Ayodhya ಸಮೃದ್ಧಿ,ಸಂಯಮಗಳ ಸಮಾಗಮ: ರಾಘವೇಶ್ವರ ಭಾರತೀ ಸ್ವಾಮೀಜಿ

ಅಯೋಧ್ಯೆಯು ಕೋಸಲದ ರಾಜಧಾನಿ. ವಿಶ್ವವೆಲ್ಲವನ್ನೂ ಆಳುವ ವಿಶ್ವಾಧೀಶ ಚಕ್ರವರ್ತಿಗಳ ಶಾಸನ ಕೇಂದ್ರವಾದುದರಿಂದ ಅದು ವಿಶ್ವದ ರಾಜಧಾನಿಯೂ ಆಗಿತ್ತು.

Team Udayavani, Jan 14, 2024, 5:55 AM IST

1-dsadsd

ಅಯೋಧ್ಯೆಯು ಅಪರೂಪದಲ್ಲಿ ಅಪರೂಪದ ವಿನ್ಯಾಸವನ್ನು ಹೊಂದಿತ್ತು. ಒಂದರೊಳಗೊಂದು ಹಾದು ಹೋಗುವ ಎರಡು ಆಯತಗಳಂತೆ ಅದರ ವಿನ್ಯಾಸವಿತ್ತು. ಪಗಡೆಯ ಆಟದ ಪಟಕ್ಕೆ ಅಥವಾ ಗಣಿತದ ಕೂಡು ಚಿಹ್ನೆ (+)ಗೆ ಅಯೋಧ್ಯೆಯ ಆಕೃತಿಯನ್ನು ಹೋಲಿಸಬಹುದಿತ್ತು. ಪಗಡೆಯ ಪಟದಲ್ಲಿ ಒಂದು ಆಯತವು ಉದ್ದವಾಗಿದ್ದರೆ ಮತ್ತೂಂದು ಆಯತವು ಕೊಂಚ ಗಿಡ್ಡವಾಗಿರುತ್ತದೆ. ಹಾಗೆಯೇ ಇತ್ತು ಅಯೋಧ್ಯೆ. ಹನ್ನೆರಡು ಯೋಜನ ಉದ್ದದ ಒಂದು ಆಯತ, ಮೂರು ಯೋಜನ ಅಗಲದ ಮತ್ತೂಂದು ಆಯತ. ಹನ್ನೆರಡು ಯೋಜನ ಉದ್ದದ ಆಯತದ ಸರಿಯಾದ ಮಧ್ಯದಲ್ಲಿ ಮೂರು ಯೋಜನದ ಇನ್ನೊಂದು ಆಯತವು ಅಡ್ಡಲಾಗಿ ಹಾದು ಹೋಗಿತ್ತು.

ಎರಡೂ ಆಯತಗಳೂ ಸಂಧಿಸುವ ಬಿಂದುವಿನಲ್ಲಿ, ನಗರದ ಹೃದಯಭಾಗದಲ್ಲಿ ರಾಜಭವನವಿತ್ತು. ಅಲ್ಲಿಂದ ಆರಂಭಗೊಂಡು ನಾಲ್ಕೂ ದಿಕ್ಕಿಗೆ ನಾಲ್ಕು ರಾಜಮಾರ್ಗಗಳು ತೆರಳಿದ್ದವು. ರಾಜಮಾರ್ಗಗಳು ಸುವಿಶಾಲವಾಗಿದ್ದವು ಮತ್ತು ಸುವ್ಯವಸ್ಥಿತವಾಗಿ ವಿಭಾಗಿಸಲ್ಪಟ್ಟಿದ್ದವು. ರಾಜ ಮಾರ್ಗದ ಎರಡೂ ಪಾರ್ಶ್ವ‌ಗಳಲ್ಲಿ ಏಳುಮಹಡಿಯ ಸೌಧಗಳು ಸಾಲು ಸಾಲಾಗಿ ವ್ಯವಸ್ಥಿತವಾಗಿ ನಿರ್ಮಿಸಲ್ಪಟ್ಟಿ ದ್ದವು. ಭವನಗಳ ನಡುವೆ, ಒಳಗೆ, ಹೊರಗೆ ಸಾಕಷ್ಟು ಅವಕಾಶವನ್ನು ಕಲ್ಪಿ ಸಲಾಗಿತ್ತು. ಅಂಗಡಿ-ಮುಂಗಟ್ಟುಗಳೂ ಅಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿಯೇ ಸುವ್ಯವಸ್ಥಿತವಾದ ಮತ್ತು ಯೋಜಿತವಾದ ರೀತಿಯಲ್ಲಿ ಇದ್ದವು.

