![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 14, 2024, 6:10 AM IST
ಧಾರವಾಡ: ರಾಮಮಂದಿರ ನಿರ್ಮಾಣಕ್ಕೆ ಇಲ್ಲಿಂದಲೇ ಸಂಕಲ್ಪ ಮಾಡಿದ್ದರು ಈ ಹಳ್ಳಿ ಗರು. ಕರ ಸೇವೆಗೂ ಕೈ ಮೇಲೆತ್ತಿದ್ದು ಇದೇ ಗ್ರಾಮದ ಯುವ ಕರ ಪಡೆ. ಮಂದಿರ ನಿರ್ಮಾಣಕ್ಕೆ ಈ ಹಳ್ಳಿಗರು ಕೊಟ್ಟಿದ್ದು ಲಕ್ಷ ಲಕ್ಷ ರೂ. ಕಾಣಿಕೆ. ಹೀಗಾಗಿಯೇ ಇಲ್ಲಿವೆ ರಾಮ ಮಂದಿರದ ಚೈತನ್ಯ ಯಾತ್ರೆಯ ಶ್ರೀರಾಮನ ಪರಿವಾರದ ಮೂರ್ತಿಗಳು. ಅಷ್ಟೇಯಲ್ಲ, ಇದು ಬರೀ ರಾಮ ಮಂದಿ ರವಲ್ಲ, ರಾಷ್ಟ್ರ ಭಕ್ತಿ ಜಾಗೃತಿ ಮಾಡುವ ಭಾರತ ಮಾತಾ ಮಂದಿರ.
ಹೌದು. ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮ 1990ರ ದಶಕದಲ್ಲಿ ನಡೆದ ರಾಮ ಜನ್ಮಭೂಮಿ ಹೋರಾಟದ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿತ್ತು. ಹೀಗಾಗಿ ಇಲ್ಲಿ ಶ್ರೀರಾಮ, ಸೀತಾ, ಹನು ಮಾನ ಮತ್ತು ಭಾರತ ಮಾತೆಯ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಭಾರತ ಮಾತಾ ಮಂದಿರವು ಕಳೆದ 35 ವರ್ಷಗಳಿಂದ ಈ ಭಾಗದ ಜನರಲ್ಲಿ ರಾಷ್ಟ್ರೀಯತೆ ಮತ್ತು ದೇಶಾಭಿಮಾನ ಬೆಳೆಸುವ ಜತೆಗೆ ಯುವಕರಿಗೆ ಉತ್ತಮ ಸಂಸ್ಕಾರ ನೀಡುವ ಕೇಂದ್ರವಾಗಿ ರೂಪುಗೊಂಡಿದೆ.
1980ರ ದಶಕದಲ್ಲಿ ದೇಶದ ತುಂಬಾ ರಾಮ ಜನ್ಮಭೂಮಿ ವಿವಾದದ ತಾರಕ ಕೇರಿತ್ತು. ದೇಶದ ವಿವಿಧ ಭಾಗಗಳಲ್ಲಿ ಶ್ರೀರಾಮನ ಪಾದುಕೆಗಳು, ಮೂರ್ತಿ, ರಾಮನ ಚರಿತ್ರೆ ಮೆರವಣಿಗೆ ಮತ್ತು ಜಾಗೃತಿ ಆಂದೋಲನಗಳು ನಡೆದವು. ಇಂಥ ಸಂದರ್ಭದಲ್ಲಿ, ಅಯೋಧ್ಯೆ ಯಿಂದ ಶ್ರೀರಾಮ, ಸೀತೆ ಮತ್ತು ಹನುಮಾನ ದೇವರ ಮೂರ್ತಿಗಳನ್ನು ಜಾಗೃತಿ ರಥಯಾತ್ರೆಯಲ್ಲಿ ಮೆರವಣಿಗೆ ಮಾಡಿ ಕೊಂಡು ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಲಾಯಿತು. ಈ ಕೊನೆಗೆ ಇಲ್ಲಿ ಪ್ರತಿಷ್ಠಾಪನೆಯಾಗಿವೆ.
ರಾಷ್ಟ್ರ ಹೋರಾಟಗಳ ವೇದಿಕೆ: 1990ರ ದಶಕದಲ್ಲಿ ರಾಮಜನ್ಮಭೂಮಿ ಆಂದೋಲನ ತೀವ್ರ ಸ್ವರೂಪ ಪಡೆದುಕೊಂಡಾಗ ಸುತ್ತಲಿನ ಗ್ರಾಮಗಳ ತರುಣರು ಇಲ್ಲಿ ಸೇರಿ ಹೋರಾ ಟದಲ್ಲಿ ಧುಮುಕಿದ್ದರು. ಅಯೋಧ್ಯೆಯಲ್ಲಿ ನಡೆದ ಕರಸೇವೆ ಅಷ್ಟೆಯಲ್ಲ, ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹೋರಾಟ ಮತ್ತು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಅಭಿಯಾನಕ್ಕೂ ದೇವರಹುಬ್ಬಳ್ಳಿಯ ಈ ಭಾರತ ಮಾತಾ ಮಂದಿರ ವೇದಿಕೆಯಾಗಿತ್ತು.
