Rama Temple: ಅಯೋಧ್ಯೆಯಿಂದ ತೀರ್ಥಹಳ್ಳಿ ಜಾತ್ರೆಗೆ ಬಂದ ರಾಮಮಂದಿರ !
ರಾಮಮಂದಿರ ದೃಶ್ಯವನ್ನು ನೋಡಿ ಕಣ್ತುಂಬಿ ಕೊಂಡ ರಾಮೇಶ್ವರ ಭಕ್ತರು!
Team Udayavani, Jan 12, 2024, 3:23 PM IST
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ, ಐತಿಹಾಸಿಕ ಪೌರಾಣಿಕ ಹಿನ್ನಲೆಯಿರುವ ಶ್ರೀ ರಾಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಐದು ದಿನಗಳ ಪರ್ಯಂತ ಪಟ್ಟಣದಲ್ಲಿ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆ ನಡೆಯುತ್ತಿದ್ದು ಈ ಜಾತ್ರೆಯಲ್ಲಿ ತೀರ್ಥಸ್ನಾನ, ರಥೋತ್ಸವ, ತೆಪ್ಪೋತ್ಸವ ಅತ್ಯಂತ ವೈಭವ, ಮತ್ತು ಸಡಗರ ಸಂಭ್ರಮದಿಂದ ನಡೆಯುತ್ತದೆ.
ತುಂಗಾ ನದಿಯ ಸುತ್ತ ಮುತ್ತ ದೇವಸ್ಥಾನ, ರಥಬೀದಿ ಹಾಗೂ ಪಟ್ಟಣ ಸಂಪೂರ್ಣ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಜಾತ್ರೆಗೆ ಬಂದ ಸಾವಿರಾರು ಜನರು ಈ ಮನಮೋಹಕ ದೃಶ್ಯಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ಆದರೆ ನದಿಯ ಸಮೀಪ ಬರುತ್ತಿದ್ದಂತೆ ವಿದ್ಯುತ್ ದೀಪಗಳಿಂದ ಕಂಗೊಳಿಸಿ ಜನರನ್ನು ಆಕರ್ಷಸುತ್ತಿರುವ ಅಯೋಧ್ಯೆ ರಾಮಮಂದಿರದ ದೃಶ್ಯವನ್ನು ನೋಡಿ ತಮ್ಮ ಮೊಬೈಲ್ ಗಳಿಂದ ಸೆಲ್ಫಿ ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಕೆಲವು ಜನರು ಭಕ್ತಿ ಪೂರ್ಣವಾಗಿ ತಮ್ಮ ಪಾದರಕ್ಷೆ ಕಳಚಿಟ್ಟು ಅಯೋದ್ಯೆ ರಾಮಮಂದಿರದ ವಿದ್ಯುತ್ ದೀಪಾಲಂಕಾರದ ದೃಶ್ಯಕ್ಕೆ ಕೈ ಮುಗಿದು ನಮಗೆ ಈ ದೃಶ್ಯ ಹತ್ತಿರದಿಂದ ನೋಡಲು ತೀರ್ಥಹಳ್ಳಿಯಲ್ಲಿ ಅದೃಷ್ಟ , ಮತ್ತು ಸೌಭಾಗ್ಯ ಸಿಕ್ಕಿದೆಯಲ್ಲ ಎಂಬ ಭಾವನೆಯಲ್ಲಿ ಸಂತಸದಿಂದ ಪಾವನರಾಗುತ್ತಿದ್ದಾರೆ.
ಈ ಅಯೋಧ್ಯೆ ರಾಮ ಮಂದಿರದ ದೃಶ್ಯ ಜಾತ್ರೆಗೆ ಕಳೆ ಹೆಚ್ಚಿಸಿದೆ. ಈ ಅದ್ಭುತ ದೃಶ್ಯವನ್ನು ತಯಾರಿ ಮಾಡಿದ್ದು ಪಟ್ಟಣದ ಒಬ್ಬ ಮುಸ್ಲಿಂ ಯುವಕ ಎನ್ನುವುದು ತೀರ್ಥಹಳ್ಳಿಗೆ ಹೆಮ್ಮೆಯ ವಿಷಯವಾಗಿದೆ. ಈತನ ಹೆಸರು ತಬ್ರೆಜ್ ಆಸೀಫ್ ( ಮುನ್ನ ). ಈತ ಪಟ್ಟಣದ ಎಂ ಎಸ್ ಡೆಕೊರೇಟರ್ಸ್ ಮಾಲೀಕರಾಗಿದ್ದು ಎರಡು ತಿಂಗಳ ಹಿಂದೆ ತಮ್ಮ ಸಂಗಡಿಗರೊಂದಿಗೆ ಚರ್ಚಿಸಿ ತೀರ್ಥಹಳ್ಳಿ ಜಾತ್ರೆಗೆ ವಿದ್ಯುತ್ ದೀಪಾಲಂಕಾರದಿಂದ ಏನಾದರು ವಿಸ್ಮಯ ಕಾಣುವಂತೆ ಮಾಡಬೇಕೆಂದು ಯೋಚಿಸಿ ಸಂಗಡಿಗರ ಜೊತೆಗೆ ಚರ್ಚಿಸುವಾಗ
ಕೊನೆಗೆ ಹೊಳೆದಿದ್ದೆ ಈ ಅಯೋಧ್ಯೆ ರಾಮಮಂದಿರ.