ಕಾಂಭೋಜ, ಬಾಹ್ಲಿಕ, ವನಾಯು, ಮತ್ತು ಸಿಂಧೂ ದೇಶಗಳ ಉತ್ತಮಾಶ್ವಗಳು ಅಯೋಧ್ಯೆಯ ಅಶ್ವಶಾಲೆಗಳನ್ನು ಅಲಂಕರಿಸಿದ್ದರೆ, ಇಂದ್ರನ ಐರಾವತದ ಕುಲದಲ್ಲಿ ಮತ್ತು ಅಂಜನ-ವಾಮನಗಳೆಂಬ ದಿಗ್ಗಜಗಳ ಕುಲದಲ್ಲಿ ಹುಟ್ಟಿದ ಮದಿಸಿದ ಆನೆಗಳಿಂದ ಅಲ್ಲಿಯ ಗಜಶಾಲೆಗಳು ಪರಿಶೋಭಿತವಾಗಿದ್ದವು. ಭದ್ರಮಂದ್ರ, ಭದ್ರಮೃಗ ಮತ್ತು ಮೃಗಮಂದ್ರ ಎಂಬ ಮೂರು ಉಪಜಾತಿಯ ಆನೆಗಳೂ ಇದ್ದವು. ಇದಲ್ಲದೇ ಒಂಟೆಗಳು, ಕತ್ತೆಗಳು ಮೊದಲಾದ ಬಹುವಿಧವಾದ ಪ್ರಾಣಿಗಳು ಅಲ್ಲಿ ಬಹು ಸಂಖ್ಯೆಯಲ್ಲಿದ್ದವು.

ಅಯೋಧ್ಯೆಯ ಆನಂದವನ್ನು ರಕ್ಷಿಸಲೆಂದು ಮತ್ತು ಅಲ್ಲಿಯ ನೆಮ್ಮದಿ ಯನ್ನು ನಿತ್ಯವಾಗಿಸಲೆಂದು ದುಭೇìದ್ಯವಾದ ಭದ್ರ ಕೋಟೆಯೊಂದು ಆ ನಗರಿಯನ್ನು ಸುತ್ತುವರಿದು, ಮೋಡಗಳೆತ್ತರಕ್ಕೆ ತಲೆಯೆತ್ತಿ ನಿಂತಿತ್ತು. ಯಾವ ಶತ್ರುಗಳಿಗೂ ನಿಲುಕದ, ಯಾವ ತಂತ್ರಗಳಿಗೂ ಸಿಲುಕದ, ಯಾವ ಆಯುಧ ಗಳಿಗೂ ಜಗ್ಗದ, ಯಾವ ಪ್ರಹಾರಗಳಿಗೂ ಬಗ್ಗದ ಭದ್ರ ಕವಚವದು. ಕೋಟೆಯ ಸುತ್ತಲೂ ಪಾತಾಳದಾಳದ, ಅತ್ತಿತ್ತ ಹಾರಲಾಗದ ಅಗಲದ ಕಂದಕ ವಿತ್ತು. ಅಲ್ಲಿ ಹರಿವ, ಕೊರೆವ ತಂಪಿನ ಜಲ; ಆ ಜಲದೊಳಗೆ ಹೊಂಚು ಹಾಕಿರುವ ಹಸಿದ ಮೊಸಳೆಗಳು. ಅಭೇದ್ಯತೆಯಲ್ಲಿ ಯಾವ ವಜ್ರಕವಚಕ್ಕೆ ತಾನೇನು ಕಡಿಮೆ ಎಂಬಂತಿರುವ ಮಹಾದ್ವಾರ ಮತ್ತು ಅದಕ್ಕೆ ತಕ್ಕ ದೃಢತೆಯ ಅಗುಳಿಗಳು; ಇವೆಲ್ಲವನ್ನೂ ದಾಟಿ ಒಳಬಂದರೆ ಅಯೋಧ್ಯೆಯ ಪ್ರಚಂಡ ಸೇನೆಯೆಂಬ ಪ್ರಳಯಾಗ್ನಿಯನ್ನು ಇದಿರಿಸಬೇಕಾಗುತ್ತಿತ್ತು!

