Shri Ram ನನ್ನ ಕನಸಲ್ಲಿ ಬಂದು ನಾನು ಎಲ್ಲರಿಗೂ ದೇವರು ಎಂದಿದ್ದಾನೆ:ಸಚಿವ ಲಾಡ್
ದಯಮಾಡಿ ನಮ್ಮನ್ನೂ ಉಳಿಸಿ ಎಂದು ಕೈ ಮುಗಿದ ಸಚಿವ
Team Udayavani, Jan 13, 2024, 10:05 PM IST
ಧಾರವಾಡ : ಬಿಜೆಪಿಯವರು ಶ್ರೀರಾಮ ಮಂದಿರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ನಾನು ಎಲ್ಲರಿಗೂ ದೇವರಾಗಿದ್ದೇನೆ ಎಂಬುದಾಗಿ ಕನಸಿನಲ್ಲಿ ಬಂದು ಶ್ರೀರಾಮರೇ ಹೇಳಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮಮಂದಿರ ಬರೀ ಚುನಾವಣೆ ಗಿಮಿಕ್ ಅಷ್ಟೇ. ಹಿಂದಿನ ವರ್ಷ ಈ ವಿಷಯ ಇರಲಿಲ್ಲ. ಕಳೆದ ಬಾರಿ ಪುಲ್ವಾಮಾ ಕಥೆ ತಂದರು. ಈ ರಾಮಮಂದಿರ, ಹಿಂದೂತ್ವ ತಂದರು. ಇವೆಲ್ಲ ಚುನಾವಣೆ ಸಂದರ್ಭದಲ್ಲಿ ಮಾತ್ರ. ಚುನಾವಣೆ ಮುಗಿದ ಮೇಲೆ ಏನಿರುತ್ತದೆ ಎಂಬುದನ್ನೂ ಮಾಧ್ಯಮದವರು ತೋರಿಸಬೇಕು. ದಯಮಾಡಿ ನಮ್ಮನ್ನೂ ಉಳಿಸಿ ಎಂದು ಲಾಡ್
ಮಾಧ್ಯಮದವರಿಗೆ ಕೈ ಮುಗಿದರು.
ರಾಮ ಎಲ್ಲ ಜನಾಂಗದವರಲ್ಲೂ ಇದ್ದಾರೆ. ಇದನ್ನೇ ಅವರು ಕನಸಲ್ಲಿ ಹೇಳಿದ್ದಾರೆ. ಮುಸ್ಲಿಂರು ಕೂಡ ರಾಮನ ಪೂಜೆ ಮಾಡಬಹುದು. ಈಗ ಎಲ್ಲರನ್ನೂ ಕರೆಯುತ್ತಿದ್ದಾರೆ. ಇಷ್ಟು ವರ್ಷ ಇವರು ಯಾರನ್ನೂ ಕರೆದಿಲ್ಲ. ನರೇಂದ್ರ ಮೋದಿ ಕಳೆದ 10 ವರ್ಷಗಳಲ್ಲಿ ಎಷ್ಟು ಬಾರಿ ರಾಮಮಂದಿರಕ್ಕೆ ಹೋಗಿದ್ದಾರೆ. ಇವರ ಬಳಿ ಫೋಟೋ ಇವೆಯಾ? ಇದೆಲ್ಲ ಪ್ರಚಾರಕ್ಕೆ ಮಾತ್ರ ಎಂದರು.
