ತ್ಯಾಜ್ಯ ಸಮಸ್ಯೆ : ಬದಿಯಡ್ಕ ಪಂಚಾಯತ್ ಕಚೇರಿಯಲ್ಲಿ ಹೊಕೈ, ಎರಡು ಕೇಸು ದಾಖಲು
Team Udayavani, Jan 12, 2024, 12:43 AM IST
ಬದಿಯಡ್ಕ: ಅಜೈವಿಕ ತ್ಯಾಜ್ಯವನ್ನು ತೆರವುಗೊಳಿಸಲಿರುವ ಯೂಸರ್ ಫೀ ನೀಡದ ಹಿನ್ನೆಲೆಯಲ್ಲಿ 10 ಸಾವಿರ ರೂ. ದಂಡ ಪಾವತಿಸಲು ನೋಟಿಸು ನೀಡಿರುವ ಹೆಸರಿನಲ್ಲಿ ಉಂಟಾದ ತರ್ಕ ಬದಿಯಡ್ಕದಲ್ಲಿ ಹೊಕೈಗೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿ ಪೊಲೀಸರು ಎರಡು ಕೇಸುಗಳನ್ನು ದಾಖಲಿಸಿದ್ದಾರೆ.
ಜ.10 ರಂದು ಬೆಳಗ್ಗೆ ಈ ಘಟನೆ ನಡೆದಿದೆ. ತ್ಯಾಜ್ಯವನ್ನು ತೆರವುಗೊಳಿಸದೆ ಯೂಸರ್ ಫಿ ಪಡೆಯುವುದರ ವಿರುದ್ಧ ವ್ಯಾಪಾರಿಗಳು ಈ ಹಿಂದೆ ಪ್ರಶ್ನಿಸಿದ್ದರು. ಈ ಮಧ್ಯೆ ನೀರ್ಚಾಲಿನ ವ್ಯಾಪಾರಿಗಳಾದ ಆಲಂಪಾಡಿಯ ಅಬ್ದುಲ್ ರಹ್ಮಾನ್(65), ಪುತ್ರ ಉಸ್ಮಾನ್ (24) ಬುಧವಾರ ಬೆಳಗ್ಗೆ ಪಂಚಾಯತ್ ಕಚೇರಿಗೆ ತಲುಪಿ ದ್ದರು. ತ್ಯಾಜ್ಯ ತೆರವುಗೊಳಿಸದಿದ್ದರೂ ಅಕ್ಟೋಬರ್‌ವರೆಗೆ ಯೂಸರ್ ಫಿ ನೀಡಲಾಗಿದೆಯೆಂದು ವ್ಯಾಪಾರಿಗಳು ಪಂ. ಸೆಕ್ರೆಟರಿ ಯೊಂದಿಗೆ ತಿಳಿಸಿದ್ದರು. ಈ ವಿಷಯದಲ್ಲಿ ಉಂಟಾದ ತರ್ಕದ ಮಧ್ಯೆ ತಮಗೆ ಹಲ್ಲೆ ಮಾಡಿದ್ದಾಗಿ ವ್ಯಾಪಾರಿಗಳು ಆರೋಪಿಸಿದ್ದಾರೆ. ಅವರಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆಗೆ ಸಂಬಂಧಿಸಿ ಬದಿಯಡ್ಕ ಪೊಲೀಸರು ಎರಡು ಕೇಸುಗಳನ್ನು ದಾಖಲಿಸಿದ್ದಾರೆ. ಪಂ. ಸೆಕ್ರೆಟರಿ ಸಿ.ರಾಜೇಂದ್ರನ್ ನೀಡಿದ ದೂರಿನಂತೆ ವ್ಯಾಪಾರಿಗಳಾದ ಅಬ್ದುಲ್ ರಹ್ಮಾನ್, ಉಸ್ಮಾನ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಅಬ್ದುಲ್ ರಹ್ಮಾನ್ ದೂರಿನಂತೆ ಪಂ. ಸೆಕ್ರೆಟರಿ ಹಾಗೂ ಇನ್ನಿಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ಇದೇ ವೇಳೆ ಸೆಕ್ರೆಟರಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿರುವುದನ್ನು ಪ್ರತಿಭಟಿಸಿ ನೌಕರರು ಪ್ರತಿಭಟನಾ ಧರಣಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.