ಅಯೋಧ್ಯೆ ರಾಮಮಂದಿರ ತಯಾರಿ ಮಾಡುವುದು ಸುಲಭವದ ಮಾತಲ್ಲ. ಮರಳಿನ ಮೇಲೆ ಕಂಬ ಹುಗಿಯಬೇಕು ಬೇಕು. ಮರಳಿನ ದಿಬ್ಬದಲ್ಲಿ ಅಡಿಕೆ ಮರದ ಕಂಬ ಹುಗಿಯುವುದು ತುಂಬಾ ಕಷ್ಟದ ಕೆಲಸ.ಹಾಗೆಯೇ ಕುರುವಳ್ಳಿ ಪೆಂಡಾಲ್ ಹಿಂಬಾಗದ ವರೆಗೆ 40ರಿಂದ50 ಅಡಿ ಉದ್ದುದ್ದ ಇರುವ ಅಡಿಕೆ ಮರ ರಸ್ತೆಯಲ್ಲಿ ತರುವುದು ಅಷ್ಟೇ ಕಷ್ಟ.ಇದನ್ನು ಶಿವರಾಜಪುರ ಸಮೀಪದಿಂದ 40 ರಿಂದ 50 ಅಡಿ ಉದ್ದದ ಅಡಿಕೆ ಮರವನ್ನು ತಂದು ಸುಮಾರು 300 ಸ್ಲಾಬ್ ಹಗ್ಗ, 25 ಕೆಜಿ ಚಳ್ಳಾದುರಿ ದಾರ ( ಗೋಣಿ ಚೀಲ ಹೊಲಿಯುವ ದಾರ ) ಹಾಗೂ ಇನ್ನಿತರ ಸಾಮಗ್ರಿಗಳೊಂದಿದೆ 15 ದಿನಗಳಿಂದ ಹಗಲು ರಾತ್ರಿ ಕೆಲಸ ಮಾಡಿ ಈ ಅದ್ಭುತವಾದ ಅಯೋಧ್ಯೆ ರಾಮಮಂದಿರ ಸೃಷ್ಟಿಸಿ ಅದರ ತುತ್ತ ತುದಿಯಲ್ಲಿ ಜೈ ಶ್ರೀ ರಾಮ್ ಎಂಬ ಬಾವುಟ ರಾಟೆ ಹಾಕಿ ಏರಿಸಿದ್ದಾರೆ. ಇದು ಅದ್ಭುತವಾಗಿ ಕಾಣಿಸುವುದರ ಜೊತೆಗೆ ಜನರನ್ನು ಆಕರ್ಷಿಸಿಸುವಂತೆ ಮಾಡಿದ್ದಾರೆ.
ಈ ವಿದ್ಯುತ್ ದೀಪದ ರಾಮಮಂದಿರವನ್ನು ತಯಾರಿಸಲು ಕಲೆಗಾರ (ಆರ್ಟಿಸ್ಟ್ ) ಜಬಿ ಪಟ್ಟ ಶ್ರಮ ಅಷ್ಟಿಷ್ಟಲ್ಲ.ಸುಮಾರು100 ರಿಂದ 150 ಟೀ ಖಾಲಿ ಮಾಡಿರಬಹುದು ,ಆದರೆ ಎಳ್ಳಮಾವಾಸ್ಯೆ ಸಮಯದಲ್ಲಿ ಅಯೋಧ್ಯೆ ರಾಮಮಂದಿರದ ದೃಶ್ಯ ನೋಡಿದಂತಹ ಭಕ್ತರಿಗೆ ಅಯೋಧ್ಯೆಯನ್ನೇ ನೆನಪಿಸಿರುವುದು ಹಾಗೂ ಈ ದೃಶ್ಯ ನೋಡಿ ಸಂತಸಪಟ್ಟಿರುವುದು ಅಷ್ಟೇ ಸತ್ಯ.
ಈ ತಯಾರಿ ಕಾರ್ಯದಲ್ಲಿ ರಾಘು, ಜಬಿ, ಶಮಿರ್, ಜೇಮ್ಸ್, ಸಮೀರ್ ಆಸೀಫ್ ಮತ್ತು ಸಂಗಡಿಗರಿಂದ ಈ ವಿದ್ಯುತ್ ದೀಪಾಲಂಕಾರದ ಅಯೋಧ್ಯೆ ರಾಮಮಂದಿರ ಸೃಷ್ಟಿಯಾಗಿದೆ.
ಇದನ್ನೂ ಓದಿ: Shimoga; ಕುಮಾರಸ್ವಾಮಿ ಹೇಳುವುದೆಲ್ಲಾ ಸುಳ್ಳು ಮಾತ್ರ…: ಸಿದ್ದರಾಮಯ್ಯ ಟೀಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.