Kannada Cinema; ಸ್ಯಾಂಡಲ್‌ವುಡ್‌ ಗಿಲ್ಲ ಸಂಕ್ರಾಂತಿ ಸಡಗರ: ಹಬ್ಬಕ್ಕೆ ಪರಭಾಷಾ ಅಬ್ಬರ


Team Udayavani, Jan 12, 2024, 10:59 AM IST

sandalwood

“ಸಂಕ್ರಾಂತಿಗೆ ನಮ್‌ ಕನ್ನಡದಿಂದ ಯಾವ ಸಿನಿಮಾನೂ ಬರಲ್ವಾ…’ – ಸಿನಿಮಾ ಪ್ರೇಮಿಗಳು ಹೀಗೊಂದು ಪ್ರಶ್ನೆಯನ್ನು ಕೇಳಲಾರಂಭಿಸಿದ್ದಾರೆ. ಅದಕ್ಕೆ ಉತ್ತರ “ಇಲ್ಲ’. ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡಿ, ಆ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದು ಸಿನಿಮಾ ಮಂದಿಯ “ವಾಡಿಕೆ’. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾತ್ರ ಕನ್ನಡದಿಂದ ಸಂಕ್ರಾಂತಿ ಸಮದಯದಲ್ಲಿ ಮಾತ್ರ ಕನ್ನಡದಿಂದ ಯಾವ ಸ್ಟಾರ್‌ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಇದು ಈ ವರ್ಷವೂ ಮುಂದುವರೆದಿದೆ. ಇಂದು (ಜ.12) ಕನ್ನಡದಿಂದ ಯಾವುದೇ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಇದರೊಂದಿಗೆ ಈ ವಾರ ಕನ್ನಡದ ಪಾಲಿಗೆ ಹೊಸ ಸಿನಿಮಾಗಳಿಲ್ಲದ ವಾರ. ಸದ್ಯ “ಕಾಟೇರ’ ಚಿತ್ರವೇ ತನ್ನ ಯಶಸ್ವಿ ಪ್ರದರ್ಶನವನ್ನು ಮುಂದುವರೆಸಿದೆ.

ಎಲ್ಲಾ ಓಕೆ, ಸಂಕ್ರಾಂತಿಗೆ ಯಾಕೆ ಸಿನಿಮಾ ಬಿಡುಗಡೆ ಮಾಡಲು ನಮ್ಮ ಸ್ಯಾಂಡಲ್‌ವುಡ್‌ ಹಿಂದೇಟು ಹಾಕುತ್ತಿದೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಅದಕ್ಕೆ ಉತ್ತರ ಪರಭಾಷಾ ಅಬ್ಬರ. ಪ್ರತಿ ವರ್ಷವೂ ಸಂಕ್ರಾಂತಿ ಹಬ್ಬವನ್ನು ಚೆನ್ನಾಗಿ ಬಳಸಿಕೊಳ್ಳುವ ಚಿತ್ರರಂಗಗಳೆಂದರೆ ಅದು ತಮಿಳು, ತೆಲುಗು. ತಮಿಳಿನವರಿಗೆ ಸಂಕ್ರಾಂತಿ (ಪೊಂಗಲ್‌) ದೊಡ್ಡ ಹಬ್ಬ. ಹಾಗಾಗಿ, ಆ ಸಮಯದಲ್ಲಿ ಸ್ಟಾರ್‌ ಸಿನಿಮಾಗಳನ್ನು ರಿಲೀಸ್‌ ಮಾಡುವುದು ವಾಡಿಕೆ. ಈ ವರ್ಷವೂ ತಮಿಳು, ತೆಲುಗಿನಿಂದ ಹಲವು ಚಿತ್ರಗಳು ರಿಲೀಸ್‌ ಆಗುತ್ತಿವೆ. ಮುಖ್ಯವಾಗಿ ತಮಿಳಿನ ಧನುಶ್‌ ನಟನೆಯ “ಕ್ಯಾಪ್ಟನ್‌ ಮಿಲ್ಲರ್‌’ ಇಂದು ತೆರೆಕಂಡರೆ, ತೆಲುಗಿನಲ್ಲಿ ಮಹೇಶ್‌ ಬಾಬು ನಟನೆಯ “ಗುಂಟೂರು ಖಾರಂ’ ಚಿತ್ರ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ “ಹನುಮಾನ್‌’, “ಅಯಲನ್‌’, “ಸೈಂಧವ’, “ನಾ ಸಾಮಿ ರಂಗ’, “ಮೇರಿ ಕ್ರಿಸ್ಮಸ್‌’ ಚಿತ್ರಗಳು ಇಂದು ತೆರೆಕಾಣುತ್ತಿವೆ.

