Solar power: ಸೌರಶಕ್ತಿ ಬಳಕೆಯತ್ತ ಜಾಲಿಗೆ ಗ್ರಾಪಂ ಹಳ್ಳಿಗಳ ಹೆಜ್ಜೆ


Team Udayavani, Jan 11, 2024, 2:48 PM IST

8

ದೇವನಹಳ್ಳಿ: ಗ್ರಾಮ ಪಂಚಾಯಿತಿಗಳು ಸಂಪನ್ಮೂಲ ಗಳನ್ನು ಸರಿಯಾದ ರೀತಿ ಸದ್ಬಳಸಿಕೊಂಡಲ್ಲಿ ಮಾದರಿ ಪಂಚಾಯಿತಿಯಾಗು ವುದರಲ್ಲಿ ಸಂದೇಹವಿಲ್ಲ ಎಂಬುವುದಕ್ಕೆ ಜಾಲಿಗೆ ಗ್ರಾಮ ಪಂಚಾಯಿತಿ ಉದಾಹರಣೆಯಾಗಿದೆ.

ಜಾಲಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡು ಹಳ್ಳಿಗಳಲ್ಲಿ ಸೋಲಾರ್‌ ಅಳವಡಿಸಲು ಗ್ರಾಮ ಪಂಚಾಯಿತಿಗಳು ಮುಂದಾಗಿದೆ. ಇನ್ನು ಮುಂದೆ ಸೋಲಾರ್‌ ದೀಪಗಳು ಗ್ರಾಮಗಳಲ್ಲಿ ಬೆಳಕನ್ನು ಚೆಲ್ಲಲ್ಲಿದೆ.

ಸೋಲಾರ್‌ ದೀಪ ಗ್ರಾಮಗಳಾಗಿ ಬದಲಾಯಿಸಲು ಗ್ರಾಪಂ ಮೊದಲ ಹೆಜ್ಜೆ: ವಿದ್ಯುತ್‌ ಶುಲ್ಕ ಮುಕ್ತವಾಗಿಸಲು ಎರಡು ಹಳ್ಳಿಗಳಲ್ಲಿ ಪ್ರಾಯೋಗಿ ಕವಾಗಿ ಸೋಲಾರ್‌ ಪ್ಯಾನಲ್‌ ಅಳವಡಿಕೆ ಮಾಡಿ ಸೋಲಾರ್‌ ದೀಪದಿಂದ ರಾತ್ರಿ ವೇಳೆ ಬೆಳಕು ಬರುವಂತೆ ಆಗಿದೆ. ಸೋಲಾರ್‌ ದೀಪ ಗ್ರಾಮಗಳಾಗಿ ಬದಲಾಯಿಸಲು ಗ್ರಾಪಂ ಮೊದಲ ಹೆಜ್ಜೆ ಇರಿಸಿದ್ದು. ಗ್ರಾಮಗಳ ರಸ್ತೆಗಳಲ್ಲಿ ಅಳವಡಿಸಿದ್ದ ವಿದ್ಯುತ್‌ ದೀಪಗಳಿಂದ ವಿದ್ಯುತ್‌ ಶುಲ್ಕ ಸಾಕಷ್ಟು ಕಟ್ಟುವುದು ಗ್ರಾಪಂಗೆ ಹೊರೆಯಾಗುತ್ತಿತ್ತು. ಇದನ್ನು ಮನಗಂಡ ಗ್ರಾಪಂ ಆಡಳಿತ ಎರಡು ಗ್ರಾಮಗಳಲ್ಲಿ ಸೋಲಾರ್‌ ದೀಪಗಳನ್ನು ಅಳವಡಿಸುತ್ತಿದೆ.

