ಧನುಷ್ ʼCaptain Millerʼ ಗೆ ಫುಲ್ ಮಾರ್ಕ್ಸ್: ಕಾಲಿವುಡ್‌ನಲ್ಲಿ ಮತ್ತೆ ಮಿಂಚಿದ ಶಿವಣ್ಣ
Team Udayavani, Jan 12, 2024, 3:12 PM IST
ಚೆನ್ನೈ: ಧನುಷ್ ಅಭಿನಯದ ಬಹು ನಿರೀಕ್ಷಿತ ʼಕ್ಯಾಪ್ಟನ್ ಮಿಲ್ಲರ್ʼ ಅದ್ಧೂರಿಯಾಗಿ ತೆರೆಕಂಡಿದೆ. ನಿರೀಕ್ಷೆಯಂತೆ ಪಾಸಿಟಿವ್ ಆರಂಭವನ್ನು ಸಿನಿಮಾ ಪಡೆದುಕೊಂಡಿದ್ದಾರೆ. ಮುಂಜಾನೆಯಿಂದಲೇ ಸಾವಿರಾರು ಮಂದಿ ಥಿಯೇಟರ್ ಮುಂದೆ ಟಿಕೆಟ್ ಗಾಗಿ ಕಾದು ಕೂತಿದ್ದು, ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಟ್ರೇಲರ್ ನಿಂದ ಪ್ರೇಕ್ಷಕರ ಕುತೂಹಲವನ್ನು ʼಕ್ಯಾಪ್ಟನ್ ಮಿಲ್ಲರ್ ʼಹೆಚ್ಚಿಸಿತು. ಅದರಂತೆ ಸಿನಿಮಾ ನೋಡಿದ ಬಳಿಕವೂ ಧನುಷ್ ʼಕ್ಯಾಪ್ಟನ್ ಮಿಲ್ಲರ್ʼ ಅವತಾರವನ್ನು ಕೊಂಡಾಡಿದ್ದಾರೆ. ಇಲ್ಲಿದೆ ಟ್ವಿಟರ್ ರಿವ್ಯೂ..
“ಸಿನಿಮಾದ ಕಥೆ ಹಾಗೂ ಅದರಲ್ಲಿನ ಮಾಸ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಡೈಲಾಗ್ಸ್, ಇಂಟರ್ ವಲ್ ನಲ್ಲಿನ ಚೇಸ್ ಸೀಕ್ವೆನ್ಸ್ ಹಾಲಿವುಡ್ ರೇಂಜ್ ನ್ನು ನೆನಪಿಸುತ್ತದೆ. ಕ್ಲೈಮ್ಯಾಕ್ಸ್ ಸ್ವಲ್ಪ ಟ್ವಿಸ್ಟ್ ನೊಂದಿಗೆ ಕೊನೆಗೊಳ್ಳುತ್ತದೆ” ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಧನುಷ್ ಅವರ ಅಭಿನಯ ಅತ್ಯದ್ಭುತವಾಗಿದೆ. ಅವರ ಎಂಟ್ರಿ ಸೀನ್ ಕೂಡ ಎಕ್ಸಲೆಂಟ್ ಆಗಿದೆ. ಚಿತ್ರಕಥೆ ಮತ್ತು ಇಂಟರ್ ವಲ್ ಸೀಕ್ವೆನ್ಸ್ ಈ ಸಿನಿಮಾ ಹೈಲೈಟ್” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
“ನಿಜವಾಗಿಯೂ ನಾನು ಇಂಡಿಯನ್ ಸಿನಿಮಾ ಅಥವಾ ಹಾಲಿವುಡ್ ನ್ನು ನೋಡುತ್ತಿದ್ದೇನೆಯೇ? ಇಡೀ ಪ್ರೇಕ್ಷಕರು ಮೌನವಾಗಿ ಮತ್ತು ಸೀಟ್ ನ ಅಂಚಿನಲ್ಲಿದ್ದಾರೆ. ಬ್ಲಾಕ್ ಬಸ್ಟರ್ ಬರುತ್ತಿದೆ” ಎಂದು ಮತ್ತೊಬ್ಬರು ಸಿನಿಮಾವನ್ನು ಮೆಚ್ಚಿ ಬರೆದುಕೊಂಡಿದ್ದಾರೆ.
