![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jan 9, 2024, 7:27 AM IST
ಮೇಷ: ನಿಮ್ಮ ಬುದ್ಧಿಶಕ್ತಿಯನ್ನು ಒರೆಗೆ ಹಚ್ಚುವ ಪರೀಕ್ಷೆಯಲ್ಲಿ ವಿಜಯ. ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಬದಲಾವಣೆ. ಹೊಟೇಲ್ ಉದ್ಯಮಿಗಳು ನೌಕರರ ಸಮಸ್ಯೆಗಳಿಂದ ಪಾರು. ದೂರ ದೇಶದಲ್ಲಿರುವ ಮಕ್ಕಳಿಂದ ಸಂತೋಷದ ಸಮಾಚಾರ.
ವೃಷಭ: ನರ್ಸಿಂಗ್ ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶ. ನೂತನ ಯೋಜನೆ ಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನದಲ್ಲಿ ಮುನ್ನಡೆ. ದೀರ್ಘಕಾಲದ ದಾಯಾದಿ ನ್ಯಾಯಾಲಯ ಖಟ್ಲೆ ಮುಕ್ತಾಯ. ನೂತನ ಯೋಜನೆಗಳನ್ನು ಅನುಷ್ಠಾನ.
ಮಿಥುನ: ಯುವಜನರಿಗೆ ಧಾರ್ಮಿಕ ಮಾರ್ಗದರ್ಶನದ ವ್ಯವಸ್ಥೆಯ ನೇತೃತ್ವ. ಯಾರಿಗೂ ಅಯಾಚಿತವಾಗಿ ಸಲಹೆ ನೀಡದಿರಿ. ಯೋಜನೆಗಳ ಅನುಷ್ಠಾನದ ವೇಗವರ್ಧನೆ ಪ್ರಕ್ರಿಯೆ. ತಾತ್ಕಾಲಿಕ ಉದ್ಯೋಗಸ್ಥರ ಅತಂತ್ರ ಸ್ಥಿತಿಗೆ ಪರಿಹಾರ.
ಕರ್ಕಾಟಕ:ಸುಲಭವಾಗಿ ಕಾರ್ಯಸಾಧಿಸಲು ಮಾರ್ಗ ಅನ್ವೇಷಣೆ. ಉದ್ಯೋಗಸ್ಥರ ಆರ್ಥಿಕ ತೊಂದರೆಗೆ ತಾತ್ಕಾಲಿಕ ಪರಿಹಾರ. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ಕೆಂಪು ಪಟ್ಟಿ ಅಡ್ಡಿ. ಸರಕಾರಿ ವ್ಯವಸ್ಥೆಗಳ ಸುಧಾರಣೆಗೆ ರಾಜಕಾರಣಿಗಳ ನಿರಾಸಕ್ತಿ.
ಸಿಂಹ: ಶೀಘ್ರಗತಿಯ ಕ್ರಮಗಳಿಂದ ಇನ್ನಷ್ಟು ಜವಾಬ್ದಾರಿಗಳ ಹೊರೆ. ಒಂದಕ್ಕಿಂತ ಹೆಚ್ಚು ವ್ಯವಹಾರಗಳ ಕಡೆಗೆ ಗಮನ ಕೊಡಲು ಒತ್ತಡ. ಹಿರಿಯ ಪರಿಣತರ ಸಕ್ರಿಯ ಪಾತ್ರ. ಕುಟುಂಬದ ಮನೆಯಲ್ಲಿ ದೇವತಾರ್ಚನೆ. ಎಲ್ಲರಿಗೂ ಉತ್ತಮ ಆರೋಗ್ಯ.
ಕನ್ಯಾ: ಪರಿಪೂರ್ಣ ವೃತ್ತಿ ಪರಿಣತಿಯಿಂದ ಸರ್ವವಿಧ ಲಾಭ. ಹೊಸ ಕಾರ್ಯಕ್ಷೇತ್ರದಲ್ಲಿ ಎಲ್ಲರ ಸಹಕಾರ. ಪ್ರತಿಭೆ ಹಾಗೂ ಕಾರ್ಯನಿಷ್ಠೆಗೆ ಮಾಲಕರಿಂದ ಶ್ಲಾಘನೆ. ಹಿರಿಯರ ಆಸ್ತಿಯಲ್ಲಿ ಕೃಷಿ ವಿಸ್ತರಣೆ ಆರಂಭ.