ವಿದ್ಯುತ್‌ ಬಿಲ್‌ ಕಡಿಮೆ ಮಾಡಲು ಅವಕಾಶ: ಸೋಲಾರ್‌ ದೀಪಗಳ ಅಳವಡಿಕೆಯಿಂದ ವಿದ್ಯುತ್‌ ಬಿಲ್ಲಿಗೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆ. ಪ್ರತಿ ಗ್ರಾಮಗಳಲ್ಲೂ ಇಂತಹ ಯೋಜನೆಗಳನ್ನು ರೂಪಿ ಸಿದರೆ ವಿದ್ಯುತ್‌ ಬಿಲ್‌ ಕಡಿಮೆ ಮಾಡಲು ಅವಕಾಶ ವಾಗುತ್ತದೆ. ಸೋಲಾರ್‌ ನಿಂದ ಸಾಕಷ್ಟು ಅನುಕೂಲಗಳನ್ನು ಪಡೆದುಕೊಳ್ಳಬಹುದು. ಪ್ರತಿ ಕಡೆ ಸೋಲಾರ್‌ ಬಳಕೆ ಮಾಡಿದರೆ ಸಾಕಷ್ಟು ಅನುಕೂಲ ಮತ್ತು ಸಹಕಾರಿಯಾಗುತ್ತದೆ.

ವರ್ಗ1, 15ನೇ ಹಣಕಾಸು ಬಳಕೆ: ಸರಕಾರದ ವರ್ಗ 1, 15ನೇ ಹಣಕಾಸು ಯೋಜನೆಯಡಿ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗ್ರಹಳ್ಳಿ ಮತ್ತು ಬಸವನಪುರ ಗ್ರಾಮಗಳಲ್ಲಿ ಸುಮಾರು 50 ದೀಪಗಳನ್ನು ಅಳವಡಿಸಲು ತೀರ್ಮಾನಿಸಿದ್ದು, ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ಸ್ವಯಂ ಚಾಲಿತ ಸೆನ್ಸಾರ್‌ ಟೈಮಿಂಗ್‌ ಮೂಲಕ ದೀಪ ಬೆಳಗುವುದು ಮತ್ತು ದೀಪ ಹಾರಿಸುವ ಪ್ರಕ್ರಿಯೆಗೆ ಈಗಾಗಲೇ ಸರ್ವೆ ಕೆಲಸ ಮುಗಿಸಿದ್ದು, ಖಾಸಗಿ ಕಂಪನಿಯ ಸಹಕಾರದಲ್ಲಿ ಪ್ರಾಯೋಗಿಕವಾಗಿ ಹೊಸ ವರ್ಷಾರಂಭಕ್ಕೆ ಕಾಮಗಾರಿ ಚಾಲನೆ ದೊರೆಯಲಿದೆ. ವರ್ಗ1, 15ನೇ ಹಣಕಾಸಿನ ಸುಮಾರು 20ಲಕ್ಷ ರೂ. ಅನು ದಾನದಲ್ಲಿ ಕ್ರಿಯಾಯೋಜನೆಗೆ ಅನುಮೋದನೆಯೂ ಸಹ ದೊರೆತಿದೆ.

ಗ್ರಾಮ ಪಂಚಾಯಿತಿಯ ಎರಡು ಗ್ರಾಮಗಳಲ್ಲಿ ಯಶಸ್ವಿಯಾದರೆ, ಮುಂದಿನ ಹಂತದಲ್ಲಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ವಿದ್ಯುತ್‌ ದೀಪ ಮುಕ್ತ: ಸೋಲಾರ್‌ ದೀಪಗಳ ಗ್ರಾಮಗಳನ್ನಾಗಿಸಲು ಗ್ರಾಮ ಪಂಚಾಯಿತಿ ಮುಂದಾಗಿದ್ದು, ಗ್ರಾಮಗಳ ರಸ್ತೆಯುದ್ದಕ್ಕೂ ಇದೀಗ ಸೋಲಾರ್‌ ಬೆಳಕು ಚೆಲ್ಲಲಿದೆ. ವಿದ್ಯುತ್‌ ಶುಲ್ಕ ಸಾಕಷ್ಟು ಕಟ್ಟುವುದು ಗ್ರಾಪಂಗೆ ಹೊರೆಯಾಗುತ್ತಿರು ವುದನ್ನು ತಪ್ಪಿಸಲು ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು ಡಿಸಿಯಿಂದ ಎಸಿ ಕನ್ವರ್ಟರ್‌ ಗಳನ್ನಾಗಿ ಗ್ರಾಮದುದ್ದಕ್ಕೂ ದೀಪಗಳನ್ನು ಅಳವಡಿಸಲು ಅಗತ್ಯ ಪರಿಕರಗಳನ್ನು ಇಟ್ಟುಕೊಳ್ಳಲಾಗಿದೆ.

