Ram Mandir: ‘ಕೈ’ಗೆ ತಪ್ಪಿದ ಪಾಪ ಪರಿಹಾರ ಅವಕಾಶ: ಅಸ್ಸಾಂ ಸಿಎಂ ಹಿಮಾಂತ ಶರ್ಮಾ ಬಿಸ್ವಾ
ಮಂದಿರ ಉದ್ಘಾಟನೆ ಆಹ್ವಾನ ತಿರಸ್ಕಾರಕ್ಕೆ ಟೀಕೆ - ಅವರಿಗೆ ಬಾಬರನೇ ಮೆಚ್ಚು
Team Udayavani, Jan 14, 2024, 12:30 AM IST
ಕೋಲ್ಕತಾ/ಅಯೋಧ್ಯೆ: ರಾಮ ಮಂದಿರ ಉದ್ಘಾಟನೆಗೆ ಇನ್ನು ಕೆಲವೇ ದಿನಗಳು ಉಳಿದಿರು ವಂತೆಯೇ ಅದರ ಪರ-ವಿರೋಧದ ಮಾತುಗಳು ಬಿರುಸಾಗತೊಡಗಿವೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಆಹ್ವಾನವನ್ನು ತಿರಸ್ಕರಿಸಿ ಕಾಂಗ್ರೆಸ್ ನಾಯಕರು ತಪ್ಪು ಮಾಡಿದ್ದಾರೆ ಎಂದು ಅಸ್ಸಾಂ ಸಿಎಂ ಹಿಮಾಂತ ಶರ್ಮಾ ಬಿಸ್ವಾ ಲಘು ಧಾಟಿಯಲ್ಲಿ ಟೀಕಿಸಿದ್ದಾರೆ.
ಕೋಲ್ಕತಾದಲ್ಲಿ ಶುಕ್ರವಾರ ಮಾತನಾಡಿದ ಅವರು, ಮಂದಿರ ಉದ್ಘಾಟನೆಗೆ ಆಗಮಿಸುವ ಮೂಲಕ ಅವರು ಮಾಡಿದ ಪಾಪಗಳ ಪ್ರಮಾಣ ತಗ್ಗಿಸಲು ಸುವರ್ಣಾವಕಾಶ ಅವರಿಗೆ ಲಭ್ಯವಾಗಿತ್ತು. ಅದಕ್ಕಾಗಿ ಅವರಿಗೆ ವಿಶ್ವ ಹಿಂದೂ ಪರಿಷತ್ ಅವಕಾಶ ನೀಡಿದರೂ, ಕಾಂಗ್ರೆಸ್ ನಾಯಕರು ಅದನ್ನು ಸದುಪಯೋಗಪಡಿಸಲಿಲ್ಲ ಎಂದರು.
ಒಂದು ವೇಳೆ ಕಾಂಗ್ರೆಸ್ ನಾಯಕರು ಆಹ್ವಾನವನ್ನು ಮನ್ನಿಸಿ ಜ.22ರಂದು ನಡೆಯಲಿರುವ ಉದ್ಘಾಟನ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರೂ, ಆ ಸಂದರ್ಭದ ಉತ್ತಮ ಕ್ಷಣ ಗಳನ್ನು ದೇಶ ಕಳೆದುಕೊಳ್ಳ ಬೇಕಾಗುತ್ತಿತ್ತು ಎಂದೂ ಅಸ್ಸಾಂ ಮುಖ್ಯಮಂತ್ರಿ ಹೇಳಿದ್ದಾರೆ.
