‘ರಾಮ ಮಾಂಸಾಹಾರಿ’ ಎಂದು ಕರೆದಿದ್ದಕ್ಕಾಗಿ ʼಅನ್ನಪೂರ್ಣಿʼ ಚಿತ್ರತಂಡದ ವಿರುದ್ಧ FIR

Team Udayavani, Jan 7, 2024, 2:43 PM IST

‘ರಾಮ ಮಾಂಸಾಹಾರಿ’ ಎಂದು ಕರೆದಿದ್ದಕ್ಕಾಗಿ ʼಅನ್ನಪೂರ್ಣಿʼ ಚಿತ್ರತಂಡದ ವಿರುದ್ಧ FIR

ಮುಂಬಯಿ: ಬಹುಭಾಷಾ ನಟಿ ನಯನತಾರಾ ಅಭಿನಯದ ʼಅನ್ನಪೂರ್ಣಿʼ ಸಿನಿಮಾ ಇತ್ತೀಚೆಗೆ ತೆರೆಕಂಡು, ಇದೀಗ ಓಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ. ಈ ನಡುವೆ ಸಿನಿಮಾದ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ದೂರು ದಾಖಲಾಗಿದೆ.

ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ನಯನತಾರಾ ಅವರ ಇತ್ತೀಚಿನ ಚಿತ್ರ ʼಅನ್ನಪೂರ್ಣಿʼ ಸಿನಿಮಾದ ನಿರ್ಮಾಪಕರ ವಿರುದ್ಧ ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ಪೊಲೀಸ್ ದೂರು ದಾಖಲಿಸಿದ್ದಾರೆ. ನಿರ್ಮಾಪಕರು ರಾಮನನ್ನು ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಶನಿವಾರ ಟ್ವೀಟ್‌ ಮಾಡಿ, ʼಅನ್ನಪೂರ್ಣಿʼ ಸಿನಿಮಾವನ್ನು ಹಿಂದೂ ವಿರೋಧಿ,ಸಿನಿಮಾ ಲವ್‌ ಜಿಹಾದ್‌ ನ್ನು ಉತ್ತೇಸುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

“ಭಗವಾನ್ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ನಿರೀಕ್ಷೆಯಲ್ಲಿ ಇಡೀ ಜಗತ್ತು ಸಂಭ್ರಮಿಸುತ್ತಿರುವ ಈ ಸಮಯದಲ್ಲಿ, ಝೀ ಸ್ಟುಡಿಯೋಸ್, ನಾಡ್ ಸ್ಟುಡಿಯೋಸ್ ಮತ್ತು ಟ್ರೈಡೆಂಟ್ ಆರ್ಟ್ಸ್ ನಿರ್ಮಾಣದ ಈ ಹಿಂದೂ ವಿರೋಧಿ ಚಲನಚಿತ್ರ ʼಅನ್ನಪೂರ್ಣಿʼ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡುವ ವೇಳೆ ನಮಾಜ್ ಮಾಡುತ್ತಾಳೆ.ಈ ಚಿತ್ರದಲ್ಲಿ ಲವ್ ಜಿಹಾದ್ ನ್ನು ಪ್ರಚಾರ ಮಾಡಲಾಗಿದೆ. ಫರ್ಹಾನ್ (ನಟ) ಭಗವಾನ್ ಶ್ರೀ ರಾಮ್ ಕೂಡ ಮಾಂಸ ತಿನ್ನುವವರಾಗಿದ್ದರು ಎಂದು ಹೇಳಿ ಮಾಂಸ ತಿನ್ನಲು ನಟಿಯನ್ನು ಮನವೊಲಿಸುವ ದೃಶ್ಯಗಳಿವೆ” ಎಂದು ಸೋಲಂಕಿ ಬರೆದಿದ್ದಾರೆ.

ಈ ಕುರಿತುಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರು ಮತ್ತು ಚಿತ್ರದ ನಿರ್ಮಾಪಕರು ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.

ಹಿಂದೂ ಐಟಿ ಸೆಲ್‌ನ ಸಂಸ್ಥಾಪಕರೂ ಆಗಿರುವ ಸೋಲಂಕಿ, ʼಅನ್ನಪೂರ್ಣಿʼ ಚಿತ್ರದ ನಿರ್ದೇಶಕ ನೀಲೇಶ್ ಕೃಷ್ಣ, ನಟಿ ನಯನತಾರಾ, ನಿರ್ಮಾಪಕರಾದ ಜತಿನ್ ಸೇಥಿ, ಆರ್ ರವೀಂದ್ರನ್ ಮತ್ತು ಪುನಿತ್ ಗೋಯೆಂಕಾ, ಝೀ ಸ್ಟುಡಿಯೋಸ್‌ನ ಮುಖ್ಯ ವ್ಯವಹಾರ ಅಧಿಕಾರಿ ಶಾರಿಕ್ ಪಟೇಲ್ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾ ಹೆಡ್ ಮೋನಿಕಾ ಶೆರ್ಗಿಲ್. ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಸದ್ಯ ʼಅನ್ನಪೂರ್ಣಿʼ ಚಿತ್ರತಂಡ ಇದುವರೆಗೆ ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ.

