Sri Rama Mandir ಭಾರತೀಯರ ಅಸ್ಮಿತೆ: ಶ್ರೀ ವಚನಾನಂದ ಸ್ವಾಮೀಜಿ
Team Udayavani, Jan 10, 2024, 5:59 AM IST
ಪ್ರಾಕೃತಿಕ ನಿಯಮಗಳಿಗೆ ಅತೀ ಹೆಚ್ಚು ತೂಕವಿರುತ್ತದೆ. ನಿರ್ವಿಕಾರವಾದ, ಅಲಿಖಿತವಾದ, ಸಾರ್ವಕಾಲಿಕವಾದ ಪ್ರಾಕೃತಿಕ ನಿಯಮಗಳ ಮುಂದೆ ಯಾರು ಅತೀತರಲ್ಲ. ಯಾರೂ ಶ್ರೇಷ್ಠರಲ್ಲ, ಯಾರೂ ಅಶ್ರೇಷ್ಠರಲ್ಲ. ಹೊಳಪು ಕಳೆದುಕೊಂಡಿದ್ದು ಮತ್ತೆ ಹೊಳಪು ಪಡೆಯುತ್ತದೆ. ಹೊಳೆಯುತ್ತಿರೋದು ಒಂದಲ್ಲ ಒಂದು ಬಾರಿ ಹೊಳಪು ಕಳೆದುಕೊಳ್ಳುತ್ತದೆ. ಇದು ನಿಸರ್ಗದ ನಿಯಮ.
ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಪ್ರಾಕೃತಿಕ ನಿಯಮ ಸಾರ್ವಕಾಲಿಕ ಅನ್ನೋದು ಮತ್ತೂಮ್ಮೆ ಪ್ರಕೃತಿಯೇ ಸಾಬೀತುಪಡಿಸಿದೆ. ಒಂದು ಕಾಲದ ರಾಮ ಮಂದಿರ ಮಸೀದಿಯಾಯ್ತು, ಈಗ ರಾಮಮಂದಿರ ಮತ್ತೆ ತಲೆ ಎತ್ತಿದೆ. ಅದು ಭವ್ಯವಾಗಿ, ದೊಡ್ಡದಾಗಿ, ವಿಶ್ವವೇ ತಲೆ ಎತ್ತಿ ನೋಡುವಂತಾಗಿದೆ.
ರಾಮನೆಂದರೆ ಯಾರು? ರಾಮನೆಂದರೆ ದೇವರೇ? ರಾಮನೆಂದರೆ ಆದರ್ಶ ಕ್ಷತ್ರಿಯನೇ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಗೂಗಲ್‌ನಲ್ಲಿ ಎಷ್ಟೋ ಜನರು ಸರ್ಚ್ ಮಾಡಿದ್ದಾರೆ. ಆದರೆ ನಿಜ ಅರ್ಥದಲ್ಲಿ ರಾಮನೆಂದರೆ ಕೇವಲ ಆಂಜನೇಯನ ಎದೆಯಲ್ಲಿ ಮಾತ್ರವಲ್ಲ, ಪ್ರತೀ ಹಿಂದೂವಿನ ಹೃದಯದಲ್ಲಿ ವಿರಾಜಮಾನವಾಗಿ ಕುಳಿತಿ ರುವವನೇ ಆಗಿದ್ದಾನೆ. ಇಷ್ಟು ವರ್ಷಗಳ ಕಠಿನ ಹೋರಾಟ, ಇಷ್ಟು ವರ್ಷಗಳ ಕಾನೂನು ಪ್ರಕ್ರಿಯೆ ನಡುವೆಯೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ ಎನ್ನುವುದು ಕಲಿಯುಗದಲ್ಲಿ ಸಿಕ್ಕ ಅತೀ ದೊಡ್ಡ ನ್ಯಾಯವೆಂದು ವರ್ಣಿಸಬೇಕು. ರಾಮಮಂದಿರ ಭರತಭೂಮಿಗೆ ಕೇವಲ ಮಂದಿರವಲ್ಲ. ರಾಮ ಮಂದಿರ ಭಾರತೀಯರ ಅಸ್ಮಿತೆ. ರಾಮಮಂದಿರ ಒಂದು ಗುರುತಾಗಿದೆ.
