Subramanya; ವಾಹನದ ಮೇಲೆ ಉರುಳಿದ ಬೃಹತ್‌ ಮರ; ಇಬ್ಬರಿಗೆ ಗಾಯ, ಅಂಗಡಿ, ವಾಹನ ಜಖಂ


Team Udayavani, Jan 9, 2024, 1:01 AM IST

Subramanya; ವಾಹನದ ಮೇಲೆ ಉರುಳಿದ ಬೃಹತ್‌ ಮರ; ಇಬ್ಬರಿಗೆ ಗಾಯ, ಅಂಗಡಿ, ವಾಹನ ಜಖಂ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಕೈಕಂಬ ಜಂಕ್ಷನ್‌ನಲ್ಲಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನದ ಮೇಲೆ ಬೃಹತ್‌ ಮರ ಉರುಳಿ ಬಿದ್ದ ಪರಿಣಾಮ ಇಬ್ಬರು ಗಾಯಗೊಂಡದ್ದಲ್ಲದೆ ಸಮೀಪದ ಅಂಗಡಿ ಜಖಂಗೊಂಡ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.

ನೆಟ್ಟಣದ ಶೇಖರ್‌ ಚಲಾಯಿಸುತ್ತಿದ್ದ ಟಾಟಾ ಸುಮೋದ ಮೇಲೆ ಮರ ಬಿದ್ದಿದ್ದು ಶೇಖರ್‌ ಅವರ ತಲೆಗೆ ಗಾಯವಾಗಿದೆ. ವಾಹನ ಸಂಪೂರ್ಣ ಜಖಂಗೊಂಡಿದೆ. ಅಂಗಡಿಯಲ್ಲಿದ್ದ ರಾಜೇಶ್‌ ಅವರ ಕಾಲಿಗೂ ಗಾಯವಾಗಿದೆ. ಅಂಗಡಿಯೂ ಜಖಂಗೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ವಿದ್ಯುತ್‌ ಕಂಬಗಳಿಗೂ ಹಾನಿ ಸಂಭವಿಸಿದೆ.

ಕಡಬ ತಹಶೀಲ್ದಾರ್‌ ಪ್ರಭಾಕರ ಕಜೂರೆ, ಉಪತಹಶೀಲ್ದಾರ್‌ ಮನೋಹರ್‌, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್‌ ಬಾಬು, ಬಿಳಿನೆಲೆ ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳು, ಕಡಬ ಪೊಲೀಸರು, ಮೆಸ್ಕಾಂ ಅಧಿಕಾರಿಗಳು, ಸಿಬಂದಿ ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳೀಯರ ಸಹಕಾರದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು ಹಾಗೂ ಮರವನ್ನು ತೆರವು ಮಾಡಲಾಯಿತು.

ಪರಿಹಾರಕ್ಕೆ ಆಗ್ರಹ
ಗಾಯಾಳುಗಳಿಗೆ ಸರಕಾರದಿಂದ ಪರಿಹಾರ ಒದಗಿಸುವಂತೆ ಹಾಗೂ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದರು. ಅಧಿಕಾರಿಗಳು ಸ್ಥಳೀಯರ ಜತೆ ಮಾತುಕತೆ ನಡೆಸಿ, ಸರಕಾರದಿಂದ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವ ಭರವಸೆ ನೀಡಿದರು. ಅಪಾಯಕಾರಿ ಮರಗಳ ತೆರವಿಗೆ ಗ್ರಾ.ಪಂ. ಮೂಲಕ ಮನವಿ ಬಂದಲ್ಲಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿ ವಿಮಲ್‌ ಬಾಬು ತಿಳಿಸಿದರು.

ಟಾಪ್ ನ್ಯೂಸ್

Thavar chand gehlot

Karnataka Govt; ರಾಜ್ಯಪಾಲ ಅರ್ಕಾವತಿ ಬಾಣ :ಕಾಳಗ ಈಗ ಮತ್ತೊಂದು ಸುತ್ತಿಗೆ!

MDNL

Kasaragodu: ಎಂಡಿಎಂಎ ಬೆಂಗಳೂರಿನಿಂದ ಪೂರೈಕೆ: ಎಸ್‌ಪಿ ಶಿಲ್ಪಾ

1-qwewqwqe

World Book of Records; ಪ್ರಜಾಪ್ರಭುತ್ವ ಮಾನವ ಸರಪಳಿಗೆ ವಿಶ್ವದಾಖಲೆ ಗರಿ

20

J. B. Shruti Sagar: ಏಕಾಗ್ರತೆಗೆ ಭಂಗ ತರುವ ಏನನ್ನೂ  ಬಳಸಿದರೂ ಸಾಧನೆಗೆ ತೊಡಕೇ

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ

R.Ashok

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: ಕ್ರೆಡಿಟ್‌ ಕಾರ್ಡ್‌ ಆ್ಯಕ್ಟಿವೇಶನ್‌ ಹೆಸರಲ್ಲಿ ವಂಚನೆ

Fraud: ಕ್ರೆಡಿಟ್‌ ಕಾರ್ಡ್‌ ಆ್ಯಕ್ಟಿವೇಶನ್‌ ಹೆಸರಲ್ಲಿ ವಂಚನೆ

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

subharamaya-Swamiji

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ

24

Belthangady: ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Belthangady: ಇಸ್ಪೀಟು ಅಡ್ಡೆಗೆ ದಾಳಿ; 23 ಮಂದಿಯ ಸೆರೆ

Belthangady: ಇಸ್ಪೀಟು ಅಡ್ಡೆಗೆ ದಾಳಿ; 23 ಮಂದಿಯ ಸೆರೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Thavar chand gehlot

Karnataka Govt; ರಾಜ್ಯಪಾಲ ಅರ್ಕಾವತಿ ಬಾಣ :ಕಾಳಗ ಈಗ ಮತ್ತೊಂದು ಸುತ್ತಿಗೆ!

MDNL

Kasaragodu: ಎಂಡಿಎಂಎ ಬೆಂಗಳೂರಿನಿಂದ ಪೂರೈಕೆ: ಎಸ್‌ಪಿ ಶಿಲ್ಪಾ

Moodbidri: ಸರ ಕಳ್ಳತನ; ಇಬ್ಬರು ಆರೋಪಿಗಳ ಸೆರೆ

Moodbidri: ಸರ ಕಳ್ಳತನ; ಇಬ್ಬರು ಆರೋಪಿಗಳ ಸೆರೆ

1-qwewqwqe

World Book of Records; ಪ್ರಜಾಪ್ರಭುತ್ವ ಮಾನವ ಸರಪಳಿಗೆ ವಿಶ್ವದಾಖಲೆ ಗರಿ

Hardik Pandya: ರಣಜಿ ಕ್ರಿಕೆಟ್‌ ಆಡಲು ಹಾರ್ದಿಕ್‌ ಪಾಂಡ್ಯ ಸಿದ್ಧತೆ

Hardik Pandya: ರಣಜಿ ಕ್ರಿಕೆಟ್‌ ಆಡಲು ಹಾರ್ದಿಕ್‌ ಪಾಂಡ್ಯ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.