ಕಟಪಾಡಿ: ಮಟ್ಟುಗುಳ್ಳ ಬೆಳೆಗೆ ಮುಸುಕಿದ ಮೋಡದ ಕರಿಛಾಯೆ

Team Udayavani, Jan 11, 2024, 5:46 PM IST

ಕಟಪಾಡಿ: ಮಟ್ಟುಗುಳ್ಳ ಬೆಳೆಗೆ ಮುಸುಕಿದ ಮೋಡದ ಕರಿಛಾಯೆ

ಕಟಪಾಡಿ: ಅಕಾಲಿಕವಾಗಿ ಸುರಿದ ಮಳೆ, ಮೋಡದ ಕವಿದ ವಾತಾವರಣ ಸಹಿತ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಹಾನಿಗೊಂಡು ಪ್ರಸಕ್ತ ಸಾಲಿನ ಪ್ರಥಮ ಮಟ್ಟುಗುಳ್ಳ ಬೆಳೆಗೆ ಬರೆಯನ್ನು ಎಳೆದಿದ್ದು, ಮಟ್ಟುಗುಳ್ಳ ಬೆಳೆಗಾರರ ಮೇಲೆ ಮುಸುಕಿ ಮೋಡದ ಕರಿಛಾಯೆಯಿಂದ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.

ಕಳೆದ 2-3 ದಿನಗಳಿಂದ ಸುರಿದ ಅಕಾಲಿಕ ಮಳೆ, ಮೋಡ ಕವಿದ ವಾತಾವರಣ, ಉರಿ ಬಿಸಿಲ ಪರಿಣಾಮ ಜನಜನಿತವಾಗಿರುವ ಮಟ್ಟುಗುಳ್ಳದ ಬೆಳೆ ಹಾನಿಗೊಂಡು ಬೆಳೆಗಾರರು ನಷ್ಟವನ್ನು ಅನುಭವಿಸುವಂತಾಗಿದೆ. ಮಟ್ಟುಗುಳ್ಳದ ಗದ್ದೆಯಲ್ಲಿ ನೀರು ನಿಂತಿದೆ. ಹಾಗಾಗಿ ಮಟ್ಟುಗುಳ್ಳ ಗಿಡದ ಬೇರು ಕೊಳೆಯಲಾರಂಭಿಸಿದೆ. ಬಿಟ್ಟಿರುವ ಹೂವು ಉದುರಲು ಶುರುವಿಟ್ಟಿದೆ. ಬೆಳೆಯುತ್ತಿರುವ ಮಿಡಿ ಮಟ್ಟುಗುಳ್ಳ ನೆಲ ಕಚ್ಚುತ್ತಿದೆ. ಹಾಗಾಗಿ ಬೆಳೆಗಾರರು ಸಂಕಷ್ಟವನ್ನು ಎದುರಿಸುವಂತಾಗಿದೆ.

ಒಂದೆಡೆ ಮಳೆ, ಮೋಡ ಕವಿದ ವಾತಾವರಣ, ಹಗಲಿನ ಉರಿ ಬಿಸಿಲಿನ ದುಷ್ಪರಿಣಾಮದಿಂದ ಮಟ್ಟುಗುಳ್ಳದ ಗಿಡವು ಹಾನಿಗೀಡಾಗುತ್ತಿದ್ದು, ಫಸಲಿನ ಇಳುವರಿ ಕುಂಠಿತಗೊಂಡಿರುತ್ತದೆ. ಇದೀಗ ಮಟ್ಟುಗುಳ್ಳದ ಬೇಡಿಕೆಯ ಕಾಲವಾಗಿದ್ದು, ಸೂಕ್ತ ಪ್ರಮಾಣದ ಫಸಲು ಮಟ್ಟುಗುಳ್ಳ ಬೆಳೆಗಾರರ ಕೈಗೆ ಲಭಿಸದೆ ಬೆಳೆಯ ನಷ್ಟದೊಂದಿಗೆ ಆರ್ಥಿಕ ನಷ್ಟವನ್ನು ಅನುಭವಿಸುವಂತಾಗಿದೆ ಎಂದು ಬೆಳೆಗಾರರು ಪರಿತಪಿಸುತ್ತಿದ್ದಾರೆ.