ಪ್ರಜೆಗಳ ಅಸ್ಮಿತೆ
ಪ್ರತೀ ಬಾರಿ ರಾಮಮಂದಿರ ವಿಚಾರ ಬಂದಾಗ, ಕಹಿ ಅನು ಭವಿಸುತ್ತಿದ್ದ ಅದೆಷ್ಟೋ ಜನರಿಗೆ ರಾಮಮಂದಿರ ಕೇವಲ ಮಂದಿರವಲ್ಲ, ಅಸ್ಮಿತೆ. ನೀವು ಗಮನಿಸಿದ್ದಿರೋ ಇಲ್ಲವೋ, ರಾಮಮಂದಿರದ ಲೋಕಾರ್ಪ ಣೆಯ ದಿನಾಂಕ ಘೋಷಣೆಯಾದ ಕ್ಷಣದಿಂದಲೂ ಭಾರತದ ಬಹುತೇಕ ಜನರು ಆ ದಿನಕ್ಕಾಗಿ ಕಾಯುತ್ತಿದ್ದಾರೆ. ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ, ಫೇ ಸ್ ಬುಕ್, ಎಕ್ಸ್, ಇನ್‌ಸ್ಟಾಗ್ರಾಂನಲ್ಲಿ ಒಂದಲ್ಲ ಒಂದು ಪೋಸ್ಟ್ ಮಾಡು ತ್ತಲೇ ಇದ್ದಾರೆ. ಇದು ಯಾವುದೋ ವ್ಯಕ್ತಿಯ ಕಾರಣಕ್ಕಾಗಿ ಅಲ್ಲ, ಯಾರನ್ನೋ ಮೆಚ್ಚಿಸಬೇಕೆಂದು ಅಲ್ಲ. ಮನಸ್ಸಿನ ಸಂತೋಷಕ್ಕಾಗಿ, ಮನಸ್ಸಿನ ಅಪೇಕ್ಷೆಗಾಗಿ.
ಯಾವ ವಿಚಾರ ಇಡೀ ನರಮಂಡಲವನ್ನು ಉಲ್ಲಸಿತಗೊಳಿಸುತ್ತದೆಯೋ ಆ ವಿಚಾರವನ್ನು ಮನುಷ್ಯ ಹಂಚುತ್ತಾನೆ, ಹರಡುತ್ತಾನೆ ಹಾಗೂ ಘೋಷಿಸು ತ್ತಾನೆ. ಬಹುಶಃ ನನ್ನ ದೃಷ್ಟಿಕೋನದಲ್ಲಿ ಇಂದು ಬಹುತೇಕ ಭಾರತೀಯರ ಸೋಶಿಯಲ್ ಮೀಡಿಯಾವನ್ನು ರಾಮನೇ ಆವರಿಸಿಬಿಟ್ಟಿದ್ದಾನೆ. ಕೇವಲ ಸೋಶಿಯಲ್ ಮೀಡಿಯಾ ಅಂತಲ್ಲ. ನಾನು ಸುತ್ತಾಡಿರೋ ರಾಜ್ಯದ ಬಹು ತೇಕ ತಾಲೂಕು, ಹೋಬಳಿ, ಜಿಲ್ಲೆಯಲ್ಲೂ ರಾಮನೇ ರಾರಾಜಿಸು ತ್ತಿದ್ದಾನೆ. ಈ ಎಲ್ಲ ಕಾರಣಗಳಿಂದ ರಾಮಮಂದಿರ ದೇಶದ ಪ್ರಜೆ ಗಳ ಅಸ್ಮಿತೆಯೇ ಆಗಿದೆ. ಇದು ಹೇರುವಿಕೆಯ ಅಸ್ಮಿತೆಯಲ್ಲ, ಬಲವಂತವಾಗಿ ತುರುಕಿದ್ದೂ ಅಲ್ಲ. ಇದು ಸ್ವಯಂಪ್ರೇರಿತ.
ಬಡವರ ಕನಸೂ ನನಸು
ಅಯೋಧ್ಯೆಯಲ್ಲಿ ನಿರ್ಮಾಣ ವಾಗಿರುವ ರಾಮಮಂದಿರ ಕೇವಲ ಆಧ್ಯಾತ್ಮಿಕ ವಿಚಾರ ಗಳಿಗೆ ಮಾತ್ರವೇ ಪ್ರಾಮುಖ್ಯ ಪಡೆದುಕೊಳ್ಳುತ್ತಿಲ್ಲ. ವ್ಯಾಪಾರ-ವಹಿವಾಟು ದೃಷ್ಟಿಯಿಂದಲೂ ಮುಖ್ಯವಾಗು ತ್ತಿದೆ. ರಾಮಮಂದಿರ ನಿರ್ಮಾಣದಿಂದ ಅನೇಕ ಬಡವರ ಬೊಗಸೆ ತುಂಬಲಿದೆ. ಬಡವರ ಕನಸುಗಳು ರಾಮನಿಂದ ನನಸಾಗಲಿದೆ. ಇದು ನಿಶ್ಚಿತ.
