ಕೊಡುಗೈ ದಾನಿ,ಉದ್ಯಮಿ ನಾರ್ಬರ್ಟ್ ಸಾಲ್ಡಾನ ನಿಧನಕ್ಕೆ ಮಿಡಿದ ಜನಸಾಗರ

ಬಣಕಲ್ ಚರ್ಚ್ ಹಾಲ್ ನಲ್ಲಿ ಅಂತಿಮ ದರ್ಶನ, ರಸ್ತೆಯುದ್ದಕ್ಕೂ ಪುಷ್ಪಾರ್ಚನೆ

Team Udayavani, Jan 8, 2024, 8:58 PM IST

1-asdasdsa

ಕೊಟ್ಟಿಗೆಹಾರ : ಶನಿವಾರ ನಿಧನ ಹೊಂದಿದ್ದ ಕೊಡುಗೈ ದಾನಿ,ಬಡವರ ಬಂಧು,ಉದ್ಯಮಿ ಕುಂದೂರು ನಾರ್ಬರ್ಟ್ ಸಾಲ್ಡಾನ ಅವರ ಅಂತಿಮ ಕ್ರಿಯೆ ಸೋಮವಾರ ಬಣಕಲ್ ನಲ್ಲಿ ನಡೆಸಲಾಯಿತು.ಬಣಕಲ್ ಚರ್ಚ್ ನಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಾತಿಮತಬೇದವೆನ್ನದೇ ಸಹಸ್ರಾರು ಮಂದಿ ಕೊಡುಗೈ ದಾನಿಯ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಕುಂದೂರು ಸೇರಿದಂತೆ ಮೂಡಿಗೆರೆ,ಮಂಗಳೂರು, ಚಿಕ್ಕಮಗಳೂರು,ಅರೇಹಳ್ಳಿ.ಸಕಲೇಶಪುರ, ಹಾಸನ ಮತ್ತಿತರ ಕಡೆಯಿಂದ ಬಂಧುಗಳು,ಸಾರ್ವಜನಿಕರು ಅಂತಿಮ ದರ್ಶನದಲ್ಲಿ ಪಾಲ್ಗೊಂಡರು.ಮಧ್ಯಾಹ್ನ 1ಗಂಟೆಯಿಂದ 3.30 ವರೆಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ತಾರಾದೇವಿ, ಜೆಡಿಎಸ್ ಮುಖಂಡ ರಂಜನ್ ಅಜಿತ್ ಕುಮಾರ್,ಬಿಜೆಪಿ ಮುಖಂಡ ಕೆ.ಸಿ.ರತನ್, ಕಾಂಗ್ರೆಸ್ ಮುಖಂಡರಾದ ಬಿ.ಎಸ್ ಜಯರಾಮ್ ಗೌಡ,ಟಿ.ಎಂ. ಸುಬ್ರಹ್ಮಣ್ಯ,ಹರ್ಷ ಮೆಲ್ವಿನ್ ಲಸ್ರಾದೊ, ನಜರೆತ್ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಹಿಲ್ಡಾಲೋಬೊ,ಚಿಕ್ಕಮಗಳೂರು ಕ್ರೈಸ್ತ ಧರ್ಮಾಧ್ಯಕ್ಷ ಡಾ.ಅಂತೋನಿ ಸ್ವಾಮಿ ನೇತೃತ್ವದಲ್ಲಿ ಧರ್ಮಗುರು ಪ್ರೇಮ್ ಲಾರೆನ್ಸ್ ಡಿಸೋಜ, ಫಾ.ಥಾಮಸ್ ಕಲಘಟಗಿ, ಫಾ.ಎಲಿಯಾಸ್,ಫಾ.ಅಂತೋನಿ ವಾಸ್,ಜೆ.ಬಿ.ಗೊನ್ಸಾಲ್ವಿಸ್ ಸೇರಿದಂತೆ ವಿವಿಧ ಧರ್ಮಗುರುಗಳು ಬಲಿ ಪೂಜೆ ಅರ್ಪಿಸಿದರು.

