Muslim women: ಕಾಶಿಯಲ್ಲಿ ಬೆಳಗಲಿದೆ ಮುಸಲ್ಮಾನ ಮಹಿಳೆಯರು ತರುವ ರಾಮಜ್ಯೋತಿ 

Team Udayavani, Jan 7, 2024, 12:36 PM IST

Muslim women: ಕಾಶಿಯಲ್ಲಿ ಬೆಳಗಲಿದೆ ಮುಸಲ್ಮಾನ ಮಹಿಳೆಯರು ತರುವ ರಾಮಜ್ಯೋತಿ 

ಲಕ್ನೋ: ಅಯೋಧ್ಯೆಯ ಐತಿಹಾಸಿಕ ರಾಮ ಮಂದಿರ ಉದ್ಘಾಟನೆಗೆ ಇಡೀ ದೇಶವೇ ಕಾಯುತ್ತಿದ್ದು, ಹಿಂದೂಗಳು ಮಾತ್ರವಲ್ಲದೇ ಮುಸ್ಲಿಮರು, ಸಿಕ್ಖರು, ಬೌದ್ಧರು, ಕ್ರಿಶ್ಚಿಯನ್ನರೂ ಈ ಸಮಾರಂಭವನ್ನು ಸಂಭ್ರಮಿಸಲು ಯೋಜಿಸುತ್ತಿದ್ದಾರೆ. ಈ ನಡುವೆಯೇ ಉತ್ತರ ಪ್ರದೇಶದ ವಾರಾಣಸಿಯ ಇಬ್ಬರು ಮಹಿಳೆಯರು ಅಯೋಧ್ಯೆಯಿಂದಲೇ ರಾಮ ಜ್ಯೋತಿ ತಂದು ಮುಸಲ್ಮಾನರಿರುವ ಪ್ರತೀ ನಗರಗಳಲ್ಲಿ ಸಂಚರಿಸಿ ರಾಮ ಜ್ಯೋತಿಯನ್ನು ಪಸರಿಸಲು ಮುಂದಾಗಿದ್ದಾರೆ. ಈ ಮೂಲಕ ಶ್ರೀರಾಮ ನಮ್ಮ ಪೂರ್ವಜ ಹಾಗೂ ಪ್ರತಿಯೊಬ್ಬ ಭಾರತೀಯನ ಡಿಎನ್‌ಎ ಒಂದೇ ಎಂಬ ಸ್ಪಷ್ಟ ಸಂದೇಶ ಸಾರುವುದಾಗಿ ಹೇಳಿದ್ದಾರೆ.

ವಾರಾಣಸಿ ನಿವಾಸಿಗಳಾದ ನಜೀನ್‌ ಅನ್ಸಾರಿ ಹಾಗೂ ನಜ್ಮಾ ಪರ್ವೀನ್‌ ಎಂಬ ಮುಸ್ಲಿಂ ಮಹಿಳೆಯರು ರಾಮ ಜ್ಯೋತಿಯನ್ನು ತರಲು ಅಯೋಧ್ಯೆಗೆ ತೆರಳಿದ್ದು, ಪಾತಾಳ್‌ಪುರಿ ಮಠದ ಮಹಂತರಾದ ಬಾಲಕ್‌ ದಾಸ್‌ ಹಾಗೂ ದೊಮ್‌ರಾಜ್‌ ಓಂ ಚೌಧರಿ ಅವರ ನೇತೃತ್ವದಲ್ಲಿ ಪಯಣಕ್ಕೆ ಶನಿವಾರ ಚಾಲನೆ ದೊರೆತಿದೆ. ಅಯೋಧ್ಯೆಯಲ್ಲಿ ಮಹಂತರಾದ ಶಂಭು ದೇವ ಆಚಾರ್ಯರು ರಾಮಜ್ಯೋತಿ­ಯನ್ನು ಮಹಿಳೆಯರಿಗೆ ಹಸ್ತಾಂತರಿಸಲಿದ್ದಾರೆ. ರವಿವಾರ ರಾಮ ಜ್ಯೋತಿಗಳು ವಾರಾಣಸಿ ತಲುಪಲಿದ್ದು, ಜ.21ರಿಂದ ರಾಮಜ್ಯೋತಿ­ಯನ್ನು ಪಸರಿಸುವ ಕಾರ್ಯ ಆರಂಭವಾ­ಗಲಿದೆ. ಅದರೊಂದಿಗೆ ಅಯೋಧ್ಯೆಯ ಸರಯೂ ನದಿಯ ಪವಿತ್ರ ನೀರು ಹಾಗೂ ಮಣ್ಣನ್ನು ಕೂಡ ಮಹಿಳೆಯರು ತರಲಿದ್ದಾರೆ.  ಮುಸ್ಲಿಂ ಸಮುದಾಯದವರೇ ಈ ರಾಮ ಜ್ಯೋತಿಯನ್ನು ಸ್ವಾಗತಿಸಲಿದ್ದಾರೆ.