ಮೂರು ತಿಂಗಳು ಬಲಿತ ಮಟ್ಟುಗುಳ್ಳದ ಸಸಿಯು ಫಸಲಿನ ಸಹಿತ ನೆಲಕಚ್ಚುತ್ತಿದ್ದು, ಬೆಳೆಗಾರರ ಬೆಳೆಯ ಮೇಲೆ ಬರೆ ಎಳೆದಂತಾಗಿದೆ. ಬಂಡವಾಳ ಹಾಕಿ ಬೆಳೆಸಿದ ಬೆಳೆಯು ಉತ್ತಮ ಫಸಲು ಕೈ ಸೇರುವ ಸಮಯದಲ್ಲಿಯೇ ಅಕಾಲಿಕ ಮಳೆ-ಮೋಡದ ಕರಿಛಾಯೆಯು ಮಟ್ಟುಗುಳ್ಳ ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ. ಮರು ನಾಟಿ ಮಾಡಿ ಮಟ್ಟುಗುಳ್ಳ ಬೆಳೆಯ ಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ತಮ್ಮ ಮನದ ದುಗುಡವನ್ನು ವ್ಯಕ್ತ ಪಡಿಸಿದ್ದಾರೆ.

ಒಂದೆಡೆ ಇದುವರೆಗೆ ಬಳಸಿದ ಗೊಬ್ಬರ, ಸಿದ್ಧ ಪಡಿಸಿದ ಗದ್ದೆ, ಮಲ್ಚಿಂಗ್‌ ಶೀಟ್‌, ಸಹಿತ ಬೆಳೆಯು ನೆಲ ಕಚ್ಚಿದ್ದು, ಅಪಾರ ನಷ್ಟವನ್ನು ಅನುಭವಿಸುವಂತಾಗಿದೆ ಎಂದು ತಿಳಿಸುವ ಮಟ್ಟುಗುಳ್ಳ ಬೆಳೆಗಾರರು ತೋಟಗಾರಿಕೆ ಇಲಾಖೆಯಿಂದ ಸೂಕ್ತ ಪರಿಹಾರವನ್ನು ಎದುರು ನೋಡುತ್ತಿದ್ದಾರೆ.

ಜಿಐ ಮಾನ್ಯತೆಯೊಂದಿಗೆ ಪೇಟೆಂಟ್‌ ಪಡೆದು ಲಾಂಛನ (ಸ್ಟಿಕ್ಕರ್‌)ದೊಂದಿಗೆ ಮುಂಬಯಿ, ಬೆಂಗಳೂರು ಸೇರಿದಂತೆ ದೇಶ ವಿದೇಶಗಲ್ಲಿ ಮಟ್ಟುಗುಳ್ಳ ಪ್ರಿಯರಿದ್ದು, ಅಲ್ಲಿಗೂ ಕಾಲಕಾಲಕ್ಕೆ ಸರಬರಾಜು ಮಾಡಲಾಗುತ್ತಿರುವ ಮಟ್ಟುಗುಳ್ಳ ಬೆಳೆಯು ಕೈ ಕೊಟ್ಟಿದ್ದು, ಬಂಡವಾಳ ಹಾಕಿದ ಬೆಳೆಗಾರರು ಆರ್ಥಿಕ ನಷ್ಟದಿಂದ ಕಂಗಾಲಾಗಿದ್ದಾರೆ.

ಫ‌ಸಲಿಗೆ ಹಾನಿ,ಬೆಲೆ ಏರಿಕೆ
ಶುಭ ಕಾರ್ಯಗಳ ನಿಮಿತ್ತ ಬಹು ಬೇಡಿಕೆಯುಳ್ಳ  ಜನಪ್ರಿಯ ಮಟ್ಟುಗುಳ್ಳವು ಅಕಾಲಿಕಮಳೆಯಿಂದ ಬಾಧಿತವಾಗಿದೆ. ಮಟ್ಟುಗುಳ್ಳದ ಫಸಲು ಉದುರಲು ಆರಂಭಿಸಿದ್ದು,ಬೇಡಿಕೆಯಷ್ಟು ಮಟ್ಟುಗುಳ್ಳವನ್ನು ಮಾರುಕಟ್ಟೆಗೆಪೂರೈಸಲು ಸಾಧ್ಯವಾಗುತ್ತಿಲ್ಲ.

