Padubidri : ಮರಳು ಸಹಿತ ದಾಖಲೆಗಳಿಲ್ಲದ ಟಿಪ್ಪರ್ ವಶ
Team Udayavani, Jan 8, 2024, 12:05 AM IST
ಪಡುಬಿದ್ರಿ: ಯಾವುದೇ ದಾಖಲೆಗಳಿಲ್ಲದೇ ಸುಮಾರು 15000 ರೂ. ಮೌಲ್ಯದ 3 ಯೂನಿಟ್ ಮರಳನ್ನು ಕೊಡ್ಯಡ್ಕ ದೇವಸ್ಥಾನದ ಬಳಿಯಿಂದ ಕಳವು ಮಾಡಿ ಈಚರ್ ಟಿಪ್ಪರ್ನಲ್ಲಿ ಸಾಗಿಸುತ್ತಿದ್ದ ಚಾಲಕ ಪ್ರಮೋದ್ ಶೆಟ್ಟಿ ಸಹಿತ ವಾಹನವನ್ನು ಪಡುಬಿದ್ರಿ ಜಂಕ್ಷನ್ನಲ್ಲಿ ವಶಪಡಿಸಿಕೊಂಡು ಪಡುಬಿದ್ರಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
ಪಡುಬಿದ್ರಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ಟಿಪ್ಪರನ್ನು ನಿಲ್ಲಿಸಲಾಗಿತ್ತು. ಚಾಲಕ ಪ್ರಮೋದ್ ಶೆಟ್ಟಿ ಬಳಿ ಮರಳುಗಾರಿಕೆ ಬಗ್ಗೆ ಪರ್ಮಿಟ್ ಅಥವಾ ಪರವಾನಿಗೆ, ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇರಲಿಲ್ಲ.
ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ಆತ ಪಾಲಡ್ಕದ ಕೊಡ್ಯಡ್ಕ ದೇವಸ್ಥಾನದ ಹತ್ತಿರದಿಂದ ಮರಳನ್ನು ಕಳವು ಮಾಡಿ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.