ರಿಸ್ಕ್ನಿಂದ ದೂರ ದೂರ..

ಮೊದಲೇ ಹೇಳಿದಂತೆ ಪರಭಾಷಾ ಸಿನಿಮಾಗಳ ಅಬ್ಬರದ ಮುಂದೆ ಬಂದು ರಿಸ್ಕ್ ಹಾಕಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಕನ್ನಡದ ಸ್ಟಾರ್‌ ಸಿನಿಮಾಗಳಿಂದ ಹಿಡಿದು ಹೊಸಬರ ಸಿನಿಮಾಗಳು ಬಂದಿವೆ. ಅದೇ ಕಾರಣದಿಂದ ಈ ವಾರ ಕನ್ನಡ ಸಿನಿಮಾಗಳಿಲ್ಲ. ಸದ್ಯ ಏಳಕ್ಕೂ ಹೆಚ್ಚು ಪರಭಾಷಾ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇದರ ಜೊತೆಗೆ ರಜನಿಕಾಂತ್‌ ನಟನೆಯ “ಲಾಲ್‌ ಸಲಾಂ’ ಹಾಗೂ ತೆಲುಗಿನ ರವಿತೇಜ ಅವರ “ಈಗಲ್‌’ ಚಿತ್ರಗಳು ಕೂಡಾ ಆರಂಭದಲ್ಲಿ ಜ.12ಕ್ಕೆ ತೆರೆಕಾಣಲಿವೆ ಎನ್ನಲಾಗಿತ್ತು. ಈಗ ಆ ಚಿತ್ರಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದು, ಫೆ.9ಕ್ಕೆ ತೆರೆಕಾಣಲಿವೆ. ಇವೆಲ್ಲಾ ಕಾರಣದಿಂದ ಯಾವ ಸಿನಿಮಾ ತಂಡಗಳು ರಿಸ್ಕ್ ಹಾಕಿಕೊಂಡು ಚಿತ್ರಮಂದಿರಕ್ಕೆ ಬರುವ ಧೈರ್ಯ ಮಾಡಲಿಲ್ಲ.

ಟ್ರೇಲರ್‌, ಟೀಸರ್‌, ಹಾಡು ಗಿಫ್ಟ್

ಸಂಕ್ರಾಂತಿಗೆ ಸ್ಯಾಂಡಲ್‌ವುಡ್‌ನಿಂದ ಸಿನಿಮಾಗಳು ಬಿಡುಗಡೆಯಾಗದೇ ಇರಬಹುದು. ಆದರೆ, ಸಿನಿಮಾ ಪ್ರೇಮಿಗಳಿಗೆ ಟ್ರೇಲರ್‌, ಟೀಸರ್‌ ಹಾಗೂ ಸಿನಿಮಾಗಳ ವಿಡಿಯೋ ಸಾಂಗ್‌ಗಳನ್ನು ಬಿಡುಗಡೆ ಮಾಡಲು ಹಲವು ಚಿತ್ರತಂಡಗಳು ಮುಂದಾಗಿವೆ. ಇಂದು “ಉಪಾಧ್ಯಕ್ಷ’, “ಕೇಸ್‌ ಆಫ್ ಕೊಂಡಾಣ’, “ಬ್ಯಾಡ್‌’ ಚಿತ್ರಗಳ ಟ್ರೇಲರ್‌, “ಜಸ್ಟ್ ಪಾಸ್‌’ ಸಿನಿಮಾದ ವಿಡಿಯೋ ಸಾಂಗ್‌, “ಗಜರಾಮ’ ಚಿತ್ರದ ಟೀಸರ್‌ ಸೇರಿದಂತೆ ಇನ್ನೂ ಕೆಲವು ಚಿತ್ರಗಳ ಟೈಟಲ್‌, ಫ‌ಸ್ಟ್‌ಲುಕ್‌ ಪೋಸ್ಟರ್‌ಗಳು ಬಿಡುಗಡೆಯಾಗಲಿವೆ. ಸಿನಿಮಾ ಪ್ರೇಮಿಗಳು ಇದರಲ್ಲೇ ಖುಷಿ ಕಂಡು, ಮುಂದಿನ ಹಾದಿಯನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆ ಸಿನಿಮಂದಿಯದ್ದು.

