Mangaluru; ಕಣ್ವತೀರ್ಥದಲ್ಲಿ ಪೇಜಾವರ ಶ್ರೀಗಳಿಂದ ಸಮುದ್ರ ಪೂಜೆ
Team Udayavani, Jan 11, 2024, 12:51 AM IST
ಮಂಗಳೂರು: ಉಡುಪಿಯಿಂದ ಜ. 15ರಂದು ಅಯೋಧ್ಯೆಗೆ ತೆರಳಲಿರುವ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಬುಧವಾರ ಪುರಾಣ ಪ್ರಸಿದ್ಧ ಕಣ್ವತೀರ್ಥ ಮಠಕ್ಕೆ ಭೇಟಿ ನೀಡಿದರು.
ತೀರ್ಥಕೆರೆಯಲ್ಲಿ ತೀರ್ಥಸ್ನಾನಮಾಡಿದ ಶ್ರೀಗಳು ಶ್ರೀರಾಮಾಂಜ ನೇಯ ದೇವರಿಗೆ ಆರತಿ ಬೆಳಗಿದರು. ಗ್ರಾಮದ ಬೋವಿ ಸಮಾಜ, ಗಟ್ಟಿ ಸಮಾಜ, ಮಲಯಾಳಿ ಬಿಲ್ಲವ, ಬಂಟ, ಮೊಗವೀರ, ಬ್ರಾಹ್ಮಣ ಸಮಾಜ ಸಹಿತ ವಿವಿಧ ಸಮಾಜದ ಪ್ರಮುಖರು, ಗುರಿಕಾರರು, ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಸಂಸ್ಥೆಯ ಸದಸ್ಯರು, ಮಂಜೇಶ್ವರ ಪಂಚಾಯತ್‌ನ ಅಧ್ಯಕ್ಷರು ಒಳಗೊಂಡಂತೆ ಸಾರ್ವಜನಿಕರ ಜೊತೆಗೂಡಿ ಪೇಜಾವರ ಶ್ರೀಗಳು ಮೆರವಣಿ ಗೆಯ ಮೂಲಕ ಕಡಲ ಕಿನಾರೆಗೆ ತೆರಳಿ ಸಮುದ್ರ ರಾಜನಿಗೆ ಹಾಲೆರೆದು, ಹೂ ಹಣ್ಣು ಸಹಿತ ಅಭಿಷೇಕದೊಂದಿಗೆ ಆರತಿ ಬೆಳಗಿದರು.
ಶ್ರೀ ರಾಮಾಂಜನೇಯ ದೇವಸ್ಥಾದ ನವೀಕೃತ ಹೊರ ಸುತ್ತು ಪೌಳಿಯನ್ನು ಶ್ರೀಗಳು ಲೊಕಾರ್ಪಣೆಗೊಳಿಸಿದರು. ಸುತ್ತುಪೌಳಿ ನವೀಕರಣದ ಉಸ್ತುವಾರಿ ವಹಿಸಿದ ಅರಿಬೈಲು ಗೋಪಾಲಕೃಷ್ಣ ಶೆಟ್ಟಿ ಮತ್ತು ಸುರೇಖಾ ಶೆಟ್ಟಿ ದಂಪತಿಯನ್ನು ಗೌರವಿಸಿದರು.
ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ, ಸುಬ್ರಹ್ಮಣ್ಯ ಭಟ್, ವಾಸುದೇವ ಭಟ್ ಪೆರಂಪಳ್ಳಿ, ಮಂಜೇಶ್ವರ ಶ್ರೀಮದನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಟಿ. ಗಣಪತಿ ಪೈ, ಮಧುಸೂದನ ಆಚಾರ್ಯ ಕಣ್ವತೀರ್ಥ, ಎಸ್. ಪ್ರದೀಪ ಕುಮಾರ ಕಲ್ಕೂರ, ಸುಧಾಕರ ರಾವ್ ಪೇಜಾವರ, ಜನಾರ್ದನ ಹಂದೆ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.