ಕೆಲ ಸ್ನೇಹಿತರು ಈಗ ತಾನೇ ಬಂದು ನನಗೆ ಮಂದಿರ ಉದ್ಘಾಟನೆಯ ಆಹ್ವಾನ ಕೊಟ್ಟಿದ್ದಾರೆ. ಇತಿಹಾಸ ನೋಡಿದರೆ ಆರ್‌ಎಸ್‌ಎಸ್ ಅಜೆಂಡಾದಲ್ಲಿ ಯಾವತ್ತೂ ರಾಮಮಂದಿರ ಇರಲಿಲ್ಲ. ಆರ್‌ಎಸ್‌ಎಸ್ ಶುರುವಾಗಿ ನೂರು ವರ್ಷ ಆಗಿದೆ. 30 ವರ್ಷದ ಹಿಂದೆ ಬಾಬರಿ ಮಸೀದಿ ಗಲಾಟೆ ಆದ ಮೇಲೆ ರಾಮ ಮಂದಿರದ ಚರ್ಚೆ ಆಗಿದೆ. ಚುನಾವಣೆ ವೇಳೆಯಷ್ಟೇ ರಾಮಮಂದಿರ ಚರ್ಚೆ ಆಗುತ್ತದೆ. ಆಮೇಲೆ ಕ್ಲೋಸ್ ಆಗುತ್ತದೆ ಎಂದರು.
ಒಗಟ್ಟಿಗೆ ಸಲಹೆ
ರಾಷ್ಟ್ರ ನಾಯಕರು ನಮಗೆ ಎಲ್ಲಾ ಸಚಿವರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ರಾಜ್ಯ ಮತ್ತು ಕೇಂದ್ರದ ನಡುವೆ ಯಾವ ರೀತಿಯ ಬಾಂಧವ್ಯ ಇರಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ. ಇದಲ್ಲದೇ ಲೋಕಸಭಾ ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ಹೇಳಿದ್ದಾರೆ. ಯಾವುದೇ ವಿವಾದಾತ್ಮಕ ಹೇಳಿಕೆ ಕೊಡದಂತೆ ಸೂಚನೆ ಕೊಟ್ಟಿದ್ದಾರೆ ಎಂದರು.
ಡಿಸಿಎಂ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಲಾಡ್, ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇನ್ನು ನಿಗಮ ಮಂಡಳಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಶಾಸಕರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ತೀರ್ಮಾನ ಆಗಿದೆ ಎಂದರು. ಇದಲ್ಲದೇ
ಲೋಕಸಭಾ ಚುನಾವಣೆಗೆ ನಿಲ್ಲಲು ನನಗೆ ಆಸೆ ಇಲ್ಲ. ನಾನು ರಾಜ್ಯ ರಾಜಕಾರಣಕ್ಕೆ ಮಾತ್ರ ಸೀಮಿತವಾಗಬೇಕು. ನಾನು ಇಲ್ಲೇ ಕೆಲಸ ಮಾಡಬೇಕು. ನಮ್ಮ ಪಕ್ಷದಲ್ಲಿ ಯಾರೇ ನಿಂತರೂ ನನ್ನಷ್ಟೇ ಸೂಕ್ತರಿದ್ದಾರೆ. ನೋಡೋಣ ಯಾರಿಗೆ ಕೊಡುತ್ತಾರೋ ಯಾರು ಕ್ಲಿಕ್ ಆಗುತ್ತಾರೋ ಎಂದರು.
ಇವರೆಲ್ಲ ರಾಜಕಾರಣವನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋದರೆ ಹೇಗೆ?
ರಾಮಮಂದಿರ ಉದ್ಘಾಟನೆಗೆ ಶಂಕರಾಚಾರ್ಯರು ಬಂದರೆ ಬರಲಿ ಬಿಟ್ಟರೆ ಬಿಡಲಿ, ಯಾವ ಸ್ವಾಮೀಜಿ ಬೇಕಾದರೆ ಬಂದರೆ ಬರಲಿ ಬಿಟ್ಟರೆ ಬಿಡಲಿ ಎನ್ನುವ ಮಾತುಗಳನ್ನು ಬಿಜೆಪಿಯವರು ಆಡುತ್ತಾರೆ. ಇವರ ಮಾತುಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ಅವರ ಸಂಸ್ಕೃತಿ ತೋರಿಸುತ್ತದೆ.
-ಎಚ್.ಕೆ.ಪಾಟೀಲ, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.