CA Final Exam Result: 14 ಆಳ್ವಾಸ್ ವಿದ್ಯಾರ್ಥಿಗಳು ಉತ್ತೀರ್ಣ
Team Udayavani, Jan 14, 2024, 12:19 AM IST
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 14 ಹಿರಿಯ ವಿದ್ಯಾರ್ಥಿಗಳು 2023ರ ನವೆಂಬರ್‌ನಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 9 ಮಂದಿ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪದವಿ ಹಾಗೂ ಪದವಿ ಪೂರ್ವ ಶಿಕ್ಷಣ ಪಡೆದವರಾಗಿದ್ದಾರೆ.
ನೌಫಲ್, ವಾಣಿಶ್ರೀ, ಧಾಮಿನಿ, ಮೇಘಾ ಆರ್. ಶೆಟ್ಟಿ, ತೇಜಸ್ ಆಚಾರ್ಯ, ಕ್ಲಾರಿಸನ್, ಪ್ರಸಾದ ಭಂಡೇಕರ್, ದರ್ಶನ್ ಜಿ.ಎಚ್., ರಾಷ್ಟ್ರಿತ್ ಜಿ.ಸಿ, ಅವಿನಾಶ್, ಅಂಕಿತಾ ಕಲ್ಲಪ್ಪ, ಸೂಕ್ಷ್ಮ ಎಸ್. ಆಚಾರ್ಯ, ವಿನಾಯಕ್, ಅಭಿಷೇಕ್ ಚೋಟಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.
ವಿಶೇಷ ಸಾಧನೆ
2023 ನವೆಂಬರ್‌ನಲ್ಲಿ ನಡೆದ ಸಿಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜು ವಿದ್ಯಾರ್ಥಿಗಳು ಗ್ರೂಪ್ -01 ಮತ್ತು ಗ್ರೂಪ್-02ನಲ್ಲಿ ಶೇ. 21.43 ಫಲಿತಾಂಶ (ರಾಷ್ಟ್ರೀಯ ಮಟ್ಟದಲ್ಲಿ ಶೇ. 9.73) ದಾಖಲಿಸಿದ್ದಾರೆ.
ಗ್ರೂಪ್ 01 ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಶೇ. 60 ಫಲಿತಾಂಶ (ರಾಷ್ಟ್ರೀಯ ಫಲಿತಾಂಶ ಶೇ. 16.78) ಪಡೆದಿದ್ದಾರೆ. ಗ್ರೂಪ್-02 ವಿಭಾಗದಲ್ಲಿ ಆಳ್ವಾಸ್ ಶೇ. 66.66 ಉತ್ತೀರ್ಣತೆ (ರಾಷ್ಟ್ರ ಮಟ್ಟದಲ್ಲಿ ಶೇ. 19.18) ಸಾಧಿಸಿದೆ. ಹೀಗೆ ಈ ಮೂರೂ ವಿಭಾಗಗಳಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ರಾಷ್ಟ್ರೀಯ ಫಲಿತಾಂಶಕ್ಕಿಂತ ಹೆಚ್ಚಿನ ಸಾಧನೆ ತೋರಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ , ಪ್ರಾಂಶುಪಾಲ ಡಾ| ಕುರಿಯನ್, ಪ.ಪೂ. ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಹಾಗೂ ಸಿಎ ಸಂಯೋಜಕರಾದ ಅನಂತಶಯನ, ಅಪರ್ಣಾ ಕೆ. ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.