ಒಂದ್‌ ಕಡೆ ಎಕ್ಸಾಂ ಇನ್ನೊಂದ್‌ ಕಡೆ ಸ್ಟಾರ್

ಫೆಬ್ರವರಿ ತಿಂಗಳಲ್ಲಿ ಸಿನಿ ಟ್ರಾಫಿಕ್‌ ಜೋರಾಗಿರಲು ಮುಖ್ಯವಾಗಿ ಎರಡು ಕಾರಣ, ಒಂದು ಶಾಲಾ- ಕಾಲೇಜುಗಳ ಪರೀಕ್ಷೆಯಾದರೆ, ಪರೀಕ್ಷೆ ಬಳಿಕ ಬರಲಿರುವ ಸ್ಟಾರ್‌ ಸಿನಿಮಾಗಳು. ಇದೇ ಕಾರಣದಿಂದ ಹೊಸಬರ ಹಾಗೂ ಪರಿಚಿತ ಮುಖಗಳ ಸಿನಿಮಾಗಳು ಮಾರ್ಚ್‌ನಲ್ಲಿ ಪರೀಕ್ಷೆ ಆರಂಭಾಗುವ ಮುನ್ನ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿವೆ. ಒಮ್ಮೆ ಎಕ್ಸಾಂ ಮುಗಿದ ರಜೆ ಸಿಕ್ಕ ಬಳಿಕ ಸ್ಟಾರ್‌ ಸಿನಿಮಾಗಳು ಒಂದರ ಹಿಂದೊಂದರಂತೆ ಬರಲಿದ್ದು, ಮತ್ತೆ ಪ್ರೇಕ್ಷಕರ ಹಾಗೂ ಚಿತ್ರಮಂದಿರಗಳ ಕೊರತೆ ಎದುರಾಗುವ ಭಯ ಸಹಜವಾಗಿಯೇ ಇದೆ. ಈ ಕಾರಣದಿಂದ ಫೆಬ್ರವರಿ ಸ್ಯಾಂಡಲ್‌ವುಡ್‌ ತಿಂಗಳಾಗಲಿದೆ.

ಜ.26ರಿಂದ ನಮ್ದೇ ಹವಾ

ಸ್ಯಾಂಡಲ್‌ವುಡ್‌ ಮಟ್ಟಿಗೆ ಜನವರಿ ತಿಂಗಳ ಆರಂಭ ಸ್ವಲ್ಪ ಮಂಕಾಗಿರಬಹುದು. ದೊಡ್ಡ ಮಟ್ಟದ ಸಿನಿಮಾಗಳು ಬಿಡುಗಡೆಯಾಗಿಲ್ಲ ಎಂಬ ಬೇಸರ ಇದ್ದೇ ಇದೆ. ಆದರೆ, ಜನವರಿ 26ರಿಂದ ಆರಂಭವಾಗಿ ಮಾರ್ಚ್‌ ಮೊದಲ ವಾರದವರೆಗೆ ಸ್ಯಾಂಡಲ್‌ ವುಡ್‌ನಿಂದ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಲಿವೆ. ಈಗಾಗಲೇ ಜ.26ಕ್ಕೆ “ಉಪಾಧ್ಯಕ್ಷ’, “ಕೇಸ್‌ ಆಫ್ ಕೊಂಡಾಣ’, “ಬ್ಯಾಚುಲರ್‌ ಪಾರ್ಟಿ’ ಸೇರಿದಂತೆ ಇನ್ನೊಂದೆರಡು ಸಿನಿಮಾಗಳು ಬಿಡುಗಡೆಯಾಗಲಿವೆ. ಮುಖ್ಯವಾಗಿ ಫೆಬ್ರವರಿ ಪೂರ್ತಿ ಸ್ಯಾಂಡಲ್‌ವುಡ್‌ ತಿಂಗಳಾಗಲಿದೆ. ಅದಕ್ಕೆ ಕಾರಣ ಬಿಡುಗಡೆಗೆ ಅಣಿಯಾಗಿರುವ ಸಾಲು ಸಾಲು ಸಿನಿಮಾಗಳು. ಇತ್ತೀಚಿನ ವರ್ಷಗಳಲ್ಲಿ ಸ್ಯಾಂಡಲ್‌ವುಡ್‌ ಅಖಾಡಕ್ಕೆ ಇಳಿಯೋದೇ ಫೆಬ್ರವರಿ ತಿಂಗಳಿನಿಂದ ಎಂಬಂತಾಗಿದೆ. ಕಳೆದ ವರ್ಷ ಕೂಡಾ ಫೆಬ್ರವರಿಯಲ್ಲಿ 29 ಸಿನಿಮಾ ತೆರೆಕಂಡಿತ್ತು. ಈ ವರ್ಷವೂ ಫೆಬ್ರವರಿಯಲ್ಲಿ ವಾರಕ್ಕೆ ಐದಾರು ಸಿನಿಮಾಗಳಂತೆ ತೆರೆಕಾಣುವ ಸೂಚನೆ ದಟ್ಟವಾಗಿ ಕಾಣುತ್ತಿದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

tenant kannada movie

Sandalwood: ತೆರೆಗೆ ಬಂತು ʼಟೆನೆಂಟ್ʼ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.