ಪ್ರಾಯೋಗಿಕ ಜಾರಿ: ಬೀದಿ ದೀಪ ನಿರ್ವಹಣೆಯಲ್ಲಿ ಗ್ರಾಪಂಗೆ ವಿದ್ಯುತ್‌ ಶುಲ್ಕ ಬಾಕಿ ಹೆಚ್ಚು ಇರುವುದರಿಂದ ಪರ್ಯಾಯವಾಗಿ ವಿದ್ಯುತ್‌ ಸಂಪರ್ಕರಹಿತ ಸೌರಶಕ್ತಿ ಬಳಸಿಕೊಂಡು ಸೌರಬೆಳಕು ಚೆಲ್ಲುವ ಜಾಲಿಗೆ ಗ್ರಾಪಂಯ ಎರಡು ಗ್ರಾಮ ಗಳಲ್ಲಿ ಪ್ರಾಯೋಗಿಕವಾಗಿ ಖಾಸಗಿ ಕಂಪನಿಯ ನಿರ್ವಹಣೆಯಲ್ಲಿ ಸೋಲಾರ್‌ ಪ್ಯಾನಲ್‌ ಅಳವಡಿಸಿ, ಸೋಲಾರ್‌ ದೀಪ ಅಳವಡಿಸಲು ಮುಂದಾಗಿದೆ.

ನಿರ್ವಹಣೆ ಹೇಗೆ?: ಸೌರಶಕ್ತಿ ದೀಪಗಳ ನಿರ್ವಹಣೆಯನ್ನು ಖಾಸಗಿ ಕಂಪನಿಯೇ 5ವರ್ಷಗಳು ಜವಾಬ್ದಾರಿಯನ್ನು ತೆಗೆದುಕೊಂಡು ಅವಧಿ ಮುಗಿದ ನಂತರ ಗ್ರಾಪಂ ನಿರ್ವಹಣೆಗೆ ಬಿಟ್ಟುಕೊಡಲಾಗುತ್ತದೆ. 200ಎಎಚ್‌ನ 15ಬ್ಯಾಟರಿಗಳು, ಸೋಲಾರ್‌ ಪ್ಯಾನಲ್‌ಗೆ ಅವಶ್ಯಕತೆ ಇರುವಷ್ಟು ಕಿಲೋವ್ಯಾಟ್‌ ನಷ್ಟು ಬ್ಯಾಟರಿಗಳನ್ನು ಅಳವಡಿಸಲಾಗುತ್ತದೆ. 30ವ್ಯಾಟ್‌ನ ಎಲ್‌ಇಡಿ 50 ಬಲ್ಪ್ ಹೊಂದಿರುತ್ತದೆ. ಬ್ಯಾಟರಿ ಆಯುಷ್‌ 7 ವರ್ಷ ಮತ್ತು ಪ್ಯಾನಲ್‌ ಆಯುಷ್‌ 25ವರ್ಷ ಇದ್ದು, ವಿದ್ಯುತ್‌ ಕಂಬದ ಮೇಲಿನ ಭಾಗದಲ್ಲಿ ದೀಪಗಳನ್ನು ಅಳವಡಿಸಿ, ವೈರಿಂಗ್‌ ಮೂಲಕ ಪ್ಯಾನಲ್‌ಗೆ ಸಂಪರ್ಕ ನೀಡ ಲಾಗುತ್ತದೆ. ಇದರಿಂದ ಬ್ಯಾಟರಿ, ಇನ್ನಿತರೆ ಕಳ್ಳತನಕ್ಕೆ ಅವಕಾಶವೇ ಇಲ್ಲದಂತಾಗುತ್ತದೆ ಎನ್ನಲಾಗಿದೆ.

