Red Sea ಬಂಡುಕೋರರ ದಾಳಿ: ಭಾರತದ ರಫ್ತಿಗೆ ಹೊಡೆತ
ರಫ್ತು ಪ್ರಮಾಣ 2.50 ಲಕ್ಷ ಕೋಟಿ ರೂ. ಇಳಿಕೆ ಸಾಧ್ಯತೆ...ದೇಶದ ರಫ್ತುದಾರರಿಂದ ಶಿಪ್‌ಮೆಂಟ್‌ಗೆ ಹಿಂದೇಟು
Team Udayavani, Jan 10, 2024, 12:43 AM IST
ಹೊಸದಿಲ್ಲಿ: ಕೆಂಪು ಸಮುದ್ರದಲ್ಲಿ ಸರಕು ಹಡಗುಗಳ ಮೇಲೆ ಹೌತಿ ಬಂಡುಕೋರರು ನಡೆಸುತ್ತಿರುವ ನಿರಂತರ ದಾಳಿಯು ಭಾರತದ ಆರ್ಥಿಕತೆಯ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ದಾಳಿ ಭೀತಿಯಿಂದ ರಫ್ತುದಾರರು ಶಿಪ್‌ಮೆಂಟ್‌ಗೆ ಹಿಂದೇಟು ಹಾಕುತ್ತಿದ್ದು, ಇದರ ಪರಿಣಾಮವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಒಟ್ಟಾರೆ ರಫ್ತು ಮೊತ್ತದಲ್ಲಿ 2.50 ಲಕ್ಷ ಕೋಟಿ ರೂ. (30 ಶತಕೋಟಿ ಡಾಲರ್) ನಷ್ಟವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಕಳೆದ ವಿತ್ತ ವರ್ಷದಲ್ಲಿ ಭಾರತವು 37.48 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳನ್ನು ರಫ್ತು ಮಾಡಿತ್ತು. ಈ ಬಾರಿ ಇದರಲ್ಲಿ ಶೇ.6.7ರಷ್ಟು ಕುಸಿತವಾಗಲಿದೆ ಎಂದು ಹೇಳಲಾಗಿದೆ.
ಅರಬಿ ಸಮುದ್ರಕ್ಕೆ ಭಾರತದ 10 ಯುದ್ಧ ನೌಕೆ ರವಾನೆ
ಡ್ರೋನ್ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯು ಅರಬಿ ಸಮುದ್ರಕ್ಕೆ 10 ಯುದ್ಧ ನೌಕೆಗಳನ್ನು ರವಾನಿಸಿದೆ. ಲೈಬೀರಿಯಾದ ಎಂವಿ ಚೆಮ್ ಫ್ಲೂಟೋ ಹಡಗಿನ ಮೇಲೆ ಕಡಲ್ಗಳ್ಳರು ದಾಳಿ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಐಎನ್‌ಎಸ್ ಕೋಲ್ಕತಾ, ಐಎನ್‌ಎಸ್ ಕೊಚ್ಚಿ, ಐಎನ್‌ಎಸ್ ಚೆನ್ನೈ ಸೇರಿದಂತೆ ಒಟ್ಟು 10 ಯುದ್ಧನೌಕೆಗಳು ನಿಯೋಜನೆಗೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.