Ayodhya: ರಾಮಮಂದಿರ ಉದ್ಘಾಟನೆ ಸನ್ನಿಹಿತ- 30 ವರ್ಷದ ಬಳಿಕ ಮೌನ ವೃತ ಮುರಿಯಲಿರುವ ಮಹಿಳೆ!
ಬಾಬ್ರಿ ಮಸೀದಿ ಧ್ವಂಸಗೊಂಡ ದಿನದಿಂದ ತನ್ನ ತಾಯಿ ಮೌನ ವೃತಕ್ಕೆ ಶರಣಾಗಿದ್ದರು
Team Udayavani, Jan 9, 2024, 12:42 PM IST
ಜಾರ್ಖಂಡ್(ಧನ್ ಬಾದ್): ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರ ಉದ್ಘಾಟನೆಯೊಂದಿಗೆ ತನ್ನ ಕನಸು ನನಸಾಗುತ್ತಿರುವುದಕ್ಕೆ ಸುದೀರ್ಘ ಮೂರು ದಶಕಗಳ ಕಾಲ ಮೌನ ವೃತದ ಶಪಥ ಕೈಗೊಂಡಿದ್ದ ಜಾರ್ಖಂಡ್ ನ 85 ವರ್ಷದ ಮಹಿಳೆಯೊಬ್ಬರು ತನ್ನ ಮೌನ ವೃತ ಮುರಿಯಲು ಸಿದ್ಧರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Police notice: ಅವಧಿ ಮೀರಿ ಪಾರ್ಟಿ; ದರ್ಶನ್ ಸೇರಿ 8 ಮಂದಿಗೆ ನೋಟಿಸ್
ಏನಿದು ಶಪಥ:
1992ರಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ದಿನ ಸರಸ್ವತಿ ದೇವಿ ಮೌನ ವೃತದ ಶಪಥ ಕೈಗೊಂಡಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ನಂತರವೇ ತನ್ನ ಮೌನ ವೃತ ಮುರಿಯುವುದಾಗಿ ಆಕೆ ತಿಳಿಸಿದ್ದರು ಎಂದು ಕುಟುಂಬದ ಮೂಲಗಳು ಹೇಳಿವೆ.
ಇದೀಗ ಭವ್ಯ ರಾಮಮಂದಿರ ಉದ್ಘಾಟನೆಯನ್ನು ಕಣ್ತುಂಬಿಕೊಳ್ಳಲು ಧನ್ ಬಾದ್ ನಿವಾಸಿ ಸರಸ್ವತಿ ದೇವಿ ಅವರು ಸೋಮವಾರ ರಾತ್ರಿ ಉತ್ತರಪ್ರದೇಶಕ್ಕೆ ರೈಲಿನಲ್ಲಿ ತೆರಳಿದ್ದಾರೆ. “ಮೌನಿ ಮಾತಾ” ಎಂದೇ ಜನಪ್ರಿಯರಾಗಿದ್ದ ಈಕೆ ತನ್ನ ಕುಟುಂಬದ ಸದಸ್ಯರೊಂದಿಗೆ ಸಾಂಕೇತಿಕ ಭಾಷೆಯಲ್ಲಿ ಸಂವಹನ ನಡೆಸುತ್ತಿದ್ದರಂತೆ, ಆದರೆ ಕೆಲವೊಂದು ಕ್ಲಿಷ್ಟಕರ ಮಾತನ್ನು ಬರೆದು ತೋರಿಸುತ್ತಿದ್ದರು.
ಏತನ್ಮಧ್ಯೆ ಸರಸ್ವತಿ ದೇವಿ ಅವರು ಸ್ವಲ್ಪ ಸಮಯ ಮೌನ ವೃತವನ್ನು ಮುರಿದು ಒಂದು ಗಂಟೆ ಮಾತ್ರ ಮಾತನಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಶಂಕು ಸ್ಥಾಪನೆ ನೆರವೇರಿಸಿದ ನಂತರ ಸಂಪೂರ್ಣವಾಗಿ ಮೌನಕ್ಕೆ ಶರಣಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸಗೊಂಡ ದಿನದಿಂದ ತನ್ನ ತಾಯಿ ಮೌನ ವೃತಕ್ಕೆ ಶರಣಾಗಿದ್ದರು ಎಂದು ಸರಸ್ವತಿ ದೇವಿಯ ಕಿರಿಯ ಪುತ್ರ ಹರೇ ರಾಮ್ ಅಗರ್ವಾಲ್ (55ವರ್ಷ) ಪಿಟಿಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಸೋಮವಾರ ರಾತ್ರಿ ರೈಲಿನಲ್ಲಿ ಅಯೋಧ್ಯೆಗೆ ತೆರಳಿರುವ ನನ್ನ ತಾಯಿ ಜನವರಿ 22ರಂದು ಮೌನ ವೃತ ಮುರಿಯಲಿದ್ದಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಆಗಮಿಸುವಂತೆ ತಾಯಿಗೆ ಮಹಾಂತ್ ನೃತ್ಯ ಗೋಪಾಲ್ ದಾಸ್ ಅವರು ಆಹ್ವಾನ ನೀಡಿರುವುದಾಗಿ ಹರೇ ರಾಮ್ ಮಾಹಿತಿ ನೀಡಿದ್ದಾರೆ.
ಎಂಟು ಮಕ್ಕಳ ತಾಯಿಯಾಗಿರುವ (4 ಹೆಣ್ಣುಮಕ್ಕಳು) ಸರಸ್ವತಿ ದೇವಿ ತನ್ನ ಪತಿ ದೇವಕಿನಂದನ್ ಅಗರ್ವಾಲ್ 1986ರಲ್ಲಿ ನಿಧನರಾದ ಬಳಿಕ ತನ್ನ ಜೀವನವನ್ನು ರಾಮ ಭಕ್ತಿಗೆ ಸಮರ್ಪಿಸಿಕೊಂಡಿದ್ದರು. ಸರಸ್ವತಿ ದೇವಿ ಅವರು ಪ್ರಸ್ತುತ ತನ್ನ ಎರಡನೇ ಹಿರಿಯ ಪುತ್ರ, ಬಿಸಿಸಿಎಲ್ ಉದ್ಯೋಗಿ ನಂದ ಲಾಲ್ ಅಗರ್ವಾಲ್ ಜತೆ ವಾಸಿಸುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.