Covid: ರಾಜ್ಯದಲ್ಲಿ ಜೆಎನ್-1 ಪ್ರಕರಣ 374ಕ್ಕೆ ಏರಿಕೆ
Team Udayavani, Jan 12, 2024, 10:50 PM IST
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತ 175 ಮಂದಿಯಲ್ಲಿ ಕೊರೊನಾ ರೂಪಾಂತರಿ ಜೆಎನ್-1 ವೈರಸ್ ವರದಿಯಾಗಿದ್ದು, ಆ ಮೂಲಕ ಜೆಎನ್-1 ಸೋಂಕಿತರ ಸಂಖ್ಯೆ 374ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇದುವರೆಗೆ ಜಿನೋಮ್ ಸಿಕ್ವೇನ್ಸಿಂಗ್ಗೆ ಕಳುಹಿಸಲಾದ 443 ಮಾದರಿಗಳಲ್ಲಿ 374 ಮಂದಿಯಲ್ಲಿ ಜೆಎನ್-1 ವರದಿಯಾಗಿದೆ. ಆ ಮೂಲಕ ಶೇ. 84 ಮಾದರಿಗಳಲ್ಲಿ ಜೆಎನ್-1, ಎಕ್ಸ್ಬಿಬಿ ಶೇ.7 ಹಾಗೂ ಇತರೆ ವೈರಸ್ ಶೇ.9ರಷ್ಟು ವರದಿಯಾಗಿದೆ. ಕಳೆದ 24ಗಂಟೆಯಲ್ಲಿ 6396ಮಂದಿಯ ಮಾದರಿಗಳನ್ನು ಪರೀಕ್ಷೆ ಒಳಪಡಿಸಿದ್ದು, ಅವರಲ್ಲಿ 163 ಮಂದಿಯಲ್ಲಿ ಸೋಂಕು ದೃಢವಾಗಿದೆ. 162 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಅನುಪಾತ ಕಡಿಮೆಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.