Klaantha; ದಟ್ಟ ಕಾನನದೊಳಗೆ ಸಸ್ಪೆನ್ಸ್-ಥ್ರಿಲ್ಲರ್ ‘ಕ್ಲಾಂತ’: ಜ.19ರಂದು ತೆರೆಗೆ
Team Udayavani, Jan 11, 2024, 1:06 PM IST
ಬಹುತೇಕ ತುಳುನಾಡಿನ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಕ್ಲಾಂತ’ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದೇ ಜ. 19ರಂದು “ಕ್ಲಾಂತ’ ಸಿನಿಮಾ ತೆರೆ ಕಾಣುತ್ತಿದ್ದು, ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಸಸ್ಪೆನ್ಸ್ ಕಂ ಥ್ರಿಲ್ಲರ್ ಕಥಾಹಂದರದ “ಕ್ಲಾಂತ’ ಸಿನಿಮಾದ ಈ ಟ್ರೇಲರ್ ಅನ್ನು ನಟ ಅಜೇಯ್ ರಾವ್ ಬಿಡುಗಡೆಗೊಳಿಸಿದರು.
ಇದೇ ವೇಳೆ ಮಾತನಾಡಿದ ನಟ ಅಜೇಯ್ ರಾವ್, “ಸಿನಿ ಮಾದ ಟ್ರೇಲರ್ ತುಂಬ ಆ್ಯಕ್ಷನ್ ನಿಂದ ಕೂಡಿದೆ. ಹೀರೋ, ಹೀರೋ ಯಿನ್ ಎಲ್ಲರೂ ಚೆನ್ನಾಗಿ ಕಾಣಿಸುತ್ತಿದ್ದಾರೆ. ಒಂದೊಳ್ಳೆ ಪ್ರಯತ್ನ. ಒಳ್ಳೆ ಉದ್ದೇಶ ಇಟ್ಟುಕೊಂಡು ಮಾಡಿರುವ “ಕ್ಲಾಂತ’ ಸಿನಿಮಾಕ್ಕೆ ಗೆಲುವು ಸಿಗಲಿ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ವೈಭವ ಪ್ರಶಾಂತ್, “ಲಾಕ್‌ಡೌನ್ ಟೈಮ್‌ನಲ್ಲಿಯೇ “ಕ್ಲಾಂತ’ ಸಿನಿಮಾದ ಸ್ಕ್ರೀಪ್ಟ್ ಮಾಡಿಕೊಂಡಿದ್ದೆವು. ಸುಮಾರು ಒಂದೂವರೆ ವರ್ಷದಿಂದ ಈ ಜರ್ನಿ ನಡೆಯುತ್ತಿದೆ. ಸುಮಾರು 40 ದಿನ ಗುಂಡ್ಯಾ, ಕುಕ್ಕೆ ಸುಬ್ರಮಣ್ಯ, ಕಳಸ, ಕುದುರೆಮುಖದ ಕಾಡುಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ್ದೇವೆ. “ಕ್ಲಾಂತ’ ಎಂಬುದು ಸಂಸ್ಕೃತ ಪದ. ಇದಕ್ಕೆ ದಣಿವು, ಆಯಾಸ ಎಂಬ ಅರ್ಥವಿದೆ. ಮೊದಲು ಈ ಸಿನಿಮಾಕ್ಕೆ “ವೀಕೆಂಡ್ ವಿತ್ ಲವರ್’ ಎಂದು ಟೈಟಲ್ ಇಟ್ಟಿದ್ದೆವು. ಆ ಬಳಿಕ “ಕ್ಲಾಂತ’ ಎಂದು ಬದಲಾಯಿಸಿದೆವು. ಸಿನಿಮಾದಲ್ಲಿ ಒಟ್ಟು ಮೂರು ಹಾಡುಗಳಿವೆ. ಕೊರಗಜ್ಜ ದೇವರ ಪವಾಡವನ್ನು ಈ ಚಿತ್ರದಲ್ಲಿ ವಿಶೇಷವಾಗಿ ತೋರಿಸಲಾಗಿದೆ. ಈಗಾಗಲೇ ಇದರ ಹಾಡು ಕೂಡ ತುಳುನಾಡಿನಲ್ಲಿ ಬಿಡುಗಡೆ ಆಗಿ ಬಹಳ ಜನಪ್ರಿಯಗೊಂಡಿದೆ’ ಎಂದು ವಿವರಣೆ ನೀಡಿದರು.
ನಾಯಕ ನಟ ವಿಘ್ನೇಶ್ ಮಾತನಾಡಿ, “ಈಗಾಗಲೇ ತುಳುವಿನಲ್ಲಿ ಕೆಲ ಸಿನಿಮಾಗಳಲ್ಲಿ ಅಭಿನಯಿಸಿರುವ ನನಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. “ಕ್ಲಾಂತ’ ಸಿನಿಮಾ ಒಳ್ಳೆ ಸಕ್ಸಸ್ ಸಿಗುತ್ತದೆ ಎಂಬ ಹೋಪ್ ಇದೆ. ತಂದೆ ತಾಯಿ, ಅಪ್ಪ-ಅಮ್ಮ ಪ್ರತಿಯೊಬ್ಬರು ಕೂತು ನೋಡುವಂಥ ಸಿನಿಮಾ ಮಾಡಿದ್ದೇವೆ’ ಎಂಬ ನಿರೀಕ್ಷೆಯ ವ್ಯಕ್ತಪಡಿಸಿದರು.
“ಅನುಗ್ರಹ ಪವರ್ ಮೀಡಿಯಾ’ ಬ್ಯಾನರಿನಲ್ಲಿ ಉದಯ್ ಅಮ್ಮಣ್ಣಾಯ ಕೆ. ನಿರ್ಮಿಸಿರುವ “ಕ್ಲಾಂತ’ ಸಿನಿಮಾಕ್ಕೆ ವೈಭವ ಪ್ರಶಾಂತ್ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ನಾಯಕ ವಿಘ್ನೇಶ್ ಅವರಿಗೆ ಸಂಗೀತಾ ಭಟ್ ನಾಯಕಿಯಾಗಿದ್ದಾರೆ. ಉಳಿದಂತೆ ಶೋಭರಾಜ್, ವೀಣಾ ಸುಂದರ್, ದೀಪಿಕಾ, ಪ್ರವೀಣ್ ಜೈನ್, ಸ್ವಪ್ನಾ ಶೆಟ್ಟಿಗಾರ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.