ಮಿಲ್ಲರ್ ಎಂಟ್ರಿ ವೇಳೆ ಬರುವ ಜಿವಿ ಪ್ರಕಾಶ್ ಹಿನ್ನೆಲೆ ಸಂಗೀತ ಸಖತ್ ಆಗಿದೆ ಎಂದು ಒಬ್ಬರು ಸಿನಿಮಾದ ಮ್ಯೂಸಿಕ್ ನ್ನು ಮೆಚ್ಚಿಕೊಂಡಿದ್ದಾರೆ.
ಕ್ಲೈಮ್ಯಾಕ್ಸ್ ನಲ್ಲಿ ಶಿವರಾಜ್ ಕುಮಾರ್ ಶ್ರೇಷ್ಠವಾಗಿದೆ. ಜೈಲರ್ ಬಳಿಕ ಮತ್ತೆ ಮಿಂಚಿದ್ದಾರೆ. ಬಿಜಿಎಂ ಸೂಪರ್ ಆಗಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಮೊದಲ ಹಾಫ್ ನಲ್ಲಿ ಶಿವಣ್ಣ 5 ನಿಮಿಷ ಬಂದು ಹೋಗುತ್ತಾರೆ. ಸ್ಕ್ರೀನ್ ಪ್ಲೇ ಅದ್ಭುತವಾಗಿದೆ. ಇಂಟರ್‌ವಲ್‌ನಲ್ಲಿ ಬರೋ ಫೈಟ್ ಮಾಸ್ ಆಗಿದೆ. ಸಿನಿಮ್ಯಾಟೋಗ್ರಫಿ ಕೂಡ ಅದ್ಭುತ” ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಸ್ಕ್ರೀನ್ ಮೇಲೆ ಧನುಷ್ ಒನ್ ಮ್ಯಾನ್ ಆರ್ಮಿಯಂತೆ ಅಬ್ಬರಿಸಿದ್ದಾರೆ ಎಂದು ಸಿನಿಮಾ ನೋಡಿದವರು ಒಬ್ಬರು ಬರೆದುಕೊಂಡಿದ್ದಾರೆ.
1930 ರ ಸ್ವಾತಂತ್ರ್ಯ ಕಾಲದ ಕಥೆಯನ್ನು ಅರುಣ್ ಮಾಥೇಶ್ವರನ್ ಹೇಳಿದ್ದು, ಈ ಸಿನಿಮಾದಲ್ಲಿ ಧನುಷ್ ಜೊತೆ ಶಿವರಾಜ್‌ಕುಮಾರ್, ಪ್ರಿಯಾಂಕಾ ಅರುಲ್ ಮೋಹನ್, ಅದಿತಿ ಬಾಲನ್, ಸಂದೀಪ್ ಕಿಶನ್, ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಮುಂತಾದವರು ನಟಿಸಿದ್ದಾರೆ.
Seriously am I watching an Indian movie or Hollywood??
Entire audiences are silent and seat edge.
True Victory and blockbuster in our cards. #CaptainMiller @dhanushkraja pic.twitter.com/kIs088orA8
— R Vasanth (@rvasanth92) January 12, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್ ಲೀಕ್
ಕೋಮಾದಲ್ಲಿದ್ದ ನನ್ನ ಮಗನ ನೆನಪಿನ ಶಕ್ತಿ ಮರಳಲು ದಳಪತಿ ವಿಜಯ್ ಕಾರಣವೆಂದ ಖ್ಯಾತ ನಟ
Mollywood: 13 ವರ್ಷದ ಬಳಿಕ ರೀ- ರಿಲೀಸ್ ಆಗಲಿದೆ ಸೂಪರ್ ಹಿಟ್ ʼಉಸ್ತಾದ್ ಹೊಟೇಲ್ʼ
Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.