Cambodia; ಕಾಂಬೋಡಿಯಾದ ಕಲೆಗಳಲ್ಲಿ ರಾಮಾಯಣ!


Team Udayavani, Jan 13, 2024, 5:45 AM IST

1-ddasdsad

ಕಾಂಬೋಡಿಯಾದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೌದ್ಧ ಧರ್ಮೀಯರಿದ್ದಾರೆ. ಈ ಹಿಂದೆ ದೇಶದಲ್ಲಿ ಹಿಂದೂ ಧರ್ಮೀಯರ ಬಾಹುಳ್ಯವಿತ್ತು. ಇದಕ್ಕೆ ಮುಖ್ಯ ಕಾರಣ ಒಡಿಶಾ ಹಾಗೂ ತಮಿಳು ವ್ಯಾಪಾರಿಗಳು. ಸರಕು-ಸಾಮಗ್ರಿಗಳ ಆಮದು ಹಾಗೂ ರಫ್ತಿ ಗಾಗಿ ದಕ್ಷಿಣ ಏಷ್ಯಾ ದೇಶಗಳಿಗೆ ಇವರು ನಿರಂತರವಾಗಿ ಭೇಟಿ ನೀಡುತ್ತಿದ್ದರು. ಇವರಿಂದಾಗಿ ಕಾಂಬೋಡಿಯಾದಲ್ಲೂ ಹಿಂದೂ ಧರ್ಮೀಯರ ಆಚಾರ-ವಿಚಾರಗಳು ಪ್ರಸರಣಗೊಳ್ಳುವಂತಾಯಿತು. ಇಲ್ಲಿನ ಅಂಕೋರ್‌ ವಾಟ್‌ ಅಥವಾ ಅಂಕೋರ ಧಾಮದಲ್ಲಿರುವ ದೇಗುಲ ಸಂಕೀರ್ಣದ ಗೋಡೆಗಳಲ್ಲಿ ರಾಮಾಯಣ ಹಾಗೂ ಮಹಾಭಾರತದ ಚಿತ್ರಣಗಳ ಕೆತ್ತನೆಗಳನ್ನು ಕಾಣಬಹುದು. ದೇಶದ ವಿವಿಧೆಡೆ ರಾಮಾಯಣದ ಹಾಗೂ ಮಹಾಭಾರತದ ಕಥೆಗಳು ಪ್ರಚಲಿತದಲ್ಲಿವೆ.

ಕಾಂಬೋಡಿಯದ ರಾಮಾಯಣವನ್ನು “ರೀಮಕರ’ (ರಾಮಕೀರ್ತಿ) ಎಂದು ಕರೆಯಲಾಗುತ್ತದೆ. ಇದರ ಅರ್ಥ “ರಾಮನ ಮಹಿಮೆ’ ಎಂಬುದಾಗಿದೆ. ಹಿಂದೂ ಮತ್ತು ಬೌದ್ಧ ಧರ್ಮದ ವಿಷಯಗಳನ್ನು ಒಳಗೊಂಡ ಖಮೇರ್‌ ಸಾಹಿತ್ಯದ ಭಾಗ ಇದಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ರಾಮನನ್ನು ಫ್ರೀಹ ರೀಮ ಹಾಗೂ ಸೀತಾಮಾತೆಯನ್ನು ನಿಯಾಂಗ ಸೆಡಾ ಎಂದು ಕರೆಯಲಾಗುತ್ತದೆ. ಅಂಕೋರ್‌ ವಾಟ್‌ ದೇಗುಲದ ಕಾರಿಡಾರ್‌ನಲ್ಲಿ ರಾಮಾಯಣವನ್ನು ಕೆತ್ತಲಾಗಿದೆ. ರಾಮನು ಸೀತಾ ಸ್ವಯಂವರದಲ್ಲಿ ಬಿಲ್ಲನ್ನು ಮುರಿದಿದ್ದರಿಂದಲೇ ಪ್ರಾಚೀನ ಕಾಂಬೋಡಿಯಾದಲ್ಲಿ ಅತ್ಯಂತ ಜನಪ್ರಿಯವಾಗಿದ್ದನು ಎಂದು ಇಲ್ಲಿನ ಶಿಲಾಶಾಸನಗಳಲ್ಲಿ ಉಲ್ಲೇಖವಾಗಿವೆ. 1620ರಲ್ಲಿ ಖಮೇರ್‌ ಸಾಹಿತ್ಯದ ಲೇಖಕನಾದ ಪಂಜ ಟಾಟ್‌ ಬರೆದ “ಅಂಕೋರ್‌ ವಾಟ್‌ನ ಕಥೆಗಳು’ ಎಂಬ ಸಾಹಿತ್ಯ ಕೃತಿಯಲ್ಲೂ ರೀಮಕರದ ಬಗ್ಗೆ ಉಲ್ಲೇಖವಿದೆ. ಅಂಕೋರ್‌ ವಾಟ್‌ನ ದೇಗುಲಗಳಲ್ಲಿ ರಾಮಾಯಣದ ಕಥೆಗಳ ಕೆತ್ತನೆಯ ಬಗ್ಗೆಯೂ ವಿವರವಿದೆ.