ತುಲಾ: ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಸ್ವಲ್ಪ ಸಡಿಲು. ಸಾಂದರ್ಭಿಕವಾದ ಎಲ್ಲ ಬಗೆಯ ಪರೀಕ್ಷೆಗಳಲ್ಲೂ ವಿಜಯ. ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ. ಲೇವಾದೇವಿ ವ್ಯವಹಾರದಿಂದ ದೂರವಿರಿ. ನ್ಯಾಯಾ ಲಯದಲ್ಲಿರುವ ಆಸ್ತಿ ವ್ಯಾಜ್ಯದಲ್ಲಿ ವಿಜಯ.
ವೃಶ್ಚಿಕ: ಎಲ್ಲ ಬಗೆಯ ಪರಿಸ್ಥಿತಿಗಳಲ್ಲೂ ಅನುಕೂಲದ ಪರಿಣಾಮ. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿ ಇಲ್ಲ. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಆತಂಕ ಕೊಂಚ ದೂರ. ರಾಜಕಾರಣಿ ಗಳಿಗೆ ಬಿಗಿಯಾದ ಇಕ್ಕಟ್ಟಿನ ಪರಿಸ್ಥಿತಿ.
ಧನು: ನಿರಂತರ ಜನ್ಮಜಾತ ಉದ್ಯಮಶೀಲತೆಗೆ ಸಹಚರರ ಮೆಚ್ಚುಗೆ. ಪರಿಸರದ ಸ್ವರೂಪ ಬದಲಾವಣೆಗೆ ಆದ್ಯತೆ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ಮಕ್ಕಳ ಅಧ್ಯಯನಾಸಕ್ತಿ ಬೆಳೆಸಲು ಪ್ರೋತ್ಸಾಹ.
ಮಕರ: ಸಂದಿಗ್ಧ ಪರಿಸ್ಥಿತಿಗಳಿಂದ ಸದ್ಯಕ್ಕೆ ಮುಕ್ತಿ. ಉದ್ಯೋಗಸ್ಥರ ಕಾರ್ಯಸಾಮರ್ಥ್ಯ ಪರೀಕ್ಷೆಗಳಲ್ಲಿ ವಿಜಯ. ಬಂಧುವರ್ಗದಲ್ಲಿ ವೈಷಮ್ಯ ನಿವಾರಣೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಗೃಹೋಪಯೋಗಿ ಸಾಮಗ್ರಿಗಳ ದುರಸ್ತಿಗೆ ಧನವ್ಯಯ.
ಕುಂಭ: ಮೇಲಿಂದ ಮೇಲೆ ಕಾಡುವ ಹಲವು ಬಗೆಯ ಜವಾಬ್ದಾರಿಗಳು. ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ. ಸರಕಾರಿ ನೌಕರರಿಗೆ ಹೆಚ್ಚುವರಿ ಜವಾಬ್ದಾರಿಗಳು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಲ್ಲಿ ಲಾಭ. ಕೃಷಿಕರಿಗೆ ನೂತನ ಬೆಳೆಗಳಲ್ಲಿ ಆಸಕ್ತಿ.
ಮೀನ: ಸಪ್ತಾಹ ಪ್ರಾರಂಭದ ದಿನದ ಹಿತಾನುಭವಗಳ ಮುಂದುವರಿಕೆ. ಉದ್ಯೋಗ ಸ್ಥಾನದಲ್ಲಿ ಸಹಚರರಿಂದ ವಿಶೇಷ ಸಹಾಯ. ಸೇವಾರೂಪದಕಾರ್ಯಗಳು ಸಂಬಂಧಪಟ್ಟವರ ಸಹಕಾರದಿಂದ ಮುನ್ನಡೆಕೊಂಚಕಾಲದಿಂದ ನಿಲ್ಲಿಸಿದ್ದ ಉದ್ಯಮ ಮುಂದುವರಿಕೆ. ದೇವತಾ ಸಾನ್ನಿಧ್ಯಕ್ಕೆ ಭೇಟಿ.ಪರಿಸರ ಸುಧಾರಣ ಕಾರ್ಯಗಳಲ್ಲಿ ಆಸಕ್ತಿ. ಹಿರಿಯರ ಆರೋಗ್ಯದತ್ತ ಗಮನವಿರಲಿ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.