Ayodhya: “ಅತ್ತ ಸಭೆ ನಡೀತಿತ್ತು, ಇತ್ತ ಕಟ್ಟಡ ಉರುಳಿತ್ತು!”

ಕರಸೇವೆ ಕುರಿತು ಮಾಜಿ ಸಚಿವ ಸಿ.ಟಿ.ರವಿ ಅವರೊಂದಿಗೆ ವಿಶೇಷ ಮಾತುಕತೆ

Team Udayavani, Jan 11, 2024, 6:48 AM IST

babri masjib

ನಾನು ಸೇರಿದಂತೆ ಅನೇಕರು ಅಯೋಧ್ಯೆಯ ವಿವಾದಿತ ಕಟ್ಟಡದ ಮೇಲಿದ್ದೆವು. ಕೆಳಗಿದ್ದ ಕರಸೇವಕರು ಕಟ್ಟಡವನ್ನು ಒಡೆಯುತ್ತಿದ್ದರು. ಕಟ್ಟಡವು ಧೊಪ್ಪೆಂದು ಕೆಳಗೆ ಬೀಳುತ್ತಿತ್ತು. ಅಂದು ನನ್ನ ಕಥೆ ಮುಗಿಯಿತು ಎಂದುಕೊಂಡಿದ್ದೆ. ಆದರೆ, ದೇವರ ದಯೆಯಿಂದ ಕಟ್ಟಡದ ಮೇಲಿದ್ದವರಿಗೆ ಹಾಗೂ ಒಳಗೆ ಮತ್ತು ಹೊರಗೆ ಇದ್ದವರಿಗೆ ಏನು ಆಗಲಿಲ್ಲ. ನಾನೂ ಏನು ಆಗದೆ ಹೊರಬಂದೆ.
1992ರ ಡಿಸೆಂಬರ್‌ ಆರರಂದು ನಡೆದ ಆ ಘಟನೆಯನ್ನು ನಾನೆಂದು ಮರೆಯಲಾರೆ. ನಾವು ಚಿಕ್ಕಮಗಳೂರಿನಿಂದ 20 ಮಂದಿ ಕರಸೇವಕರಲ್ಲದ ಹಾಗೆ ರೈಲಿನಲ್ಲಿ ಹೋಗಿದ್ದೆವು. ಕರಸೇವ ಕರು ಎಂದು ಗೊತ್ತಾದರೆ ಬಂ ಧಿಸುತ್ತಿದ್ದರು. ಹಾಗಾಗಿ ಬೇರೆ ಬೇರೆ ರೀತಿಯಲ್ಲಿ ಡಿಸೆಂಬರ್‌ ಮೂರರಂದೇ ಅಯೋಧ್ಯೆ ತಲುಪಬೇಕಾ ಯಿತು. ಕರ್ನಾಟಕದವರಿಗಾಗಿ ಅಲ್ಲಿ ಟೆಂಟ್‌ ವ್ಯವಸ್ಥೆಯನ್ನು ಮಾಡಲಾಗಿತ್ತು. ರಾಜ್ಯದಿಂದ 2000ಕ್ಕೂ ಹೆಚ್ಚು ಜನರು ಕರಸೇವೆ ಯಲ್ಲಿ ಪಾಲ್ಗೊಂಡಿದ್ದರು. ಆಂಧ್ರಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ ದೇಶದ್ಯಾಂತ ಸಾವಿರಾರು ಕರಸೇವಕರು ನೆರೆದಿದ್ದರು.

ಸರಯೂ ನದಿಯಿಂದ ಮರಳು ತಂದು ಹಾಕುವಂತೆ ನಮ್ಮ ತಂಡದ ಮುಖ್ಯಸ್ಥರಿಂದ ಸೂಚನೆ ಬಂತು. ಮರಳು ತಂದು ಹಾಕಿದೆವು. ಡಿ. 6ರಂದು ಸಾರ್ವಜನಿಕ ಸಭೆ ನಡೆಯುತ್ತಿತ್ತು. ಸಭೆ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ವಿವಾದಿತ ಕಟ್ಟಡ ಸಮೀಪ ಜೈಕಾರ, ಘೋಷಣೆಗಳು ಮೊಳಗಿದವು. ನೋಡಿದರೆ ನಮ್ಮವರು ಅಲ್ಲಿದ್ದ ಅಡೆತಡೆಗಳನ್ನು ಲೆಕ್ಕಿಸದೆ ನುಗ್ಗಿ ವಿವಾದಿತ ಕಟ್ಟಡವನ್ನು ಒಡೆದರು. ನಾವು ಯಾವುದನ್ನೂ ಲೆಕ್ಕಿಸದೆ ತಂಡದ ಮುಖ್ಯಸ್ಥರಾಗಿದ್ದ ವಕೀಲ ರಾಮಸ್ವಾಮಿಯವರ ಸೂಚನೆ ಲೆಕ್ಕಿಸದೆ ಕರಸೇವೆಗೆ ನುಗ್ಗಿದ್ದೆವು.