ಇಳುವರಿ ಕುಂಠಿತ, ಬೇಡಿಕೆ ಹೆಚ್ಚಳದಿಂದ ಸ್ವಾಭಾವಿಕವಾಗಿಬೆಲೆಯಲ್ಲೂಏರಿಕೆಯಾಗಿದ್ದು ಮಾರುಕಟ್ಟೆಯಲ್ಲಿ ಕೆಜಿಗೆ ಸುಮಾರು120-130 ರೂ.ಗೆ ಮಾರಾಟವಾಗುತ್ತಿದೆ. ಮಟ್ಟು ಪ್ರದೇಶದಿಂದ ಕೈಪುಂಜಾಲು ವರೆಗಿನ ಸುಮಾರು 80ಎಕರೆಗೂ ಅಧಿಕ ಪ್ರದೇಶದ ಪ್ರಸಕ್ತ ಸಾಲಿನ ಪ್ರಥಮ ಇಳುವರಿ (ಕೊಯ್ಲು) ಮೂರು ವಾರಗಳ ಫಸಲು ಪ್ರಕೃತಿ ವೈಪರೀತ್ಯಕ್ಕೆ ಬಲಿಯಾಗಿದೆ.
-ಲಕ್ಷ್ಮಣ್‌ ಮಟ್ಟು, ಮ್ಯಾನೇಜರ್‌, ಮಟ್ಟುಗುಳ್ಳ
ಬೆಳೆಗಾರರ ಸಂಘ,ಮಟ್ಟು

ಸೂಕ್ತಪರಿಹಾರ
ಈಬಗ್ಗೆ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಲಾಗುವುದು. ಪ್ರಕೃತಿ ವಿಕೋಪನಿಧಿಯಡಿ ಸೂಕ್ತಪರಿಹಾರವನ್ನು ಒದಗಿಸುವಲ್ಲಿ ಕ್ರಮ ವಹಿಸಲಾಗುವುದು.
– ಎಲ್‌. ಹೇಮಂತ್‌ ಕುಮಾರ್‌,ಹಿರಿಯ
ಸಹಾಯಕನಿರ್ದೇಶಕರು, ತೊಟಗಾರಿಕಾಇಲಾಖೆ

*ವಿಜಯ ಆಚಾರ್ಯ ಉಚ್ಚಿಲ

ಟಾಪ್ ನ್ಯೂಸ್

Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್‌ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್

Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್‌ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್

ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್

ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್

Tollywood: ಚಳಿಗಾಲದಲ್ಲಿ ಈ ದಿನ ನೆರವೇರಲಿದೆ ನಾಗಚೈತನ್ಯ – ಶೋಭಿತಾ ವಿವಾಹ

Tollywood: ಚಳಿಗಾಲದಲ್ಲಿ ಈ ದಿನ ನೆರವೇರಲಿದೆ ನಾಗಚೈತನ್ಯ – ಶೋಭಿತಾ ವಿವಾಹ

6

Home made food ನಿಜವಾಗಿಯೂ ಪೋಷಕಾಂಶದಿಂದ ತುಂಬಿದೆಯೇ…?

1-eqwew

Rajyotsava Award: ಅರುಣ್‌ ಯೋಗಿರಾಜ್‌ ಸೇರಿ 69 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ

ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ

firing

Amritsar; ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8(2)

Udupi: ನಗರದ ಎಲ್ಲೆಡೆ ಖರೀದಿ ಭರಾಟೆ; ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಒಂದೇ ದಿನ ಬಾಕಿ

7

Kota: ಸಂಚಾರಿ ಕಮ್ಮಾರಸಾಲೆ; ಇಡೀ ಕುಟುಂಬವೇ ಭಾಗಿ!

6

Karkala: ವಿಶೇಷ ಚೇತನ ಮಕ್ಕಳಿಂದ 24 ಸಾವಿರ ಹಣತೆ!

5

Udupi: ಸಿಗುತ್ತಿಲ್ಲ ಡಾಮರು ಮಿಶ್ರಣ!; ಹಾನಿಗೊಂಡ ರಸ್ತೆಗಳ ದುರಸ್ತಿಗೆ ಕೂಡಿಬರದ ಕಾಲ

4

Karkala: ಗರಿಗೆದರಿದ ದೀಪಾವಳಿ ಸಂಭ್ರಮ; ಪೇಟೆಗಳಲ್ಲಿ ಖರೀದಿ ಚಟುವಟಿಕೆ ಜೋರು

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್‌ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್

Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್‌ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್

10

Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು

ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್

ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ

ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.