ಕೃಷಿಕನಾಗುವುದು ತಪ್ಪಲ್ಲ; ದೇಶಕ್ಕೆ ಅನ್ನ ನೀಡುವ ಕೃಷಿಯ ಬಗ್ಗೆ ನಾಚಿಕೆ ಸಲ್ಲದು: ಹೈಕೋರ್ಟ್
ದಕ್ಷಿಣ ಕನ್ನಡ ಜಿಲ್ಲೆಯ ರೈತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ
Team Udayavani, Jan 12, 2024, 11:04 PM IST
ಬೆಂಗಳೂರು: ಕೃಷಿಕನಾಗುವುದು ತಪ್ಪಲ್ಲ. ಕೃಷಿಕ ಎಂದು ಹೇಳಲು ನಾಚಿಕೆ ಏಕೆ? ಕಾಸ್ ಟೈಟಲ್ನಲ್ಲಿ ಉದ್ಯೋಗದ ಮಾಹಿತಿ ಉಲ್ಲೇಖಿಸಿಲ್ಲ. ಕೃಷಿ ಅತ್ಯುತ್ತಮ ಉದ್ಯೋಗ. ಅದು ಜಗತ್ತಿನ ಅತಿ ಹಳೆಯ ಉದ್ಯೋಗ. ಇದಕ್ಕೆ ನಾಚಿಕೆ ಪಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ರೈತ ಅರ್ಜಿದಾರರೊಬ್ಬರಿಗೆ ಹಿತಮಾತು ಹೇಳಿದ ಪ್ರಸಂಗ ಹೈಕೋರ್ಟ್ನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ರೈತರೊಬ್ಬರು ತಮ್ಮ ಅರ್ಜಿಯ ಕಾಸ್ ಟೈಟಲ್ನಲ್ಲಿ ಉದ್ಯೋಗದ ಮಾಹಿತಿಯನ್ನು ಉಲ್ಲೇಖೀಸಿರಲಿಲ್ಲ. ಇದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿಗಳು, ಏನು ಕೆಲಸ ಮಾಡುತ್ತಿದ್ದೀರಿ ಎಂದು ಅರ್ಜಿದಾರರನ್ನು ಪ್ರಶ್ನಿಸಿದರು. ಆಗ ಅರ್ಜಿದಾರರ ಪರ ವಕೀಲರು ಕೃಷಿಕ ಎಂದು ಮೆಲ್ಲ ಧ್ವನಿಯಲ್ಲಿ ಹೇಳಿದರು.
ಆಗ ಪೀಠವು ನಿಮ್ಮ ಉದ್ಯೋಗದ ಬಗ್ಗೆ ನಿಮಗೆ ನಾಚಿಕೆ ಏಕೆ? ಕೃಷಿಕನಾಗುವುದು ತಪ್ಪಲ್ಲ. ಕೃಷಿಕ ಎಂದು ಹೇಳಲು ನಾಚಿಕೆ ಏಕೆ? ಕಾಸ್ ಟೈಟಲ್ನಲ್ಲಿ ಉದ್ಯೋಗದ ಮಾಹಿತಿ ಉಲ್ಲೇಖಿಸಿಲ್ಲ. ಕೃಷಿ ಅತ್ಯುತ್ತಮ ಉದ್ಯೋಗ. ಅದು ಜಗತ್ತಿನ ಅತಿ ಹಳೆಯ ಉದ್ಯೋಗ. ಇದಕ್ಕೆ ನಾಚಿಕೆ ಪಡಬಾರದು ಎಂದರು.
ಆ ಸಂದರ್ಭದಲ್ಲಿ ನ್ಯಾ| ದೀಕ್ಷಿತ್ ಅವರು ಕವಿ ಸರ್ವಜ್ಞ ಅವರ ತ್ರಿಪದಿ, “ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು, ಮೇಟಿಯಂ ರಾಟಿ ನಡೆದುದಲ್ಲವೇ ಲೋಕಕ್ಕೆ, ಮೇಟಿಯೇ ಶ್ರೇಷ್ಠ ಸರ್ವಜ್ಞ’ ಎನ್ನುವುದನ್ನು ಉಲ್ಲೇಖೀಸಿದರು. ಆಗ ಮುಖ್ಯ ನ್ಯಾಯಮೂರ್ತಿಗಳು ಕೋಟ್ಯಂತರ ಉದ್ಯೋಗಗಳಲ್ಲಿ ಕೃಷಿ ಶ್ರೇಷ್ಠ. ಇದರ ಬಗ್ಗೆ ಹೆಮ್ಮೆ ಇರಬೇಕು ಎಂದರು.
ಅರ್ಜಿದಾರರ ಪರ ವಕೀಲರು ಆದಾಯ ತೆರಿಗೆಯ ದಾಳಿ ಇರುವುದಿಲ್ಲ ಎಂದು ಲಘು ದಾಟಿಯಲ್ಲಿ ಹೇಳಿದರು. ಇದಕ್ಕೆ ಪೀಠವು ಅವೆಲ್ಲ ಲಾಭಗಳು. ಕೃಷಿಕನಾಗಿರುವುದಕ್ಕೆ ಹೆಮ್ಮೆ ಇರಬೇಕು. ಏಕೆಂದರೆ ದೇಶಬಾಂಧವರಿಗೆ ರೈತರು ಅನ್ನ ನೀಡುತ್ತಾರೆ ಎಂದರು.
ನ್ಯಾ| ದೀಕ್ಷಿತ್ ಅವರು ಕಾಸ್ ಟೈಟಲ್ನಲ್ಲಿ ಏಕೆ ಉದ್ಯೋಗ ಉಲ್ಲೇಖಿಸಿಲ್ಲ. ಮಂಗಳ ಸೂತ್ರವನ್ನು ಕುತ್ತಿಗೆಗೆ ಕಟ್ಟಬೇಕು. ಬೇರೆಲ್ಲೂ ಅಲ್ಲ ಎಂದು ಚಟಾಕಿ ಹಾರಿಸಿದರು. ಪ್ರಕರಣದಲ್ಲಿನ ಪ್ರತಿವಾದಿಗಳಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.