ಏನಿದ್ದರೇನು ಸಂತೋಷವೇ ಇಲ್ಲದಿದ್ದರೆ? ಅಯೋಧ್ಯೆಯ ಪ್ರತಿಯೊಂದೂ ಪ್ರಜೆಯಲ್ಲಿಯೂ ಇದ್ದೇ ಇದ್ದ ಮತ್ತು ಧಾರಾಳವಾಗಿದ್ದ ಒಂದೇ ಒಂದು ಸಂಗತಿಯೆಂದರೆ ಸಂತೋಷ. ಆ ನಾಡನ್ನು ಕಟ್ಟಿದವರಿಗೆ ಮತ್ತು ನಾಡಿನ ಚುಕ್ಕಾಣಿಯನ್ನು ಹಿಡಿದವರಿಗೆ ಪ್ರಜೆಗಳನ್ನು ಸುಖವಾಗಿಡುವ ಕಲೆಯು ಚೆನ್ನಾಗಿಯೇ ಸಿದ್ಧಿಸಿತ್ತು. ಆದುದರಿಂದಲೇ ಅಯೋಧ್ಯೆಯೆಂದರೆ ಅದು ಆನಂದದ ಊರಾಗಿತ್ತು.

ಅಲ್ಲಿ ಪ್ರತಿನಿತ್ಯ ಅಭ್ಯಂಜನ ಸ್ನಾನವನ್ನು ಮಾಡದ, ಅನುಲೇಪನಗಳನ್ನು ಧರಿಸದ, ಸುಗಂಧ ದ್ರವ್ಯಗಳನ್ನು ಪೂಸದ ಮೈಯಿಲ್ಲ; ಮೃಷ್ಟಾನ್ನವುಣ್ಣದ ಬಾಯಿಲ್ಲ; ಕಂಕಣವಿಲ್ಲದ ಕರವಿಲ್ಲ; ಕುಂಡಲವಿಲ್ಲದ ಕಿವಿಯಿಲ್ಲ; ತೋಳಬಂದಿಯಿಲ್ಲದ ತೋಳಿಲ್ಲ; ಹಾರವಿಲ್ಲದ ಕೊರಳಿಲ್ಲ; ಉರೋಭೂಷಣವಿಲ್ಲದ ಉರವಿಲ್ಲ;

ಶಿರೋಭೂಷಣವಿಲ್ಲದ ಶಿರವಿಲ್ಲ
ಸುಖ-ಭೋಗಗಳ ಕೊರತೆ ಇರುವವರಿಲ್ಲ. ಕೈಬಿಚ್ಚಿ ದಾನ ಮಾಡದವರಿಲ್ಲ. ಹೀಗೆ ಬಹಳ ಭೋಗಗಳ, ಬಹಳ ತ್ಯಾಗಗಳ ಅಪರೂಪದ ಊರಾಗಿತ್ತು ಅಯೋಧ್ಯೆ. ಇಷ್ಟೆಲ್ಲ ಸಮೃದ್ಧಿಗಳ ನಡುವೆಯೂ ಅಯೋಧ್ಯೆಯಲ್ಲಿ ಸಂಯಮವಿಲ್ಲದ ವರಿರಲಿಲ್ಲ. ಸಮೃದ್ಧಿಯು ಸಂಯಮವನ್ನು ಕೆಡಿಸುವುದು ಸಾಮಾನ್ಯ ಸಂಗತಿ; ಆದರೆ ಅಯೋಧ್ಯೆಯಲ್ಲಿ ಸಮೃದ್ಧಿಯ ಸಾಗರವು ಸಂಯಮದ ಮೇರೆಯನ್ನು ಮೀರದಿರುವುದು ಪರಮಾಶ್ಚರ್ಯವೇ ಅಲ್ಲವೇ?

ಸ್ತ್ರೀ ಎಂದರೆ ಸಾಕ್ಷಾತ್‌ ಶ್ರೀ. ಆಕೆ ನಲಿದರೆ ದೇವತೆಗಳೆಲ್ಲ ಒಲಿಯುತ್ತಾರೆ. ಆಕೆ ನೊಂದರೆ ಆ ಕುಲಕ್ಕೇ ಅದು ಕೇಡು ಎಂಬುದು ಧರ್ಮಶಾಸನ. ಅಯೋಧ್ಯೆಯು ವರನಾರಿಯರ ಸಮೂಹಗಳಿಂದ ಭೂಷಿತವಾಗಿತ್ತು. ಮಾತ್ರವಲ್ಲ, ಅವರು ಸುಖವಾಗಿರಲು ಬೇಕಾದ ಎಲ್ಲ ಉಪಕ್ರಮಗಳನ್ನೂ ಕೈಗೊಳ್ಳಲಾಗಿತ್ತು.

