Watch; ನೇರ ಪ್ರಸಾರದ ಸಮಯದಲ್ಲಿ ಟಿವಿ ಸ್ಟುಡಿಯೋಗೆ ನುಗ್ಗಿದ ಬಂದೂಕುಧಾರಿಗಳು
Team Udayavani, Jan 10, 2024, 8:20 AM IST
ಗುವಾಕ್ವಿಲ್: ಟಿವಿ ಚಾನೆಲೊಂದಕ್ಕೆ ನುಗ್ಗಿದ ಮುಸುಕುಧಾರಿ ವ್ಯಕ್ತಿಗಳು ಬಂದೂಕು ಝಳಪಿಸಿದ ಘಟನೆ ಕಲಹ ಪೀಡಿತ ಈಕ್ವೆಡಾರ್ ನಲ್ಲಿ ಮಂಗಳವಾರ ನಡೆದಿದೆ. ಹಿಂಸಾಚಾರ ಪೀಡಿಯ ದೇಶವು ಆಂತರಿಕ ಸಶಸ್ತ್ರ ಸಂಘರ್ಷಕ್ಕೆ ಪ್ರವೇಶಿಸಿದೆ ಎಂದು ಅಧ್ಯಕ್ಷರು ಘೋಷಿಸಿದ್ದಾರೆ.
ನೇರ ಪ್ರಸಾರವಾಗುತ್ತಿದ್ದ ಸುದ್ದಿ ಕಾರ್ಯಕ್ರಮದ ಸಂದರ್ಭದಲ್ಲಿ ಪಿಸ್ತೂಲ್ ಗಳನ್ನು ಹೊಂದಿದ್ದ ಮತ್ತು ಡೈನಮೈಟ್‌ನ ಕಡ್ಡಿಗಳಂತೆ ಕಾಣುತ್ತಿದ್ದ ವಸ್ತುಗಳನ್ನು ಹೊತ್ತಿದ್ದ ವ್ಯಕ್ತಿಗಳು ಬಂದರು ನಗರವಾದ ಗುವಾಕ್ವಿಲ್ ನಲ್ಲಿ ಟಿಸಿ ಟೆಲಿವಿಷನ್ ನೆಟ್‌ವರ್ಕ್ ನ ಸೆಟ್ ಗೆ ಅಕ್ರಮವಾಗಿ ಪ್ರವೇಶಿಸಿದರು. ತಮ್ಮ ಬಳಿ ಬಾಂಬ್ ಗಳಿವೆ ಎಂದು ಬೆದರಿಸಿದ್ದಾರೆ. ಹಿನ್ನಲೆಯಲ್ಲಿ ಗುಂಡೇಟಿನ ರೀತಿಯ ಸದ್ದು ಕೇಳುತ್ತಿತ್ತು. ದಾಳಿಯಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂದು ವರದಿಯಾಗಿದೆ.
ಸುಮಾರು 15 ನಿಮಿಷಗಳ ನಂತರ ನಿಲ್ದಾಣದ ಸಿಗ್ನಲ್ ಕಡಿತಗೊಂಡರೂ ಘಟನೆಯನ್ನು ನೇರ ಪ್ರಸಾರ ಮಾಡಲಾಯಿತು. ಕೆಲವು ದಾಳಿಕೋರರು ಸ್ಟುಡಿಯೊದಿಂದ ಓಡಿಹೋದರು, ತಮ್ಮನ್ನು ಪೊಲೀಸರು ಸುತ್ತುವರೆದಿದ್ದಾರೆಂದು ತಿಳಿದಾಗ ಮರೆಯಾಗಲು ಪ್ರಯತ್ನಿಸಿದರು.
ಟಿವಿ ಚಾನೆಲ್ ಆಕ್ರಮಣದ ಹಿಂದೆ ಯಾರಿದ್ದಾರೆ ಎಂದು ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿಲ್ಲ. ಇತ್ತೀಚೆಗೆ ದಕ್ಷಿಣ ಅಮೆರಿಕಾದ ದೇಶ ಈಕ್ವೆಡಾರ್ ನಲ್ಲಿ ದಾಳಿಗಳ ಸರಣಿ ನಡೆಯುತ್ತಿದೆ.
JUST IN: The 13 thugs who took hostages on a live television broadcast in Ecuador have been arrested and will reportedly be charged with terrorism.
Here are the 13 clowns celebrating and flashing their gang signs for the cameras just moments before being arrested.
Life comes… pic.twitter.com/PR9GChrfTe
— Collin Rugg (@CollinRugg) January 10, 2024
ಕುಖ್ಯಾತ ಗ್ಯಾಂಗ್ ಲೀಡರ್ ಜೈಲಿನಿಂದ ಪರಾರಿಯಾದ ಹಿನ್ನೆಲೆಯಲ್ಲಿ ಈಕ್ವೆಡಾರ್ ನಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳ ಅಪಹರಣಗಳು ಸೇರಿದಂತೆ ಸರಣಿ ದಾಳಿಗಳು ನಡೆಯುತ್ತಿದೆ. ಅಧ್ಯಕ್ಷ ಡೇನಿಯಲ್ ನೊಬೊವಾ ಸೋಮವಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.