Online ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ
Team Udayavani, Jan 13, 2024, 9:15 PM IST
ಉಡುಪಿ: ಆನ್ಲೈನ್ ಉದ್ಯೋಗದ ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಮಣಿಪಾಲದಲ್ಲಿ ಸಂಭವಿಸಿದೆ.
ಬೆಳ್ತಂಗಡಿ ಮೂಲದ ಜಾಸ್ಮಿ ಟಿ.ಕೆ. ಅವರು ಮಣಿಪಾಲದ ವಿದ್ಯಾರತ್ನನಗರದ ಬಳಿ ತನ್ನ ಮನೆಯಲ್ಲಿ ಫೇಸ್ಬುಕ್ ನೋಡುತ್ತಿದ್ದಾಗ ಆನ್ಲೈನ್ ಉದ್ಯೋಗವೊಂದರ ಬಗ್ಗೆ ಜಾಹೀರಾತು ಬಂದಿತ್ತು. ಅದನ್ನು ಒಪ್ಪಿಕೊಂಡಾಗ ವ್ಯಕ್ತಿಯೊಬ್ಬ ಜಾಸ್ಮಿ ಅವರನ್ನು ಮೇಸೇಜ್ ಮೂಲಕ ಸಂಪರ್ಕಿಸಿ ಟೆಲಿಗ್ರಾಮ್ ಆ್ಯಪ್ನಲ್ಲಿ ಸಂಪರ್ಕಿಸುವಂತೆ ತಿಳಿಸಿ ಲಿಂಕ್ ನೀಡಿದ್ದ. ಆ ಲಿಂಕ್ ಮೂಲಕ ಜಾಸ್ಮಿ ಅವರಿಗೆ ಪ್ರಾರಂಭದಲ್ಲಿ 150ರೂ. ಬಳಿಕ 200 ರೂ. ಖಾತೆಗೆ ಬಂದಿತ್ತು. ಬಳಿಕ ಜ. 8ರಂದು ಟೆಲಿಗ್ರಾಮ್ ಆ್ಯಪ್ ಮೂಲಕ ಸಂಪರ್ಕಿಸಿ ಟ್ರೇಡಿಂಗ್ ವಿವರ ನೀಡಿದ್ದು, ಜಾಸ್ಮಿ ಅವರು ಜ.11ರ ಮಧ್ಯಾಹ್ನದವರೆಗೆ 1,88,000 ರೂ.ಹಣವನ್ನು ಮಹೇಶ್ ಜೊಥೆ ಎಂಬಾತನ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು.
ಆ ಬಳಿಕ ಆರೋಪಿಯು ಇನ್ನು 1,50,000 ರೂ.ನೀಡಿದರೆ ಎಲ್ಲ ಹಣವನ್ನು ರೀಫಂಡ್ ಮಾಡುವುದಾಗಿ ತಿಳಿಸಿದ್ದ. ಟ್ರೇಡಿಂಗ್ ಆ್ಯಪ್ ಎಂದು ನಕಲಿ ಆ್ಯಪ್ ಮೂಲಕ ಹಣ ವರ್ಗಾವಣೆ ಮಾಡಿಸಿ ವಾಪಸ್ ಮರಳಿಸದೇ ಆರೋಪಿ ಮೋಸ ಮಾಡಿದ್ದಾನೆ ಎಂದು ಜಾಸ್ಮಿ ಮಣಿಪಾಲ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.