಥಿಲ್ ತೊಂಡಮನ್ ಮತ್ತು ಮಲೇಷ್ಯಾ ಸಂಸದ ಸರವಣನ್ ಮುರುಗನ್ ಅವರು ಶ್ರೀಲಂಕಾದಲ್ಲಿ ಜಲ್ಲಿಕಟ್ಟು ಸ್ಪರ್ಧೆಗೆ ಚಾಲನೆ ನೀಡಿದರು.
ಲಂಕಾದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಸುಮಾರು 200 ಹೋರಿಗಳು ಭಾಗವಹಿಸುವ ನಿರೀಕ್ಷೆಯಿದ್ದು, 100 ಗೂಳಿ ಪಳಗಿಸುವವರು ಟ್ರಿಂಕೋಮಲಿಯಲ್ಲಿ ಕ್ರೀಡೆಯನ್ನು ಆಡಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಭಾಗವಹಿಸುವವರು ಮತ್ತು ವೀಕ್ಷಕರ ಸುರಕ್ಷತೆ ಮತ್ತು ಭದ್ರತೆಗಾಗಿ 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ತಮಿಳುನಾಡಿನ ಶಿವಗಂಗೈ ಜಿಲ್ಲೆಯವರಾದ ತೊಂಡಮಾನ್ ಅವರನ್ನು ಜಲ್ಲಿಕಟ್ಟು ಕಾರ್ಯಕ್ರಮದ ಆಯೋಜನೆಯ ಉಸ್ತುವಾರಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
“ನಾವು ಜಲ್ಲಿಕಟ್ಟು, ರೇಕ್ಲಾ ರೇಸ್, ಸಿಲಂಬಂ ಕಾಳಗ, ದೋಣಿ ಓಟಗಳನ್ನು ನಡೆಸುತ್ತೇವೆ ಮತ್ತು ಇಲ್ಲಿ ನಡೆಯುತ್ತಿರುವ ಪೊಂಗಲ್‌ಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಾವು ನಡೆಸುತ್ತೇವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಮಗೆ ಹೆಮ್ಮೆ ತಂದಿವೆ. ತಮಿಳು ಸಮುದಾಯದೊಂದಿಗೆ ಇದನ್ನು ಇಲ್ಲಿ ಪುನಃಸ್ಥಾಪಿಸಿರುವುದು ಎಂದು ಎಎನ್‌ಐಗೆ ತೊಂಡಮಾನ್ ಹೇಳಿದರು.
ಇತ್ತ ತಮಿಳುನಾಡಿನಲ್ಲೂ ಶನಿವಾರ ಜಲ್ಲಿಕಟ್ಟು ಶುರುವಾಗಿದ್ದು, ಮೊದಲ ದಿನವೇ ಸ್ಪರ್ಧೆಯಲ್ಲಿ 29 ಮಂದಿಗೆ ಗಾಯಗಳಾಗಿವೆ. ಉದ್ಘಾಟನಾ ದಿನದಂದು ಸುಮಾರು 500 ಹೋರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.