ಯಾವುದೇ ವ್ಯಕ್ತಿ ತನ್ನ ಧರ್ಮವನ್ನು ಬದ ಲಿಸಬಹುದೇ ವಿನಃ ಪೂರ್ವಜರನ್ನಲ್ಲ. ರಾಮ ನಮ್ಮ ಪೂರ್ವಜ. ಮುಸಲ್ಮಾನರಿಗೆ ಮೆಕ್ಕಾ ಹೇಗೋ ಹಾಗೆಯೇ ಭಾರತದ ಸಂಸ್ಕೃತಿ ಮೇಲೆ ನಂಬಿಕೆ ಹೊಂದಿರು­ವವರಿಗೆ, ಅಯೋಧ್ಯೆ ಪುಣ್ಯಧಾಮವಾಗಿದೆ ಎಂದು ನಜ್ಮಾ  ಪರ್ವೀನ್‌ ಹೇಳಿದ್ದಾರೆ.

ಯಾರೀ ಮಹಿಳೆಯರು ? :

ಬನಾರಸ್‌ ಹಿಂದೂ ಯೂನಿವರ್ಸಿಟಿಯಲ್ಲಿ  ಸಂಘರ್ಷ ನಿರ್ವಹಣೆ ವಿಚಾರದ ಕುರಿತು ಅಧ್ಯಯನ ನಡೆಸುತ್ತಿರುವ ನಜ್ಮಾ ಪರ್ವೀನ್‌ ಹನುಮಾನ್‌ ಚಾಲೀಸಾ ಹಾಗೂ ರಾಮ ಚರಿತ ಮಾನಸವನ್ನು ಉರ್ದುಗೆ ಭಾಷಾಂತರಿಸಿ ಖ್ಯಾತಿ ಗಳಿಸಿದ್ದರು. ಅಲ್ಲದೇ ಹಿಂದೂ-ಮುಸ್ಲಿಂ ಸಮುದಾಯಗಳ ನಡುವಿನ ಏಕತೆ ಮತ್ತು ಶಾಂತಿಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರನ್ನು ಕುರಿತಂತೆ ಪಿಎಚ್‌ಡಿ ಅಧ್ಯಯನ ಮಾಡಿದ ಹೆಗ್ಗಳಿಕೆಯೂ ಇವರಿಗಿದೆ. ಇನ್ನು ಮುಸ್ಲಿಂ ಮಹಿಳಾ ಫೌಂಡೇಶನ್‌ನ ಅಧ್ಯಕ್ಷೆಯಾದ ನಜೀನ್‌ ಅನ್ಸಾರಿ ಅವರು 2006ರಲ್ಲಿ ಸಂಕಟ ಮೋಚನ್‌ ದೇವಸ್ಥಾನದ ಮೇಲೆ ಬಾಂಬ್‌ ದಾಳಿ ನಡೆದು ಕೋಮು ಸಂಘರ್ಷ ಶುರುವಾಗಿದ್ದ ಸಂದರ್ಭದಲ್ಲಿ 70 ಮುಸ್ಲಿಂ ಮಹಿಳೆಯರೊಟ್ಟಿಗೆ ದೇವಸ್ಥಾನಕ್ಕೆ ತೆರಳಿ ಹನುಮನ್‌ ಚಾಲೀಸಾ ಪಠಿಸಿ ಕೋಮುಸೌಹಾರ್ದಕ್ಕೆ ಕರೆ ನೀಡಿದ್ದರು.

ಟಾಪ್ ನ್ಯೂಸ್

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.