ಉದಾಹರಣೆಗೆ ಅಯೋಧ್ಯೆಯಲ್ಲಿ ಅಡಿಗಡಿಗೆ ಕೂಟಾಗಾರಗಳಿದ್ದವು. ಕೂಟಾಗಾರವೆಂದರೆ ನಾರಿಯರ ವಿಹಾರಗೃಹ. ಅವರ ಮನಸ್ಸಂತೋಷಕ್ಕೆಂದೇ ಕಲ್ಪಿತವಾದ ಸ್ಥಾನ. ಅಲ್ಲಿ ಮನವು ಮುದಗೊಳ್ಳುವಲ್ಲಿ ಸಲ್ಲುವ ಸಾಧನಗಳು, ವಿಧಾನಗಳು ಮತ್ತು ವಾತಾವರಣವನ್ನು ಕಲ್ಪಿಸಲಾಗುತ್ತಿತ್ತು.

“ಅಂದಿನ ಕಾಲದಲ್ಲಿ ಸ್ತ್ರೀಯರು ಸೌಟಿಗೆ ಸೀಮಿತವಾಗಿರಲಿಲ್ಲ’ ಎಂಬುದಕ್ಕೆ ಇನ್ನೊಂದು ಉದಾಹರಣೆ- ಅಯೋಧ್ಯೆಯಲ್ಲಿ ಸರ್ವತ್ರ ಕಂಡು ಬರುತ್ತಿದ್ದ ನಾರೀ-ನಾಟಕ-ಸಂಘಗಳು. ಇಲ್ಲಿಯೂ ಪುರುಷರಿಗೆ ನಾಟ್ಯ-ನಾಟಕಗಳನ್ನು ನೋಡಲು ಮಾತ್ರವೇ ಅವಕಾಶ. ನಾರಿಯರು ಸಂಘಗಳನ್ನು ಕಟ್ಟಿ, ಭವನಗಳನ್ನು ಹೊಂದಿ, ಯಾವುದೇ ರೀತಿಯ ಕಿರುಕುಳಗಳಿಲ್ಲದೇ ನಾಟ್ಯ- ನಾಟಕಗಳನ್ನು ಅಭ್ಯಾಸ ಮಾಡುವ, ಆಡುವ ಅವಕಾಶವು ನಗರದಲ್ಲಿ ಎಲ್ಲೆಡೆ ಕಲ್ಪಿತವಾಗಿತ್ತು.

ನಮ್ಮ ನಿಮ್ಮ ಪ್ರಶಂಸೆಗಳ ಮಾತು ಹಾಗಿರಲಿ, ದಶರಥನ ರಾಜ್ಯಕ್ಕೆ ದೇವರ ಪ್ರಶಸ್ತಿಯೇ ಸಂದಿತು! “ಧರೆಯೊಳಗೊಂದು ವೈಕುಂಠದ ಖಂಡ’ ಎಂಬಂತಿದ್ದ ದಶರಥನ ರಾಜ್ಯದಲ್ಲಿ ತಾನೇ ಬಂದು ನೆಲೆಸಲು ದೇವರ ದೇವನೇ ನಿಶ್ಚಯಿಸಿದನು. ಅಷ್ಟು ಮಾತ್ರವಲ್ಲ, ದಶರಥನ ಬಳಿಕ ದೊರೆಯಾಗಿ ಆ ರಾಜ್ಯವನ್ನು ತಾನೇ ಮುಂದುವರಿಸಲೂ ಸಂಕಲ್ಪಿಸಿದನು! ಹೀಗೆ ದೇವರೇ ಇಳಿದು ಬಂದ ದಿವ್ಯಭೂಮಿ ಅಯೋಧ್ಯೆ. ಅದು ರಾಮನ ತವರು; ರಾಮಾಯಣದ ಬೆರಗು.

ಟಾಪ್ ನ್ಯೂಸ್

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.