ಬಾಬರ್ ಅವರ ಆಯ್ಕೆ: ಕಾಂಗ್ರೆಸ್ ನಾಯಕರಿಗೆ ರಾಮ ಮತ್ತು ಬಾಬರ್ ಇವರಿಬ್ಬರ ನಡುವೆ ಆಯ್ಕೆ ಮಾಡಲು ಸೂಚಿಸಿದರೆ, ಆ ಪಕ್ಷದ ನಾಯಕರು ಬಾಬರ್‌ನನ್ನೇ ಆಯ್ಕೆ ಮಾಡುತ್ತಿದ್ದರು ಎಂದರು ಹಿಮಾಂತ ಶರ್ಮ. ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರಿಂದ ತೊಡಗಿ ರಾಹುಲ್ ಗಾಂಧಿ ವರೆಗಿನ ನಾಯಕರು ಅಫ್ಘಾನಿಸ್ಥಾನಕ್ಕೆ ತೆರಳಿ ಬಾಬರ್‌ನ ಸಮಾಧಿಗೆ ಭೇಟಿ ನೀಡಿದ್ದರು ಎಂದು ದೂರಿದ್ದಾರೆ. ರಾಹುಲ್ 2005ರಲ್ಲಿ ಅಫ್ಘಾನಿಸ್ಥಾನಕ್ಕೆ ತೆರಳಿದ್ದ ವೇಳೆ ಬಾಬರ್ ಸಮಾಧಿ ಸ್ಥಳಕ್ಕೆ ತೆರಳಿದ್ದರು ಎಂದರು ಅಸ್ಸಾಂ ಸಿಎಂ.
ಕಂಚಿ ಸ್ವಾಮೀಜಿಗಳಿಂದ 40 ದಿನಗಳ ವಿಶೇಷ ಪೂಜೆ
ರಾಮಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ 40 ದಿನಗಳ ವಿಶೇಷ ಪೂಜೆಯನ್ನು ಕೈಗೊಳ್ಳುವುದಾಗಿ ಕಂಚೀಪುರದ ಕಂಚಿ ಕಾಮಕೋಟಿ ಮಠದ ವಿಜಯೇಂದ್ರ ಸರಸ್ವತೀ ಸ್ವಾಮೀಜಿ ಸ್ವಾಮೀಜಿ ಘೋಷಿ ಸಿದ್ದಾರೆ. ಕಾಶಿಯ ಯಾಗ ಶಾಲೆಯಲ್ಲಿ 40 ದಿನಗಳ ಪೂಜಾ ಕಾರ್ಯಕ್ರಮವನ್ನು ನಡೆಸಲಾಗುವುದು. ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯ ದಿನದಂದೇ ಅಂದರೆ ಜ.22ರಂದೇ ಈ ಪೂಜೆ ಆರಂಭ ವಾಗಲಿದ್ದು, ಲಕ್ಷ್ಮೀ ಕಾಂತ ದೀಕ್ಷಿತ್ ಸೇರಿದಂತೆ ವೇದ ಪಂಡಿತರ ಮಾರ್ಗದರ್ಶನದಲ್ಲಿ 40 ದಿನಗಳ ಕಾಲ ನಡೆಯಲಿದೆ. 100ಕ್ಕೂ ಅಧಿಕ ಪಂಡಿತರು ಯಜ್ಞ ಶಾಲೆಯಲ್ಲಿ ಪೂಜೆ ಮತ್ತು ಹವನ ನೆರವೇರಿಸಲಿದ್ದಾರೆ ಎಂದು ಕಂಚಿ ಕಾಮಕೋಟಿ ಮಠದ ವಿಜಯೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.
ಸಚಿನ್, ಕೊಹ್ಲಿಗೆ ಟ್ರಸ್ಟ್ ಸದಸ್ಯರ ಆಹ್ವಾನ
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರಿಗೆ ರಾಮ ಮಂದಿರ ಉದ್ಘಾಟನೆ ಆಹ್ವಾನ ನೀಡಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರತಿನಿಧಿಗಳು ಶನಿವಾರ ಇಬ್ಬರು ಗಣ್ಯರಿಗೂ ಆಮಂತ್ರಣ ನೀಡಿ, ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿದ್ದಾರೆ.
ರಾಮ ಮಂದಿರ ಎನ್ನುವುದು ದೇಶದ ಹೆಮ್ಮೆಯ ವಿಚಾರ. ಜತೆಗೆ ಇದೊಂದು ಆತ್ಮಗೌರವದ ಪ್ರತೀಕ. ಹೀಗಾಗಿ ಮಂದಿರ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದಲೇ ನೆರವೇರಿಸಬೇಕು.
ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮಾಜಿ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.