;

ಟಾಪ್ ನ್ಯೂಸ್

Exam 3

UG, PG ಏಕರೂಪ ವೇಳಾಪಟ್ಟಿ : ಎಪ್ರಿಲ್‌ 18, 19ಕ್ಕೆ ಸಿಇಟಿ

ಇಂದು ಮಹಾರಾಷ್ಟ್ರಕ್ಕೆ ಪ್ರಧಾನಿ:ಪಿಎಂ-ಕಿಸಾನ್‌ ನಿಧಿ ವರ್ಗಾವಣೆ

ಇಂದು ಮಹಾರಾಷ್ಟ್ರಕ್ಕೆ ಪ್ರಧಾನಿ:ಪಿಎಂ-ಕಿಸಾನ್‌ ನಿಧಿ ವರ್ಗಾವಣೆ

NIkhil KUMMI

Byelection; ಚನ್ನಪಟ್ಟಣದಲ್ಲಿ ದೋಸ್ತಿ ಅಭ್ಯರ್ಥಿ ಆಗಿ ನಿಖಿಲ್‌?

Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ

Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ

Siddanna 2

CM Siddaramaiah ಮಾಸಾಂತ್ಯಕ್ಕೆ ದಿಲ್ಲಿಗೆ : ಕುತೂಹಲ

apple

Apple New Shop; ಬೆಂಗಳೂರು ಸೇರಿ 4 ನಗರದಲ್ಲಿ ಮಳಿಗೆ: ಆ್ಯಪಲ್‌ ಘೋಷಣೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kerala: ಮಲಯಾಳಂ ಚಿತ್ರರಂಗದ ಜನಪ್ರಿಯ ವಿಲನ್‌ ನಟ “ಕೀರಿಕ್ಕಡನ್‌ ಜೋಸ್”‌ ವಿಧಿವಶ

Kerala: ಮಲಯಾಳಂ ಚಿತ್ರರಂಗದ ಜನಪ್ರಿಯ ವಿಲನ್‌ ನಟ “ಕೀರಿಕ್ಕಡನ್‌ ಜೋಸ್”‌ ವಿಧಿವಶ

10

Jani Master: ಅತ್ಯಾಚಾರ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ಗೆ ಷರತ್ತುಬದ್ಧ ಜಾಮೀನು

Indian 3: ʼಇಂಡಿಯನ್‌ -2ʼ ನಿಂದ ಅಪಾರ ನಷ್ಟ; ಮೂರನೇ ಭಾಗ ನೇರವಾಗಿ ಓಟಿಟಿಯಲ್ಲಿ ರಿಲೀಸ್?

Indian 3: ʼಇಂಡಿಯನ್‌ -2ʼ ನಿಂದ ಅಪಾರ ನಷ್ಟ; ಮೂರನೇ ಭಾಗ ನೇರವಾಗಿ ಓಟಿಟಿಯಲ್ಲಿ ರಿಲೀಸ್?

Tollywood: ಸಮಂತಾ – ನಾಗ ಚೈತನ್ಯ ಬಗ್ಗೆ ಸಚಿವೆ ಸುರೇಖಾ ಹೇಳಿಕೆಗೆ ಇಡೀ ಟಾಲಿವುಡ್‌ ಆಕ್ರೋಶ

Tollywood: ಸಮಂತಾ – ನಾಗ ಚೈತನ್ಯ ಬಗ್ಗೆ ಸಚಿವೆ ಸುರೇಖಾ ಹೇಳಿಕೆಗೆ ಇಡೀ ಟಾಲಿವುಡ್‌ ಆಕ್ರೋಶ

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ನಟಿ ಸಮಂತಾ ಬಳಿ ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಸಚಿವೆ

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ನಟಿ ಸಮಂತಾ ಬಳಿ ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಸಚಿವೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Exam 3

UG, PG ಏಕರೂಪ ವೇಳಾಪಟ್ಟಿ : ಎಪ್ರಿಲ್‌ 18, 19ಕ್ಕೆ ಸಿಇಟಿ

ಇಂದು ಮಹಾರಾಷ್ಟ್ರಕ್ಕೆ ಪ್ರಧಾನಿ:ಪಿಎಂ-ಕಿಸಾನ್‌ ನಿಧಿ ವರ್ಗಾವಣೆ

ಇಂದು ಮಹಾರಾಷ್ಟ್ರಕ್ಕೆ ಪ್ರಧಾನಿ:ಪಿಎಂ-ಕಿಸಾನ್‌ ನಿಧಿ ವರ್ಗಾವಣೆ

NIkhil KUMMI

Byelection; ಚನ್ನಪಟ್ಟಣದಲ್ಲಿ ದೋಸ್ತಿ ಅಭ್ಯರ್ಥಿ ಆಗಿ ನಿಖಿಲ್‌?

Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ

Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ

Siddanna 2

CM Siddaramaiah ಮಾಸಾಂತ್ಯಕ್ಕೆ ದಿಲ್ಲಿಗೆ : ಕುತೂಹಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.