ವಿವಿಧ ರಾಜಕೀಯ, ಸಂಘ ಸಂಸ್ಥೆಗಳ ಮುಖಂಡರು ಅಂತಿಮ ದರ್ಶನ ಪಡೆದರು.ನಂತರ ಬಣಕಲ್ ಬಾಲಿಕಾ ಮರಿಯ ಚರ್ಚಿನಲ್ಲಿ ಪೂಜಾವಿಧಿಗಳು ನಡೆದವು.ನಂತರ ಬಣಕಲ್ ಕ್ರೈಸ್ತರ ಸ್ಮಶಾನದಲ್ಲಿ ಜನಸಾಗರದ ನಡುವೆ ಅಂತ್ಯಕ್ರೀಯೆ ನಡೆಯಿತು.ಸಂದರ್ಭದಲ್ಲಿ ಪತ್ನಿ ಜೆಸಿಂತಾ,ಪುತ್ರರಾದ ಕ್ರೈಸಲ್,ನೆನ್ಸನ್,ರೊಚೆಲ್,ರಿಚಿ,ನೈಜಿಲ್,ಹಾಗೂ ಸೊಸೆ, ಹಾಗೂ ಮೊಮ್ಮಕ್ಕಳು ಇದ್ದರು.

ಕೊಟ್ಟಿಗೆಹಾರದಲ್ಲಿ ಅಂಗಡಿಮುಂಗಟ್ಟು ಮುಚ್ಚಿ ಪುಷ್ಪಾರ್ಚನೆ

ಕೊಟ್ಟಿಗೆಹಾರದಲ್ಲಿ ಸಾರ್ವಜನಿಕರು,ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿ ಅವರ ಅಂಬುಲೆನ್ಸ್ ಬಂದಾಗ ಅವರ ಅಂಬುಲೆನ್ಸ್ ಗೆ ಪುಷ್ಪಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸಿದರು. ಆಮರ್ ರಹೇ ಕೂಗು ಯುವಕರಿಂದ ಮೊಳಗಿತು.

ಸಮಾಜಕ್ಕೆ ನಾರ್ಬಟ್ ಸಲ್ಡಾನ ಆಸ್ತಿಯಾಗಿದ್ದರು.ಅವರ ಅಕಾಲಿಕ ಮರಣ ಸಮಾಜಕ್ಕೆ ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷಕ್ಕೂ ತುಂಬಲಾರದ ನಷ್ಟ.ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ದಯಾಪಾಲಿಸಲಿ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.

ನಾರ್ಬರ್ಟ್ ಸಲ್ಡಾನರು ಜನರಿಗೆ ತೋರಿದ ಪ್ರೀತಿ ಈ ಲೋಕದಲ್ಲಿ ಹೇಗಿತ್ತು ಎನ್ನುವುದು ಜನಸಾಗರವೇ ಸಾರಿ ಹೇಳುತ್ತಿದೆ.ಸಾವಿನಿಂದ ನಮ್ಮ ಜೀವನ ಅಂತ್ಯವಾಗಲ್ಲ.ಪುನರುತ್ಥಾನವಾಗುತ್ತದೆ.ಏಸು ತೋರಿದ ದಾರಿಯನ್ನು ಇವರು ಅನುಸರಿಸಿ ನಮ್ಮಲ್ಲಿ ಅಮರರಾಗಿದ್ದಾರೆ ಎಂದು ಫಾ.ಎಲಿಯಾಸ್ ಸಿಕ್ವೇರಾ ಹೇಳಿದರು.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kottigehara-Bill

Kottigehara: 35 ವರ್ಷಗಳ ಹಿಂದೆ ಸೇವಿಸಿದ್ದ ಊಟದ ಬಿಲ್‌ ಪಾವತಿ!

13-kudremukh-1

Kudremukh-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿ; ಗುಂಡಿಗಳ ರಸ್ತೆ

1-ckm

Chikkamagaluru: ಕಿರುಕುಳ, ಮಹಿಳೆ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಸರ್ವೇ ಸಿಬಂದಿ ಆತ್ಮಹತ್ಯೆ

Sringeri ವಿಧುಶೇಖರ ಶ್ರೀಗಳ 40 ದಿನಗಳ ಯಾತ್ರೆ ಸಂಪನ್ನ

Sringeri ವಿಧುಶೇಖರ ಶ್ರೀಗಳ 40 ದಿನಗಳ ಯಾತ್ರೆ ಸಂಪನ್ನ

12

Mudigere: ನೇಣು ಬಿಗಿದುಕೊಂಡು‌ ಆತ್ಮಹ*ತ್ಯೆಗೆ ಶರಣಾದ ಸರ್ವೇ ಅಧಿಕಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.