Cricket: ವೈಭವ್ ಸೂರ್ಯವಂಶಿ 12ನೇ ವಯಸ್ಸಲ್ಲೇ ರಣಜಿ ಪದಾರ್ಪಣೆ
Team Udayavani, Jan 6, 2024, 11:04 PM IST
ಪಾಟ್ನಾ: ಬಿಹಾರದ ಎಡಗೈ ಆರಂಭಕಾರ ವೈಭವ್ ಸೂರ್ಯವಂಶಿ ಪ್ರಸಕ್ತ ರಣಜಿ ಋತುವಿನ ಮೊದಲ ದಿನವೇ ಸುದ್ದಿಯಾಗಿದ್ದಾರೆ. ಮುಂಬಯಿ ವಿರುದ್ಧ ರಣಜಿ ಪದಾರ್ಪಣೆಗೈದಾಗ ಇವರ ವಯಸ್ಸು ಕೇವಲ 12 ವರ್ಷ ಎಂಬುದು ತೀವ್ರ ಕೌತುಕಕ್ಕೆ ಕಾರಣವಾಗಿದೆ. ಅರ್ಥಾತ್, 7ನೇ ತರಗತಿಯಲ್ಲಿ ಓದಬೇಕಿರುವ ವಿದ್ಯಾರ್ಥಿಯೊಬ್ಬ ರಾಜ್ಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ವಿಶಿಷ್ಟ ವಿದ್ಯಮಾನವಿದು!
ರಣಜಿ ಕ್ಯಾಪ್ ಧರಿಸುವಾಗ ವೈಭವ್ ಸೂರ್ಯವಂಶಿ ವಯಸ್ಸು 12 ವರ್ಷ, 284 ದಿನ. ರಣಜಿ ಇತಿಹಾಸದ 4ನೇ ಕಿರಿಯ ಆಟಗಾರನೆಂಬುದು ಇವರ ಹೆಗ್ಗಳಿಕೆ. ಶನಿವಾರದ ದ್ವಿತೀಯ ದಿನದಾಟದಲ್ಲಿ ಇನ್ನಿಂಗ್ಸ್ ಆರಂಭಿಸಿದ ವೈಭವ್, 28 ಎಸೆತಗಳಿಂದ 19 ರನ್ ಗಳಿಸಿ ಶಿವಂ ದುಬೆ ಎಸೆತದಲ್ಲಿ ಔಟಾದರು. ಇದರಲ್ಲಿ 4 ಬೌಂಡರಿ ಸೇರಿತ್ತು.
ವೈಭವ್ ಸೂರ್ಯವಂಶಿ ಈ ಶತಮಾನದಲ್ಲಿ ರಣಜಿ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ.
ಕಿರಿಯ ರಣಜಿ ಕ್ರಿಕೆಟಿಗರು
ರಣಜಿ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ರಜಪೂತಾನ ತಂಡದ ಅಲಿಮುದ್ದೀನ್ ಅವರದ್ದಾಗಿದೆ. 1942-43ರಲ್ಲಿ ಬರೋಡ ವಿರುದ್ಧ ರಣಜಿಗೆ ಕಾಲಿಡುವಾಗ ಅಲಿಮುದ್ದೀನ್ ವಯಸ್ಸು 12 ವರ್ಷ, 73 ದಿನ. ಇದು ಕೇವಲ ಭಾರತೀಯ ದಾಖಲೆ ಆಗಷ್ಟೇ ಉಳಿದಿಲ್ಲ, ಪ್ರಥಮ ದರ್ಜೆ ಪಂದ್ಯವಾಡಿದ ವಿಶ್ವದ ಅತೀ ಕಿರಿಯ ಆಟಗಾರನೆಂಬ ದಾಖಲೆಯೂ ಆಗಿದೆ.
ಬಿಹಾರದ ಎಸ್.ಕೆ. ಬೋಸ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಇವರು 1959-60ರಲ್ಲಿ ಅಸ್ಸಾಮ್ ವಿರುದ್ಧ ರಣಜಿ ಆಡಲಿಳಿದಿದ್ದರು. ಆಗ ವಯಸ್ಸು 12 ವರ್ಷ, 76 ದಿನವಾಗಿತ್ತು.
1937-38ರಲ್ಲಿ ನಾರ್ದರ್ನ್ ಇಂಡಿಯಾದ ಮೊಹಮ್ಮದ್ ರಮ್ಜಾನ್ 12 ವರ್ಷ, 247ನೇ ದಿನದಲ್ಲಿ ಯುನೈಟೆಡ್ ಪ್ರಾವಿನ್ಸ್ ವಿರುದ್ಧ ರಣಜಿ ಆಡಲಿಳಿದಿದ್ದರು. ಈ ಯಾದಿಯಲ್ಲಿ ಅವರಿಗೆ 3ನೇ ಸ್ಥಾನ. ವೈಭವ್ ಸೂರ್ಯವಂಶಿ 4ನೇ ಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್
MUST WATCH
ಹೊಸ ಸೇರ್ಪಡೆ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.