ಕಟ್ಟಡ ಧ್ವಂಸಗೊಳ್ಳುತ್ತಿದ್ದಂತೆ ರಾಮನ ಪ್ರತಿಷ್ಠಾಪನೆ ಆಗಿ ತಾತ್ಕಾಲಿಕ ರಾಮಮಂದಿರ ನಿರ್ಮಾಣ ಆಯಿತು. ಆ ಮಂದಿರ ನಿರ್ಮಾಣ ಕಾರ್ಯಕ್ಕೆ ಇಟ್ಟಿಗೆಯನ್ನು ನೀಡಿದ್ದೆವು. ಅಯೋಧ್ಯೆ ಯಲ್ಲಿ 1992ರ ಡಿ. 8ರ ವರೆಗೂ ಇದ್ದೆವು. ಅನಂತರ ರೈಲು ಹಿಡಿದು ಬಂದೆವು. ರೈಲಿನ ಮೇಲೆ ಕಲ್ಲು ತೂರಾಟ ನಡೆಯು ತ್ತಿತ್ತು. ಅದಕ್ಕೆ ಪ್ರತಿರೋಧದ ಸಂಘರ್ಷವೂ ನಡೆಯುತ್ತಿತ್ತು. ರೈಲುಗಳನ್ನು ಬದಲಾಯಿಸಿಕೊಂಡು ಹೇಗೋ ಮಾಡಿ ಡಿ.11ರಂದು ವಾಪಸ್‌ ಚಿಕ್ಕಮಗಳೂರಿಗೆ ಬಂದೆವು. ನನ್ನ ಜತೆ ಕಾರ್ಕಳದ ಈಗಿನ ಶಾಸಕ ಸುನಿಲ್‌ಕುಮಾರ್‌ ಸೇರಿದಂತೆ ಅನೇಕರು ಇದ್ದರು.
ಹಾಗೆ ನೋಡಿದರೆ, ಅಯೋಧ್ಯೆ ರಥಯಾತ್ರೆಗೆ ಮೊದಲು ನಾಲ್ಕು ರಥಯಾತ್ರೆಗಳು ಆರಂಭಗೊಂಡವು. ಶಿಲಾಪೂಜೆ, ಇಟ್ಟಿಗೆ ಪೂಜೆ, ರಾಮಜ್ಯೋತಿ ಯಾತ್ರೆ ಅದಾದ ಮೇಲೆ ಶ್ರೀರಾಮ ಪಾದುಕೆ ಯಾತ್ರೆ

ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ನಡೆಯಿತು. ಬಿಜೆಪಿಯಿಂದ ಗುಜರಾತ್‌ನ ಸೋಮನಾಥದಿಂದ ಅಯೋಧ್ಯೆವರೆಗೆ ಆಡ್ವಾಣಿ ನೇತೃತ್ವದಲ್ಲಿ ರಥಯಾತ್ರೆ ಕೈಗೊಳ್ಳಲಾಗಿತ್ತು. ಆಡ್ವಾಣಿ ಅವರನ್ನು ಬಿಹಾರದ ಸಮಷ್ಟಿಪುರದಲ್ಲಿ ಬಂಧಿ ಸಲಾಯಿತು. ಅಂದು ನಾನು ಹೋರಾಟದ ಕಣಕ್ಕೆ ಧುಮುಕಿ ಜೈಲು ಸೇರಿದೆ. ಎರಡು ದಿನ ಜೈಲುವಾಸ ಅನುಭವಿಸಿದ್ದೆ. ಹಾಗಾಗಿ ಆಗ ಕರಸೇವೆಯಲ್ಲಿ ಭಾಗವಹಿಸಲು ಆಗಲಿಲ್ಲ. ಆದರೆ ಅನಂತರ 1992ರಲ್ಲಿ ಕರಸೇವೆಯಲ್ಲಿ ಭಾಗವಹಿಸಿದನೆಂಬ ಹೆಮ್ಮೆ ನನ್ನದು. ಶ್ರೀ ರಾಮನಿಗೆ ಆಂಜನೇಯ ಲಂಕಾದಹನಕ್ಕೆ ನೆರವು ನೀಡಿ ಸೇವೆ ಮಾಡಿದ್ದಾನೆ. ಅಂಥದ್ದೇ ಕಿಂಚಿತ್ತು ರಾಮನ ಸೇವೆ ಮಾಡಿದ್ದೇನೆಂಬ ಆತ್ಮಾಭಿಮಾನ, ನೆಮ್ಮದಿಯ ಭಾವ ನನಗಿದೆ.

ನಿರೂಪಣೆ: ಸಂದೀಪ ಜಿ.ಎನ್‌.ಶೇಡ್ಗಾರ್‌

ಟಾಪ್ ನ್ಯೂಸ್

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.