ಸೋಲಾರ್‌ ಪ್ಯಾನಲ್‌ ಅಳವಡಿಸಿದ್ದರಿಂದ ಡಿಸಿಯಿಂದ ಎಸಿ ಕನ್ವರ್ಟ್ ಆಗಿ ದೀಪದ ಬೆಳಕು ಇತರೆ ಸೋಲಾರ್‌ ಬೆಳಕಿಗಿಂತಲೂ ಹೆಚ್ಚು ಪ್ರಕರತೆ ಇರುತ್ತದೆ. ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ವಿದ್ಯುತ್‌ ಬಿಲ್‌ ಬಾಕಿ ಇದೆ. ರಾತ್ರಿ ವೇಳೆ ಗ್ರಾಮಗಳಲ್ಲಿ ವಿದ್ಯುತ್‌ ಕಡಿತದಿಂದ ಅನಾನುಕೂಲ ವಾಗುತ್ತದೆ. ಸೋಲಾರ್‌ ದೀಪ ಅಳವಡಿ ಸಿದಾಗ ರಾತ್ರಿವಿಡೀ ಬೆಳಕು ನೀಡುತ್ತದೆ. ●ಪ್ರಕಾಶ್‌, ಪಿಡಿಒ, ಜಾಲಿಗೆ ಗ್ರಾಪಂ‌

ವಾಟರ್‌ಮ್ಯಾನ್‌ ಕೆಲಸದ ಒತ್ತಡ ಮತ್ತು ಗ್ರಾಮದಲ್ಲಿ ಬ್ಯಾಟರಿ ಕಳ್ಳತನ ಕಡಿವಾಣ ಹಾಕು ವಂತಾಗುತ್ತದೆ. ಜತೆಗೆ ವಿದ್ಯುತ್‌ ಬಿಲ್‌ಗೆ ಗ್ರಾಪಂಗೆ ತಪ್ಪುತ್ತದೆ. ಇಂಜಿನಿಯರ್‌ ನಿಂದ ಅನುಮೋದನೆ ಮಾಡಿಕೊಂಡು ಜನವರಿ ಯಿಂದ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಪ್ರಾಯೋಗಿಕವಾಗಿ ಬಸವ ನ ಪುರ ಮತ್ತು ಸಿಂಗ್ರಹಳ್ಳಿ ಗ್ರಾಮ ಗಳಲ್ಲಿ ಸೋಲಾರ್‌ ದೀಪಗಳನ್ನು ಅಳವಡಿಸಲು ಸಿದ್ಧತೆ ಮಾಡಿಕೊಂಡಿದ್ದು, 7ಲಕ್ಷ ರೂ. ಗಳಲ್ಲಿ ಸಿಂಗ್ರಹಳ್ಳಿ ಗ್ರಾಮದಲ್ಲಿ ಮತ್ತು 13ಲಕ್ಷ ರೂ.ಗಳ ಕಾಮಗಾರಿಯನ್ನು ಜಾಲಿಗೆ ಗ್ರಾಪಂನಲ್ಲಿ ಮೊದಲ ಬಾರಿಗೆ ಆಯ್ಕೆ ಮಾಡಲಾಗಿದೆ. ●ಎಸ್‌.ಎಂ.ಆನಂದ್‌ಕುಮಾರ್‌, ಅಧ್ಯಕ್ಷರು, ಜಾಲಿಗೆ ಗ್ರಾಪಂ

-ಎಸ್‌.ಮಹೇಶ್‌

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

24-bng

Bengaluru: ಜಪ್ತಿ ಮಾಡಿದ ವಸ್ತುಗಳ ಮೇಲೆ ಕ್ಯೂಆರ್‌ ಕೋಡ್‌: ಪೊಲೀಸ್‌ ಆಯುಕ್ತ

WhatsApp Image 2025-01-22 at 01.46.02

ನಿವೃತ್ತ ಬಿಸಿಯೂಟ ಸಿಬಂದಿಗೆ ಇಡುಗಂಟು: ಶಿಕ್ಷಣ ಇಲಾಖೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.