ಏನಿದು ಭಾರತಮಾತಾ ಮಂದಿರ?
ಭಾರತ ಮಾತೆಗೆ ಮಂದಿರ ಕಟ್ಟಿ, ದಿನವೂ ಅವಳನ್ನು ಪೂಜಿ ಸುವ ಸಂಸ್ಕೃತಿಗೆ ನಾಂದಿ ಹಾಡಿದ ಸ್ಥಳ ದೇವರ ಹುಬ್ಬಳ್ಳಿ. 1989ರಲ್ಲಿ ಈ ಮೂರ್ತಿಗಳು ಇಲ್ಲಿ ಪ್ರತಿಷ್ಠಾಪನೆಯಾದಾಗಿನಿಂದ ಈವರೆಗೂ ಗ್ರಾಮದ ಯುವಕರು ಹಬ್ಬ ಹರಿದಿನ ಆಚರಣೆ ಮಾಡುತ್ತಾರೆ. ಉಳಿದ ದಿನಗಳಲ್ಲಿ ತರುಣರು ಇಲ್ಲಿ ಸೇರಿ ದೇಶದ ಆಗು ಹೋಗುಗಳ ಬಗ್ಗೆ ಚಿಂತನೆ ನಡೆಸುತ್ತಾರೆ. ಮಹಾನವಮಿಯಲ್ಲಿ ದೇವಿ ಪಾರಾಯಣ ನಡೆದರೆ, ಗ್ರಾಮದ ಯುವತಿಯರಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಇಲ್ಲಿ ಪಾಠಗಳು ನಡೆಯುತ್ತವೆ. ಅಷ್ಟೇಯಲ್ಲ, ಹಳ್ಳಿಗರ ಆರೋಗ್ಯ ಶಿಬಿರಗಳಿಗೂ, ತಾಯಂದಿರಿಗೆ ಶಿಶುಪಾಲನೆಯ ಪಾಠ, ನವವಧುವರರಿಗೆ ಬದುಕಿನ ಪಾಠಕ್ಕೂ ಈ ಮಂದಿರವೇ ವೇದಿಕೆಯಾಗಿದೆ.
ಶ್ರೀ ಸಿದ್ದಶಿವ ಯೋಗಿಗಳ ನೇತೃತ್ವ
ಗ್ರಾಮದ ಯುವಕರಲ್ಲಿ ರಾಷ್ಟ್ರಾಭಿಮಾನ ಮತ್ತು ಬದುಕಿನ ಸಂಸ್ಕಾರ ನೀಡಿದ್ದು ದೇವರ ಹುಬ್ಬಳ್ಳಿಯ ಸಿದ್ದಾಶ್ರಮದ ಶ್ರೀ ಸಿದ್ದಶಿವಯೋಗಿ ಸ್ವಾಮೀಜಿ ಅವರು. ಪ್ರತೀ ವರ್ಷ ರಾಮನವಮಿಯಲ್ಲಿ ರಾಮಾಯಣ ಹೇಳುವುದಷ್ಟೇ ಅಲ್ಲ, ವರ್ಷ ಪೂರ್ತಿಯಾಗಿ ಸುತ್ತಮುತ್ತಲಿನ ಗ್ರಾಮ ಗಳಿಂದ ಬರುವ ಆಧ್ಯಾತ್ಮಿಕ ಮನಸ್ಸುಗಳಿಗೆ ರಾಮಚರಿತ ಮಾನಸದಂತಹ ಚರಿತ್ರೆಯನ್ನು ಹೇಳುತ್ತ ಬಂದಿದ್ದಾರೆ.
ನಮ್ಮ ಭಾಗ್ಯ
ತರುಣರಲ್ಲಿ ದೇಶಪ್ರೇಮ ಮೂಡಿಸಲು ಗ್ರಾಮಸ್ಥರೇ ಒಗ್ಗಟ್ಟಾಗಿ ಕಲ್ಲುಮಣ್ಣು, ಕಟ್ಟಿಗೆ ತಂದು ತಾವೇ ಇಟ್ಟಿಗೆ ಇಟ್ಟು ಕಟ್ಟಿದ ಮಂದಿರವಿದು. ನಾವೆಲ್ಲ ಅದರ ಸಂಸ್ಕಾರದಲ್ಲೇ ಬೆಳೆದು ಬಂದಿದ್ದೇವೆ. ಊರಿಗೊಂದು ಭಾರತ ಮಾತಾ ಮಂದಿರ ಅಗತ್ಯ.
ಶ್ರೀ ಮುಕ್ತಾನಂದ ಸ್ವಾಮೀಜಿ, ಸಿಂಧೋಗಿ ಮಠ.
ಬಸವರಾಜ್ ಹೊಂಗಲ್
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.