UV Fusion: ಮಾನವೀಯತೆ ಮರೆಯದಿರೋಣ
Team Udayavani, Jan 12, 2024, 2:34 PM IST
ಪ್ರಸ್ತುತ ಆಧುನಿಕ ಯುವ ಜನಾಂಗವು ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ತನ್ನನ್ನು ದೂರಾಲೋಚನೆಗಳಿಗೆ ತೊಡಗಿಸಿ ಕೊಳ್ಳುವುದರಿಂದ ನೈತಿಕ ಮೌಲ್ಯಗಳು ಕಾಣೆಯಾಗಿದೆ.ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಕಾಲದಲ್ಲಿ ಪ್ರೀತಿ, ನಂಬಿಕೆ, ಕರುಣೆ ಮತ್ತು ವಿಶ್ವಾಸಕ್ಕೆ ಬೆಲೆ ಇಲ್ಲದಂತಾಗಿದೆ. ಮನುಷ್ಯ ಮಾನವೀಯತೆಯನ್ನು ಮರೆತು ಸ್ವಾರ್ಥ ಜೀವನವನ್ನು ನಡೆಸುತ್ತಿದ್ದಾನೆ. ನನ್ನವರು ತನ್ನವರು ಎನ್ನುವ ಭಾವನೆ ಮಾನವನ ಮನದಲ್ಲಿ ನಶಿಸಿಹೋಗುತ್ತಿರುವುದು ವಿಪರ್ಯಾಸ ಆಗಿದೆ. ಇಂಥ ಸ್ವಾರ್ಥ ಜಗತ್ತಿನಲ್ಲಿ ಮಾನವೀಯತೆಯ ಬೀಜವನ್ನು ಬಿತ್ತುವುದು ಕಷ್ಟಸಾಧ್ಯವಾಗಿದೆ.
ಹಿಂದಿನ ಕಾಲದಲ್ಲಿ ಹಿರಿಯರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಲು ನೀತಿಕತೆಗಳನ್ನು ಹೇಳುತ್ತಿದ್ದರು.ಆದರೆ ಇಂದು ಮಕ್ಕಳಲ್ಲಿ ನೈತಿಕ ಮೌಲ್ಯ ಕಾಣೆಯಾಗಿದೆ. ಆಧುನಿಕ ಕಾಲದಲ್ಲಿ ಗುರು – ಶಿಷ್ಯರ ಸಂಬಂಧ ಶಾಲೆ ಮತ್ತು ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ದು, ಗುರುವಿಗೆ ನೀಡುವ ಗೌರವ ಕಡಿಮೆಯಾಗುತ್ತಿದೆಯೇನೋ ಎಂದೆನಿಸುತ್ತದೆ. ನಾವು ಎಷ್ಟೇ ಎತ್ತರಕ್ಕೆ ಹೋದರೂ ಗುರುಗಳನ್ನು , ಹಿರಿಯರನ್ನು ಎಂದೂ ಕಡೆಗಣಿಸಬಾರದು ಮತ್ತು ಮರೆಯಬಾರದು.
ಇಂದಿನ ಕಾಲದಲ್ಲಿ ಹಣಕ್ಕಿರುವ ಬೆಲೆ ಮಾನವೀಯ ಮೌಲ್ಯಗಳಿಗೆ ಇಲ್ಲ ಎಂಬ ಮಾತು ಸತ್ಯಕ್ಕೆ ಹತ್ತಿರವಾಗಿದೆ. ವ್ಯಕ್ತಿ ಎಷ್ಟೇ ದೊಡ್ಡವನಾದರೂ, ಸಿರಿವಂತನದರೂ ಅವನಲ್ಲಿ ಮಾನವೀಯ ಗುಣಗಳು ಇಲ್ಲದಿದ್ದರೆ ಏನು ಪ್ರಯೋಜನ..? ಎಲ್ಲ ಇದ್ದು ಏನು ಇಲ್ಲದಂತೆ .
ಮಾನವೀಯತೆಯು ಸಂಬಂಧಗಳಿಗೆ ಅಂಟಿದ ಕಳಂಕವಾಗಿದೆ. ಮಾನವನ ನಡುವಿನ ಪ್ರೀತಿಯು ಕೊಡು- ಕೊಳ್ಳುವಿಕೆಯ ಸೂತ್ರವನ್ನು ಅವಲಂಬಿಸಿದೆ. ಮನುಷ್ಯನ ಆಧುನಿಕ ಬದುಕಿನ ಶೈಲಿ, ತಂತ್ರಜ್ಞಾನ , ವಿಜ್ಞಾನ , ಆಡಂಬರದ ಬದುಕು , ಮನುಷ್ಯನ ಅತೀ ಬುದ್ದಿವಂತಿಕೆಯು ಆತನನ್ನು ಮೌಲ್ಯಗಳಿಂದ ಸ್ವಾರ್ಥಪರ ಜೀವನದತ್ತ ಕೊಂಡೊಯ್ಯುತ್ತಿದೆ. ತಾನೊಬ್ಬನೇ ಬೆಳೆಯಬೇಕೆಂಬ ಭಾವನೆ ಪ್ರಸ್ತುತ ಜಗತ್ತಿನ ನಿಯಮವಾಗಿದೆ.
ಇಂದಿನ ಯುವಜನತೆ ಅಂದರೆ ನಾವುಗಳು ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಒಂದು ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಮೌಲ್ಯ ನಮ್ಮಲ್ಲಿ ಕಾಣೆಯಾಗಿದೆ. ಜಾತಿ, ಸ್ವಾರ್ಥ ಎಂಬ ಪೀಡೆ ಶಾಪವಾಗಿ ಪರಿಣಮಿಸಿದೆ. ಪ್ರೀತಿ, ವಾತ್ಸಲ್ಯ, ಕರುಣೆ , ನಂಬಿಕೆ, ಸಹಬಾಳ್ವೆ ಇವುಗಳು ನಮ್ಮಲ್ಲಿ ಅಗತ್ಯವಾಗಿರಬೇಕಾದ ಮೌಲ್ಯಗಳು. ಈ ಮೌಲ್ಯಗಳು ಇಂದು ಕಲುಷಿತಗೊಳ್ಳುತ್ತಿದೆ.
ಬದುಕಿನ ಪ್ರತಿಯೊಂದು ಸಂದರ್ಭದಲ್ಲೂ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಉದಾಹರಣೆಗೆ ರಸ್ತೆಯಲ್ಲಿ ಅಪಘಾತವಾದಾಗ ಫೋಟೋ ತೆಗಿತಾರೆ ವಿನಃ ಅವರನ್ನು ಆಸ್ಪತ್ರೆಗೆ ಸೇರಿಸುವ ಯಾವುದೇ ಕಾರ್ಯವನ್ನು ಮಾಡಲು ಮುಂದಾಗುವುದಿಲ್ಲ . ಕಾರಣ ಎಲ್ಲಿ ಗಾಯಗೊಂಡ ವ್ಯಕ್ತಿ ನಮಗೆ ಹೊರೆಯಾಗುತ್ತಾನೋ ಎಂಬ ಸ್ವಾರ್ಥ ಪರ ಚಿಂತನೆ ನಮ್ಮದ್ದು. ಕಷ್ಟದಲ್ಲಿದ್ದಾಗ ಸಹಕರಿಸಿ ಬದಲಾಗಿ ಸ್ವಾರ್ಥಿಯಾಗಿ ಯೋಚಿಸದಿರಿ.
-ಆಯಿಶತುಲ್ ಬುಶ್ರ
ಎಂ.ಪಿ.ಎಂ. ಕಾಲೇಜು. ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.