ಇನ್ನೊಂದು ವಿಚಾರ ಹೇಳಲೇಬೇಕು. ಭದ್ರತೆಯ ದೃಷ್ಟಿ ಯಿಂದ ಅಯೋಧ್ಯೆ ತುಂಬ ಸೇಫ್. ಅಯೋಧ್ಯೆಗೆ ಯಾವುದೇ ಕಡೆಯಿಂದಲೂ ಬಾಂಬ್‌ಗಳನ್ನು ತರಲು ಸಾಧ್ಯ ವಿಲ್ಲ. ಅತ್ಯುನ್ನತ ತಂತ್ರಜ್ಞಾನದ ಸಹಾಯದಿಂದ ಅಯೋಧ್ಯೆ ಯನ್ನು ರಕ್ಷಿಸಲಾಗುತ್ತಿದೆ. ಕೇವಲ ಭದ್ರತೆಗಾಗಿ ಅಂದಾಜು 90 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದು ಕಣ್ಣಿಗೆ ಕಾಣುವ ಭದ್ರತಾ ವ್ಯವಸ್ಥೆ. ಆದರೆ ಕಣ್ಣಿಗೆ ಕಾಣದ ಶಕ್ತಿಯೊಂದಿದೆ. ಅದಕ್ಕಿಂತಲೂ ಪರಮಶಕ್ತಿ ಇನ್ನೊಂದಿಲ್ಲ. ಅದಕ್ಕೆ ಜೀವಂತ ಉದಾಹರಣೆಯೂ ಇದೆ.
ಹನುಮನ ರಕ್ಷಣೆ
ರಾಮಜನ್ಮಭೂಮಿ ಕಾಂಪೌಂಡ್ ಬಳಿ ಬಾಂಬ್ ಸ್ಫೋಟಿಸಲು ಉಗ್ರರು 1998ರಲ್ಲಿ ಯತ್ನಿಸಿದ್ದರು. ಬಾಂಬ್‌ಗಳನ್ನು ಅಯೋ ಧ್ಯೆಯ ಹನುಮಾನ್ ಗಢಿ ದೇವಾಲಯದ ಕಾಂಪೌಂಡ್ ಬಳಿ ಎಸೆದಿದ್ದರು. ಆದರೆ ಭಗವಾನ್ ಆಂಜನೇಯನ ರಕ್ಷಣೆ ಅಯೋಧ್ಯೆಗೆ ಇರುವುದರಿಂದ ಆ ಬಾಂಬ್‌ಗಳು ಸ್ಫೋಟವಾಗಲೇ ಇಲ್ಲ! ಉಗ್ರರು ಪೊಲೀಸರ ಕೈಗೆ ಸಿಕ್ಕಿ ಬಿದ್ದರು. ಆ ಬಾಂಬ್‌ಗಳು ಏಕೆ ಸ್ಫೋಟಗೊಳ್ಳಲಿಲ್ಲ ಎನ್ನುವುದಕ್ಕೆ ಉತ್ತರವೇ ದೈವಶಕ್ತಿ. ಈ ದೈವಶಕ್ತಿಯಿಂದಲೇ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಈ ಎಲ್ಲ ಕಾರಣಗಳಿಂದಲೇ ಅಯೋಧ್ಯೆ ಭಾರತೀಯರ ಅಸ್ಮಿತೆಯಾಗಿದೆ ಹಾಗೂ ಸನಾತನ ಧರ್ಮದ ಕಳಶಪ್ರಾಯವಾಗಿದೆ.
ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯ ದಿನ (ಜನವರಿ 22) ಮನೆ ಮನೆಯಲ್ಲೂ ಶ್ರೀರಾಮನನ್ನು ಕಾಣಿರಿ. ಮನೆಯಲ್ಲಿ ದೀಪ ಹಚ್ಚುವ ಮೂಲಕ ಶ್ರೀರಾಮನನ್ನು ಪೂಜಿಸಿ, ಧ್ಯಾನಿಸಿ, ಸಮರ್ಪಿಸಿಕೊಳ್ಳಿ.
ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ಹರಿಹರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.