1900ರಲ್ಲಿ ತಾ ಕ್ರೂಡ್‌ ಹಾಗೂ ತಾ ಚಕ ಎನ್ನುವ ಇಬ್ಬರು ವ್ಯಕ್ತಿಗಳು ಇಡೀ ರೀಮಕರದ ಕಥೆಯನ್ನು ಅತ್ಯಂತ ಸುಂದರವಾಗಿ, ಸಂಜ್ಞೆಗಳ ಮೂಲಕ, ಮೌಖೀಕವಾಗಿ ಚಾಚುತಪ್ಪದೇ ಪ್ರಸ್ತುತ ಪಡಿಸುತ್ತಿದ್ದರಂತೆ. 1920ರಲ್ಲಿ ತಾ ಚಕ, ಅಂಕೋರ್‌ ವಾಟ್‌ ದೇಗುಲದ ದಕ್ಷಿಣ ದಿಕ್ಕಿನಲ್ಲಿ ಲಾಟನೈಯರ್‌ ಎಲೆಗಳಲ್ಲಿ ರೀಮಕರದ ಕಥೆಗಳ ಹಸ್ತಪ್ರತಿಗಳನ್ನು ಕಾಣುತ್ತಾನೆ ಹಾಗೂ ಅದರ ಪೂರ್ಣ ಕಥೆಯನ್ನು ಕಲಿತು ಬಾಯಿಪಾಠ ಮಾಡಿಕೊಳ್ಳುತ್ತಾನೆ. 1969ರಲ್ಲಿ ಈ ಕಥೆಗಳನ್ನು ತಾ ಚಕನು ಮೌಖೀಕವಾಗಿ ಪ್ರಸ್ತುತಪಡಿಸುವುದನ್ನು ಸುಮಾರು 10 ದಿನಗಳ ಕಾಲದ ಸಮಯದಲ್ಲಿ ರೆಕಾರ್ಡ್‌ ಮಾಡಲಾಗುತ್ತದೆ.
ರೀಮಕರದ ಹಲವಾರು ಆವೃತ್ತಿಗಳು ಇಂದು ಕಾಂಬೋಡಿಯಾದಲ್ಲಿ ಲಭ್ಯವಿವೆ. ರೀಮಕರವನ್ನು ಕಾಂಬೋಡಿಯಾದ ರಾಷ್ಟ್ರೀಯ ಗ್ರಂಥ ಎಂದು ಗುರುತಿಸಲಾಗಿದೆ. ಜತೆಗೆ ಕಾಂಬೋಡಿಯಾದ ಸಾಹಿತ್ಯ, ಕಲೆ, ನೃತ್ಯ, ನಾಟಕ, ಸಂಸ್ಕೃತಿಯಲ್ಲಿಯೂ ರೀಮಕರ ತನ್ನದೇ ಛಾಪನ್ನು ಹೊಂದಿದೆ.

ಕಾಂಬೋಡಿಯಾದ ಅಂಕೋರ್‌ ವಾಟ್‌ನ ದೇಗುಲಗಳ ಗೋಡೆಗಳಲ್ಲಿ ಅತೀ ವಿಸ್ತೃತವಾಗಿ ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ಕೆತ್ತಲಾಗಿದೆ. ಪ್ರತೀ ಕಥೆಯೂ ಬೌದ್ಧ ಧರ್ಮದ ಪ್ರಭಾವವನ್ನು ಹೊಂದಿದೆ. ಬೌದ್ಧ ಧರ್ಮ ಇಲ್ಲಿ ಬರುವ ಮೊದಲು ಇಲ್ಲಿನ ಕೆಲವು ನಗರಗಳನ್ನು ಪರಮ ವಿಷ್ಣು ಲೋಕ ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಮದುವೆ ಶಾಸ್ತ್ರದಲ್ಲೂ ಹಿಂದೂ ಧರ್ಮದ ಕೆಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಅಂಕೋರ್‌ ವಾಟ್‌ನಲ್ಲಿರುವ ರಾಮಾಯಣದ ಪ್ರಾಚೀನ ಭಿತ್ತಿಚಿತ್ರಗಳ ಸಂರಕ್ಷಣೆಗೆ ಭಾರತವು ಕಾಂಬೋಡಿಯಾಕ್ಕೆ ಆರ್ಥಿಕ ನೆರವನ್ನು ನೀಡುತ್ತಿದೆ.

ದುಬಾರಿ ಟಿವಿ ರಾಮಾಯಣ

ರಮಾನಂದ ಸಾಗರರ ರಾಮಾಯಣ 1987 ರಲ್ಲಿ ದೂರದರ್ಶನದಲ್ಲಿ ಪ್ರಸಾರ ಆರಂಭವಾಯಿತು. ಒಟ್ಟು 78 ಕಂತುಗಳ ಧಾರಾವಾಹಿ ಅತ್ಯಂತ ಜನಪ್ರಿಯವಾಗಿತ್ತು. ವಿಶೇಷವೆಂದರೆ ಪ್ರತೀ ಕಂತು ನಿರ್ಮಾಣಕ್ಕೆ 9 ಲಕ್ಷ ರೂ. ಬಜೆಟ್‌ ನಿಗದಿಯಾಗಿತ್ತು ಆಗಿನ ದಿನಗಳಲ್ಲಿ ಅದೇ ಅತ್ಯಂತ ದುಬಾರಿ ಧಾರಾವಾಹಿ.

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

1-tirupati-laddu

Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Haryana: Financial assistance to women, MSP promised; BJP manifesto released

Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್‌ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.