UPA,NDA ಅವಧಿಯ ಅನುದಾನದ ಕುರಿತು ಶ್ವೇತ ಪತ್ರ ಹೊರಡಿಸಿ: ಸಿ.ಟಿ.ರವಿ
ಕೇಂದ್ರದ ವಿರುದ್ದ ಸುಳ್ಳು ಆರೋಪ; ಸಿಎಂ ಗೆ ಸವಾಲು ಹಾಕಿದ ಮಾಜಿ ಸಚಿವ
Team Udayavani, Jan 13, 2024, 7:57 PM IST
ಹುಬ್ಬಳ್ಳಿ: ರಾಜ್ಯಕ್ಕೆ ಹಿಂದಿನ ಯುಪಿಎ ಸರ್ಕಾರದಲ್ಲಿ ಎಷ್ಟು ಅನುದಾನ ಬಂದಿದೆ, ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎನ್ಎ ಸರ್ಕಾರದಲ್ಲಿ ಎಷ್ಟು ಬಂದಿದೆ ಎಂಬುದರ ಬಗ್ಗೆ ಸಿಎಂ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಚಿವ ಸಿ.ಟಿ.ರವಿ ಆಗ್ರಹಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಂಕಿ-ಅಂಶ ಮುಚ್ಚಿಟ್ಟು ಕೇಂದ್ರದ ವಿರುದ್ದ ಸುಳ್ಳು ಆರೋಪ ಮಾಡುತ್ತಿದೆ.2004ರಿಂದ 2014ರ ವರೆಗೆ ಕಾಂಗ್ರೆಸ್ ಸರ್ಕಾರದ ಡಾ.ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ರಾಜ್ಯಕ್ಕೆ ತೆರಿಗೆ ಪಾಲು ಮತ್ತು ಅನುದಾನ ಎಷ್ಟು ಕೊಟ್ಟಿದ್ದಾರೆ ತಿಳಿಸಬೇಕು. ನರೇಂದ್ರ ಮೋದಿ ಅವರು ಕೊಟ್ಟ ಅನುದಾನ ಎಷ್ಟು ಎಂಬುದರ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.
ಪ್ರಧಾನಿ ಮೋದಿ ಅನುದಾನ ಕಡಿಮೆ ಕೊಟ್ಟಿದ್ದರೆ ನಾವು ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಒಪ್ಪಿಕೊಂಡು ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕುವುದಿಲ್ಲ.ನೀವು ಇದೇ ಸವಾಲನ್ನು ಸ್ವೀಕರಿಸಿ, ಸುಳ್ಳೆ ನಮ್ಮ ಮನೆ ದೇವರು ಎಂದು ಕ್ಷಮಾಪಣೆ ಕೇಳಿ ಅಭ್ಯರ್ಥಿ ನಿಲ್ಲಸಲ್ಲ ಎಂದು ಘೋಷಣೆ ಮಾಡಿ ಎಂದರು.
ಯಪಿಎ 10 ವರ್ಷದಲ್ಲಿ ರಾಜ್ಯಕ್ಕೆ ತೆರಿಗೆ ಪಾಲು 81,795 ಕೋಟಿ ರೂ. ಹಣ ನೀಡಿದೆ. ಮೋದಿ ಸರ್ಕಾರ ಒಂಭತ್ತೂವರೆ ವರ್ಷಗಳಲ್ಲಿ 2,80,130 ಕೋಟಿ ರೂ. ನೀಡುವ ಮೂಲಕ ಶೇಕಡಾ 242 ರಷ್ಟು ಹೆಚ್ಚು ಕೊಟ್ಟಿದೆ.ವಿವಿಧ ಯೋಜನೆಗಳ ಅನುದಾನವನ್ನು ಯುಪಿಎ 60,779ಕೋಟಿ ರೂ. ನೀಡಿದೆ. ಬಿಜೆಪಿ 2,08,832 ಕೋಟಿ ರೂ. ಅಂದರೆ ಶೆ. 243ರಷ್ಟು ನೀಡಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.