![supreme-Court](https://www.udayavani.com/wp-content/uploads/2025/02/supreme-Court-5-415x249.jpg)
![supreme-Court](https://www.udayavani.com/wp-content/uploads/2025/02/supreme-Court-5-415x249.jpg)
Team Udayavani, Jan 9, 2024, 11:54 AM IST
ಬೆಂಗಳೂರು: ಇತ್ತೀಚೆಗೆ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಹಳೇ ಮದ್ರಾಸ್ ರಸ್ತೆಯಲ್ಲಿ ರುವ ನಿರ್ವಾಣ ಇಂಟರ್ ನ್ಯಾಷನಲ… ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಸ್ಪಾ ಮಾಲೀಕ ಅನಿಲ್ ವಿರುದ್ಧ ಈ ಹಿಂದೆ ಅತ್ಯಾಚಾರ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಸ್ಪಾ ಮಾಲೀಕ ಅನಿಲ್ ವಿರುದ್ಧ ಅತ್ಯಾಚಾರ ಮತ್ತು ಜಾತಿ ನಿಂದನೆ ಪ್ರಕರಣದ ಸಂಬಂಧ ಎಫ್ಐಆರ್ ದಾಖಲಾಗಿತ್ತು. ಇದೇ ಸ್ಪಾನಲ್ಲಿ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಮತ್ತೂಂದೆಡೆ ಮಹಿಳೆಯ ವಿಚಾರಣೆಯಲ್ಲಿ ಮಧ್ಯ ಪ್ರದೇಶದಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿ, ಬಂಧನಕ್ಕೊಳಗಾಗಿದ್ದಳು ಎಂಬುದು ಗೊತ್ತಾಗಿದೆ. ಆದಾದ ಬಳಿಕ ಬೆಂಗಳೂರಿಗೆ ಶಿಫ್ಟ್ ಆಗಿದ್ದ ಆ ಮಹಿಳೆ ಇದೇ ನಿರ್ವಾಣ ಸ್ಪಾ ಸೆಂಟರ್‌ನಲ್ಲಿ ಕೆಲಸ ಮಾಡುವಾಗ ಕಳ್ಳತನ ಆರೋಪದಲ್ಲಿ ಆಕೆಯನ್ನು ಬಂಧಿಸಲಾಗಿತ್ತು. ನಂತರ ಜೈಲಿನಿಂದ ಬಿಡುಗಡೆಯಾಗಿ ಬಂದು ಮಾಲೀಕ ಅನಿಲ… ವಿರುದ್ದ ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದರು. ಮಹಿಳೆ ದೂರು ಆಧರಿಸಿ ಸ್ಪಾ ಮಾಲೀಕನ ಮೇಲೆ ಅತ್ಯಾಚಾರ ಜತೆ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ವೈಟ್‌ಫೀಲ್ಡ… ಎಸಿಪಿ ನೇತೃತ್ವದ ಪೊಲೀಸರು ಸ್ಪಾಗೆ ಹೋಗಿ ಮಹಜರು ಮಾಡಿದ್ದರು. ಸಿಸಿ ಕ್ಯಾಮೆರಾ ಪರಿಶೀಲನೆ, ಅಲ್ಲಿಯ ಸಿಬಂದಿ ಹೇಳಿಕೆ ಸೇರಿ ಸ್ಥಳ ಮಹಜರು ನಡೆಸಿದ್ದರು. ತನಿಖೆಯ ನಂತರ ಯಾವುದೇ ದಂಧೆ ಅಥವಾ ಅತ್ಯಾಚಾರ ನಡೆದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು. ಪ್ರಸ್ತುತ ಆ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
Reprimand: ಕೆಲಸದಲ್ಲಿ ಅಧಿಕಾರಿಗಳು ಬೈದರೆ ಅದು ಕ್ರಿಮಿನಲ್ ಅಪರಾಧವಲ್ಲ: ಸುಪ್ರೀಂಕೋರ್ಟ್
Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್ ಸಿಟಿ ನಿರ್ಮಾಣ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
You seem to have an Ad Blocker on.
To continue reading, please turn it off or whitelist Udayavani.