Karnataka: 5 ಸಾವಿರ ಕೈ ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ ಗ್ಯಾರಂಟಿ
ಗ್ಯಾರಂಟಿ ಜಾರಿಗೆ ವಿವಿಧ ಸಮಿತಿ, ರಾಜ್ಯಾಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ
Team Udayavani, Jan 11, 2024, 1:56 AM IST
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರವು ಪಕ್ಷಕ್ಕಾಗಿ ದುಡಿದ 5,000 ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ ನೀಡಲು ನಿರ್ಧರಿಸಿದೆ. ಐದು ಗ್ಯಾರಂಟಿಗಳನ್ನು ನೀಡಿ ಅಧಿಕಾರ ಕ್ಕೇರಿದ ಕಾಂಗ್ರೆಸ್, ಈ ಯೋಜನೆಗಳ ಜಾರಿಗಾಗಿ ಉಸ್ತುವಾರಿಗಳನ್ನು ನೇಮಿಸಲಿದೆ. ವಾರದೊಳಗೆ ರಾಜ್ಯ, ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಪ್ರತ್ಯೇಕ ಸಮಿತಿಗಳನ್ನು ರಚಿಸಲು ಸರಕಾರ ನಿರ್ಧರಿಸಿದೆ.
ಹಾಲಿ ಸಂಸದರು, ಶಾಸಕರನ್ನು ಬಿಟ್ಟು ಮಾಜಿ ಸಂಸದರು, ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕೊಡಲು ತೀರ್ಮಾನಿಸಿದೆ.
ಅಲ್ಲದೆ, ಆಶ್ರಯ ಸಮಿತಿ, ಆರಾಧನ ಸಮಿತಿ, ಇಂಧನ ಇಲಾಖೆಯ ಉಪವಿಭಾಗ ಸಮಿತಿ, ಕೆರೆ ಉಸ್ತುವಾರಿ ಸಮಿತಿ, ಗ್ರಾಮ ಅರಣ್ಯ ಹಕ್ಕು ಸಮಿತಿ ಸಹಿತ ಸರಕಾರ ನಾಮನಿರ್ದೇಶನ ಮಾಡಬಹುದಾದ ಎಲ್ಲ ಸಮಿತಿಗಳಲ್ಲಿ ಸುಮಾರು 5 ಸಾವಿರ ಮಂದಿಗೆ ಅವಕಾಶ ನೀಡಲೂ ಮುಂದಾಗಿದೆ. ಕಾರ್ಯಕರ್ತರಿಗೆ ಇದು ಬಂಪರ್ ಕೊಡುಗೆಯಾಗಿದೆ.
“ಪಕ್ಷದ ಎಲ್ಲ ಕಾರ್ಯಕರ್ತರಿಗೂ ಅವಕಾಶ ಸಿಗಬೇಕು ಎನ್ನುವ ದೃಷ್ಟಿಯಿಂದ ಈಗ ನೇಮಕ ಮಾಡುವವರ ಅಧಿಕಾರಾವಧಿಯನ್ನು ಎರಡು ವರ್ಷ ಎಂದು ನಿಗದಿಪಡಿಸಿದ್ದೇವೆ. ಬಳಿಕದ ಎರಡು ವರ್ಷವನ್ನು ಇತರರಿಗೆ ಬಿಟ್ಟು ಕೊಡಬೇಕು ಎಂದು ಸ್ಪಷ್ಟವಾಗಿ ಸೂಚಿಸಿದ್ದೇವೆ’ ಎಂದೂ ಹೇಳಿದರು.
ಮೂಲಗಳ ಪ್ರಕಾರ, ಮೊದಲ ಹಂತದಲ್ಲಿ 40-42 ಜನರಿಗೆ ಅವಕಾಶ ಸಿಗಲಿದೆ. ಮೂರು, ನಾಲ್ಕು ಬಾರಿ ಶಾಸಕರಾದವರಿಗೆ ಮೊದಲ ಆದ್ಯತೆ, ಎರಡು ಬಾರಿ ಶಾಸಕರಾದವರಿಗೆ ಎರಡನೇ ಆದ್ಯತೆ ನೀಡಲಾಗಿದೆ. 10-12 ಜನ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.
2 ವರ್ಷ ನಿಯಮ ಸಚಿವರಿಗೂ ಅನ್ವಯ?
ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಅನುಸರಿಸಲಾಗುತ್ತಿರುವ ಎರಡು ವರ್ಷಗಳ ಅಧಿಕಾರಾವಧಿ ಷರತ್ತು ಸಚಿವರಿಗೆ ಅನ್ವಯ ಆಗುವುದಿಲ್ಲವೇ ಎಂಬ ಪ್ರಶ್ನೆ ಸಭೆಯಲ್ಲಿದ್ದ ಶಾಸಕರೊಬ್ಬರಿಂದ ರಣದೀಪ್‌ಸಿಂಗ್ ಸುರ್ಜೇವಾಲ ಹಾಗೂ ಸಿಎಂ ಸಿದ್ದರಾಮಯ್ಯಗೆ ತೂರಿಬಂದಾಗ ಕೆಲವು ನಾಯಕರು ತಬ್ಬಿಬ್ಟಾದರು. ಇದಕ್ಕೆ ಸುರ್ಜೇವಾಲ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸಿಎಂ ಸಹಿತ ಇತರ ಪ್ರಮುಖ ನಾಯಕರು ನಕ್ಕು ಸುಮ್ಮನಾದರು.
ಐದು ವರ್ಷಗಳಲ್ಲಿ ಈಡೇರಿಸುವ ಭರವಸೆಗಳನ್ನು ಪ್ರಣಾಳಿಕೆ ಮೂಲಕ ಜನರಿಗೆ ಕೊಟ್ಟಿದ್ದೆವು. ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರು ಅವರ ಪ್ರಣಾಳಿಕೆಯ ಶೇ.10ಕ್ಕಿಂತ ಹೆಚ್ಚು ಭರವಸೆ ಈಡೇರಿಸಿರುವುದನ್ನು ಪ್ರಮಾಣೀಕರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಮ್ಮ 5 ಗ್ಯಾರಂಟಿಗಳ ಇನ್ನಷ್ಟು ಪರಿಣಾಮಕಾರಿ ಜಾರಿಗೆ ಸಮಿತಿ ರಚಿಸಿದ್ದೇವೆಯೇ ಹೊರತು, ಇವು ಗಂಜಿ ಕೇಂದ್ರಗಳಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಗ್ಯಾರಂಟಿ ಜಾರಿಗೆ ಹೊಸ ಸ್ವರೂಪ ಕೊಡುತ್ತಿದ್ದೇವೆ. ಯಾರ ಮಧ್ಯಸ್ತಿಕೆಯೂ ಇಲ್ಲದೆ, ಲೋಪದೋಷಗಳಿಲ್ಲದೆ ಪಾರದರ್ಶಕವಾಗಿ ನೇರ ಫಲಾನುಭವಿಗಳಿಗೆ ತಲುಪಿಸುತ್ತಿದ್ದೇವೆ. ಶೇ.80ರಷ್ಟು ಕುಟುಂಬಕ್ಕೆ ಒಂದಿಲ್ಲೊಂದು ಯೋಜನೆ ತಲುಪುತ್ತಿದೆ. ನಮ್ಮ ಆಚಾರ-ವಿಚಾರಗಳಿಗೆ ಪ್ರಚಾರ ನೀಡಲು ಸಮಿತಿಗಳನ್ನು ರಚಿಸಿದ್ದೇವೆ. -ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.